ಕರ್ನಾಟಕ

karnataka

ETV Bharat / videos

ಮನೆಯಲ್ಲಿ 'ನಾಗಲೋಕ': 150 ನಾಗರಹಾವಿನ ಮರಿಗಳು ಪತ್ತೆ- ವಿಡಿಯೋ ನೋಡಿ - 150 cobra snakes found

By ETV Bharat Karnataka Team

Published : Jul 11, 2024, 9:28 PM IST

ಖುಷಿನಗರ(ಉತ್ತರಪ್ರದೇಶ): ಇಲ್ಲಿನ ಹಳ್ಳಿಯೊಂದರಲ್ಲಿ 'ನಾಗಲೋಕ'ವೇ ಪತ್ತೆಯಾಗಿದೆ. ಮನೆಯೊಂದರ ಹಿತ್ತಲಲ್ಲಿ 150 ಕ್ಕೂ ಅಧಿಕ ನಾಗರಹಾವಿನ ಮರಿಗಳು ಕಂಡುಬಂದಿವೆ. ಇದನ್ನು ನೋಡಿದ ಜನರು ಅವಾಕ್ಕಾಗಿದ್ದಾರೆ. ಇಷ್ಟೊಂದು ಪ್ರಮಾಣದ ಸರಿಸೃಪಗಳು ಒಂದೇ ಕಡೆ ಸಿಕ್ಕಿದ್ದು ಅಚ್ಚರಿ ತಂದಿದೆ.

ಖುಷಿನಗರ ಜಿಲ್ಲೆಯ ಗಂಗ್ರಾಣಿ ಗ್ರಾಮದ ಮನೆಯೊಂದರಲ್ಲಿ ರಾತ್ರಿ 8 ಗಂಟೆ ಸುಮಾರಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಮನೆಯ ಮಾಲೀಕ ಹೆದರಿ ಅಕ್ಕಪಕ್ಕದ ಜನರಿಗೆ ತಿಳಿಸಿದ್ದಾರೆ. ಆದರೆ, ಜನರು ಹಾವನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಇಬ್ಬರು ಸಿಬ್ಬಂದಿ ಹಾವುಗಳನ್ನು ನೋಡಿ ಹಿಂತಿರುಗಿದ್ದಾರೆ.

ಬಳಿಕ ಮನೆಯೊಳಗೆ ಇದ್ದ ಹಾವುಗಳನ್ನು ಹಿಡಿಯಲು ಉರಗತಜ್ಞ ಸುಶೀಲ್ ಮಿಶ್ರಾ ಎಂಬುವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಅವರು ರಾತ್ರಿ ಬುಧವಾರ ರಾತ್ರಿ 10 ರಿಂದ ಗುರುವಾರ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಾಚರಣೆ ನಡೆಸಿ 150ಕ್ಕೂ ಹೆಚ್ಚು ಹಾವುಗಳನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಸುಮಾರು 16 ಗಂಟೆಗಳ ಕಾಲ ಅವರು ಹಾವುಗಳನ್ನು ಹಿಡಿಯಲು ಶ್ರಮಿಸಿದ್ದಾರೆ. ಇದನ್ನು ನೋಡಲು ಊರ ಜನರೆಲ್ಲ ಸ್ಥಳದಲ್ಲಿ ಸೇರಿದ್ದರು.

ಇಲ್ಲಿಯವರೆಗೆ ಒಂದು ದೊಡ್ಡ ಹಾವನ್ನು ಹಿಡಿಯಲಾಗಿದೆ. ಇನ್ನೊಂದು ತಪ್ಪಿಸಿಕೊಂಡು ಹೋಗಿದೆ. ಸಿಕ್ಕಿರುವ ನಾಗರ ಹಾವುಗಳು ಮರಿಗಳಾಗಿವೆ. ಎಲ್ಲವನ್ನೂ ವಾಲ್ಮೀಕಿನಗರದ ಕಾಡಿಗೆ ಬಿಡುತ್ತೇನೆ ಎಂದು ಉರಗತಜ್ಞ ಸುಶೀಲ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ! ಬಾತ್​ರೂಮ್​ನಲ್ಲಿ 35 ಹಾವಿನ ಮರಿಗಳು ಪ್ರತ್ಯಕ್ಷ- ವಿಡಿಯೋ ನೋಡಿ - Snakes Crawl Out Of Bathroom

ABOUT THE AUTHOR

...view details