ಕರ್ನಾಟಕ

karnataka

ETV Bharat / videos

ಮಾವಿನ ಮರ ಏರಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ‌ ಸೆರೆ: ವಿಡಿಯೋ

By ETV Bharat Karnataka Team

Published : Oct 14, 2024, 3:22 PM IST

ಕಾರವಾರ(ಉತ್ತರ ಕನ್ನಡ): ಮನೆ ಆವರಣದಲ್ಲಿದ್ದ ಮಾವಿನ ಗಿಡ ಏರಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ್ದ ಬೃಹತ್‌ ಗಾತ್ರದ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಕುಮಟಾ ತಾಲೂಕಿನ ಬರ್ಗಿಯಲ್ಲಿ ಇಂದು(ನ.14) ಮುಂಜಾನೆ ಸುಮಾರು‌ 12 ಅಡಿ ಉದ್ದದ ಕಾಳಿಂಗ ಸರ್ಪ ಇಂದಿರಾ ಪಟಗಾರ ಎಂಬುವರ ಮನೆ ಸಮೀಪದ ಮಾವಿನ‌ ಮರ ಏರಿ ಕುಳಿತುಕೊಂಡಿತ್ತು.

ಮರದಲ್ಲಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ ನೋಡಿದ ಮನೆ ಮಂದಿ ಭಯಭೀತರಾಗಿ ಉರಗ ತಜ್ಞ ಅಶೋಕ ನಾಯ್ಕ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಅಶೋಕ ಒಂದು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮರದ ಮೇಲಿದ್ದ ಕಾಳಿಂಗ ಸರ್ಪವನ್ನು ಕೆಳಗಿಳಿಸಿ ಸೆರೆ ಹಿಡಿದಿದ್ದಾರೆ. ನಂತರ ಹಾವನ್ನು ಸಮೀಪದ ಕಾಡಿಗೆ ಕೊಂಡೊಯ್ದು ಬಿಟ್ಟಿದ್ದಾರೆ.

ಸರ್ಕಾರಿ ಶಾಲೆ ಆವರಣದಲ್ಲಿ ಕಾಳಿಂಗ ಸೆರೆ: ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಸರ್ಕಾರಿ ಶಾಲೆಯ ಆವರಣದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಕಾಳಿಂಗ ಕಾಣಿಸಿಕೊಂಡಿತ್ತು. ಉರಗ ತಜ್ಞ ಆರಿಫ್ ಸ್ಥಳಕ್ಕಾಗಮಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿದು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. 

ಇದನ್ನೂ ಓದಿ: ದಾವಣಗೆರೆ: ಕಾಲೇಜಿನ ಅಡುಗೆಮನೆಗೆ ನುಗ್ಗಿ ಪಾತ್ರೆಯಲ್ಲಿ ಅವಿತಿದ್ದ ನಾಗರಹಾವು! - Cobras Rescued

ABOUT THE AUTHOR

...view details