ಕರ್ನಾಟಕ

karnataka

ETV Bharat / technology

ಶೂನ್ಯ ನೆರಳಿನ ದಿನ: ಇಲ್ಲಿ ಇಂದು ನೆರಳು ಕಾಣಿಸದು; ಯಾಕೆ ಗೊತ್ತಾ? - NO SHADOW DAY - NO SHADOW DAY

ಇಂದು ಹೈದರಾಬಾದ್​ನಲ್ಲಿ ಶೂನ್ಯ ನೆರಳು ದಿನ ಉಂಟಾಗಲಿದೆ.

NO SHADOW DAY..
NO SHADOW DAY.. ((image : ETV Bharat))

By ETV Bharat Karnataka Team

Published : May 9, 2024, 3:30 PM IST

ಹೈದರಾಬಾದ್: ಈ ಜಗತ್ತಿನಲ್ಲಿ ಹಾಗೂ ಭೂ ಮಂಡಲದಲ್ಲಿ ಹಲವು ವಿಸ್ಮಯಕಾರಿ ಘಟನೆಗಳು ನಡೆಯುತ್ತಲೇ ಇರುತ್ತವೆ . ಕೆಲವು ಘಟನೆಗಳು ನಂಬಲು ಅಸಾಧ್ಯ ಏನಿಸಿದರೂ ಅದು ಮಾತ್ರ ಸತ್ಯ.

ನಾವು ಬಿಸಿಲಿನಲ್ಲಿರುವಾಗ ಎಲ್ಲಿಗೇ ಹೋದಾಗ, ಕುಳಿತಾಗ ಅಥವಾ ನಡೆಯುವಾಗ ನಮ್ಮ ನೆರಳು ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಆದರೆ ಈ ಗುರುವಾರ ಮಾತ್ರ ಹಾಗಿರುವುದಿಲ್ಲ. ಅಂದು ಮಧ್ಯಾಹ್ನ ನಮ್ಮ ನೆರಳು ಕಣ್ಮರೆಯಾಗುತ್ತದೆ. ಹೀಗೆ ನೆರಳು ಕಾಣದ ದಿನವನ್ನು ಶೂನ್ಯ ನೆರಳು ದಿನ ಎಂದು ಕರೆಯಲಾಗುತ್ತದೆ. ಇಂದಿನ ದಿನ ಮಧ್ಯಾಹ್ನ ಸೂರ್ಯನು ನೇರವಾಗಿ 90 ಡಿಗ್ರಿ ಕೋನದಲ್ಲಿ ತಲೆಯ ಮೇಲಿರುವುದರಿಂದ ನೆರಳು ಕಾಣಿಸುವುದಿಲ್ಲ.

ಹೈದರಾಬಾದ್​ನಲ್ಲಿ ಈ ಶೂನ್ಯ ನೆರಳು ದಿನವು ಗುರುವಾರ ಮಧ್ಯಾಹ್ನ 12.12 ಕ್ಕೆ ಪ್ರಾರಂಭವಾಗಿ ಮತ್ತು ಎರಡು ಅಥವಾ ಮೂರು ನಿಮಿಷಗಳ ಕಾಲ ಮುಂದುವರೆಯಲಿದೆ ಎಂದು ಹೈದರಾಬಾದ್​ನ ಬಿಎಂ ಬಿರ್ಲಾ ವೀಕ್ಷಣಾಲಯದ ಪ್ರತಿನಿಧಿಗಳು ಬುಧವಾರವೇ ಮಾಹಿತಿ ನೀಡಿದ್ದರು. ಮೋಡಗಳು ಒಟ್ಟುಗೂಡಿದರೆ ಮತ್ತು ಮಳೆ ಬಂದರೆ, ಶೂನ್ಯ ನೆರಳನ್ನು ನೋಡುವ ಅವಕಾಶವಿಲ್ಲ ಎಂದು ಅವರು ಹೇಳಿದ್ದರು.

ಆಕಾಂಕ್ಷಿಗಳು ತಮ್ಮ ಫೋಟೋಗಳನ್ನು birlasc@gmail.com ಕಳುಹಿಸಲು ಸೂಚಿಸಲಾಗಿದೆ. ಏತನ್ಮಧ್ಯೆ, ಪ್ಲಾನೆಟರಿ ಅಸೋಸಿಯೇಷನ್ ಆಫ್ ಇಂಡಿಯಾದ ಹೈದರಾಬಾದ್ ಅಧ್ಯಕ್ಷ ರಘುನಂದನ್ ಅವರು 'ಶೂನ್ಯ ನೆರಳು' ಅನ್ನು ಸೂಕ್ತ ಸಮಯದಲ್ಲಿ ಮಧ್ಯಾಹ್ನ ಎರಡು ಅಥವಾ ಮೂರು ದಿನಗಳವರೆಗೆ ನೋಡಬಹುದು ಎಂದು ಹೇಳಿದರು. ಹೈದರಾಬಾದ್​ನ ಸುಂದರಯ್ಯ ವಿಜ್ಞಾನ ಕೇಂದ್ರದಲ್ಲಿ, ಶೂನ್ಯದ ನೆರಳು ಹೇಗೆ ಉಂಟಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿವರಿಸಲಾಯಿತು.

ಏನಿದು ಶೂನ್ಯ ನೆರಳು? ; ಉಷ್ಣವಲಯದ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತಿರುತ್ತದೆ. ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದಾಗ ಈ ದಿನ ಉಂಟಾಗುತ್ತದೆ. ಈ ಕಾರಣದಿಂದಲೇ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ ಅಂದರೆ ನೇರವಾಗಿ ಭೂಮಿ ಮೇಲೆ ಬಂದಾಗ ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಹಾಗೂ ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಹೀಗಾಗಿ ವರ್ಷದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಸಂಭವಿಸುತ್ತದೆ. ಈ ವೇಳೆಯಲ್ಲಿ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಕೂಡ ಕಾಣಿಸುವುದಿಲ್ಲ. ಇದನ್ನೇ ಶೂನ್ಯ ನೆರಳು ಎಂದು ಕರೆಯಲಾಗುತ್ತದೆ

ಇದನ್ನೂ ಓದಿ : ಅತ್ಯಧಿಕ ಮಾರಾಟವಾದ ಸ್ಮಾರ್ಟ್​ಫೋನ್ ಆಗಿ ಹೊರಹೊಮ್ಮಿದ ಆ್ಯಪಲ್​ iPhone 15 Pro Max - APPLES IPHONE

For All Latest Updates

ABOUT THE AUTHOR

...view details