Yearender 2024:ತಂತ್ರಜ್ಞಾನ ಬೆಳದಂತೆ ಜನರು ಸಹ ಅಪ್ಡೇಟ್ ಆಗುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮೊಬೈಲ್ ತಯಾರಿಕಾ ಕಂಪನಿಗಳು ಸಹ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊಬೈಲ್ಗಳಲ್ಲಿ ಅನೇಕ ಹೊಸ ಹೊಸ ವೈಶಿಷ್ಟ್ಯಗಳು ಪರಿಚಯಿಸುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ ಅನೇಕ ಬ್ರ್ಯಾಂಡೆಡ್ ಕಂಪನಿಗಳು. ಅದರಲ್ಲಿ ಎಐ ಮಾದರಿಗಳ ಸ್ಮಾರ್ಟ್‌ಫೋನ್‌ಗಳು ಎಲ್ಲಿಲ್ಲದ ಬೇಡಿಕೆ ಹೆಚ್ಚು. ಈ ವರ್ಷ ಮಾರುಕಟ್ಟೆಗೆ ಲಗ್ಗೆಯಿಟ್ಟ ಎಐ ಮಾದರಿಗಳ ಸ್ಮಾರ್ಟ್ಗಳು ಯಾವುವು? ಅದರ, ವಿಶೇಷತೆಗಳು ಮತ್ತು ಬೆಲೆಗಳ ಬಗ್ಗೆ ತಿಳಿದುಕೊಳ್ಳೊಣ.
ಗೂಗಲ್‌ನಿಂದ ಆಪಲ್‌ವರೆಗೆ ಮತ್ತು ಮಾರ್ಕ್ ಜುಕರ್‌ಬರ್ಗ್‌ನಿಂದ ಎಲೋನ್ ಮಸ್ಕ್‌ವರೆಗೆ ಎಲ್ಲರೂ ಎಐ ಕುರಿತೇ ಚರ್ಚಿಸುತ್ತಿದ್ದಾರೆ. ಸ್ಯಾಮ್‌ಸಂಗ್ ಮತ್ತು ಆಪಲ್‌ನಂತಹ ಕಂಪನಿಗಳು ತಮ್ಮ ಫೋನ್‌ಗಳಲ್ಲಿ ಎಐಗೆ ಬಹಳ ಒತ್ತು ನೀಡುತ್ತಿವೆ. ಈಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಪ್ರತಿಯೊಂದು ಹೊಸ ಸ್ಮಾರ್ಟ್‌ಫೋನ್‌ಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಷಿನ್ ಲರ್ನಿಂಗ್ ಮತ್ತು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್ ಸೇರಿದಂತೆ ಅನೇಕ ರೀತಿಯ ಫೀಚರ್ಗಳನ್ನು ಪರಿಚಯಿಸುತ್ತಿದ್ದಾರೆ. ಅಷ್ಟೇ ಅಲ್ಲ ವಿವಿಧ ಪ್ರಮುಖ ಮಾದರಿಗಳು AI - ವರ್ಧಿತ ಕ್ಯಾಮೆರಾಗಳು ಮತ್ತು ಇಮೇಜ್ - ಎಡಿಟಿಂಗ್ ವೈಶಿಷ್ಟ್ಯಗಳು ಸಹ ಲಭ್ಯ ಇವೆ. ಇಂತಹ ಹಲವು ಹತ್ತಾರು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಖರೀದಿಗೆ ಲಭ್ಯವಿದೆ.
Flagship Smartphones with AI features
Google Pixel 9 series:ವಿಶ್ವದಾದ್ಯಂತ ಗೂಗಲ್ನ ಪಿಕ್ಸೆಲ್ 9 ಸೀರಿಸ್ ಸ್ಮಾರ್ಟ್‌ಫೋನ್‌ಗಳು ಸಂಚಲನ ಮೂಡಿಸಿರುವುದು ಗೊತ್ತಿರುವ ಸಂಗತಿ. ಗೂಗಲ್ ಈ ಫೋನ್‌ಗಳನ್ನು ಎಐ ವೈಶಿಷ್ಟ್ಯದೊಂದಿಗೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಿಡುಗಡೆ ಮಾಡಿದೆ. ಈ ಫೋನ್‌ಗಳು ಭಾರತದಲ್ಲಿಯೂ ಲಭ್ಯವಿದೆ. ಗೂಗಲ್ ಈ ಸಿರೀಸ್ನಲ್ಲಿ Google Pixel 9, Pixel 9 Pro, Pixel 9 Pro Fold ಮತ್ತು Pixel 9 Pro XL ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ, ಈ ಫೋನ್‌ನ ಬಳಕೆದಾರರು ಏಳು ವರ್ಷಗಳವರೆಗೆ ಆಂಡ್ರಾಯ್ಡ್ ಅಪ್ಡೇಟ್ಗಳನ್ನು ಪಡೆಯುತ್ತಾರೆ.
ಗೂಗಲ್ ಪಿಕ್ಸೆಲ್ 9 ಸೀರಿಸ್ ವೈಶಿಷ್ಟ್ಯಗಳು:ಗೂಗಲ್ ತನ್ನ ಫೋನ್‌ಗಳನ್ನು ಉತ್ತಮ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ. ಇದರಲ್ಲಿ, ಬಳಕೆದಾರರು ಟೆನ್ಸರ್ ಜಿ4 ಪ್ರೊಸೆಸರ್, ಸೆಕ್ಯೂರಿಟಿಗಾಗಿ ಟೈಟಾನ್ ಎಂ2 ಚಿಪ್ಸೆಟ್, ಪವರ್ಫುಲ್ ಜೆಮಿನಿ ಎಐ, ಜೆಮಿನಿ ನ್ಯಾನೋ ಮಲ್ಟಿ ಮಾಡೆಲ್ ಮತ್ತು ಸ್ಯಾಟಲೈಟ್ ಎಸ್‌ಒಎಸ್ ಅನುಭವ ಪಡೆಯುತ್ತಾರೆ. ಈ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಕಂಪನಿಯು ಹೊಸ ಪಿಕ್ಸೆಲ್ ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಿದೆ.
Google Pixel 9 ಸೀರಿಸ್ ವೈಶಿಷ್ಟ್ಯಗಳು:
- ಡಿಸ್ಪ್ಲೇ: 6.3-ಇಂಚಿನ LTOP OLED
- ಬ್ಯಾಟರಿ: 4,700mAh
- ಸೆಕ್ಯೂರಿಟಿ ಚಿಪ್ಸೆಟ್: ಟೈಟಾನ್ M2
- ರಿಯರ್ ಕ್ಯಾಮೆರಾ: 50MP
- ಅಲ್ಟ್ರಾವೈಡ್ ಕ್ಯಾಮೆರಾ: 48MP
- ಫ್ರಂಟ್ ಕ್ಯಾಮೆರಾ: 42MP
- ವಿಶೇಷತೆ: ಡಸ್ಟ್ ಮತ್ತು ವಾಟರ್ ರೆಸಿಸ್ಟನ್ಸಿ
- ಆಂಡ್ರಾಯ್ಡ್14 ಆಪರೇಟಿಂಗ್ ಸಿಸ್ಟಮ್
- ಬೆಲೆ: ಆರಂಭಿಕ ಬೆಲೆ ರೂ. 79,999.
ಐಫೋನ್ 16 ಸೀರಿಸ್:ಆಪಲ್ ತನ್ನ ಮೆಗಾ ಈವೆಂಟ್‌ನಲ್ಲಿ 9 ಸೆಪ್ಟೆಂಬರ್ 2024 ರಂದು ವಿಶ್ವಾದ್ಯಂತ ಇತ್ತೀಚಿನ ಐಫೋನ್ 16 ಸೀರಿಸ್ ಅನ್ನು ಪರಿಚಯಿಸಿರುವುದು ಗೊತ್ತಿರುವ ಸಂಗತಿ. ಕಂಪನಿಯು ಈ ಸೀರಿಸ್ನಲ್ಲಿ 4 ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಐಫೋನ್ 16 ಪ್ಲಸ್ ಡಿಸ್ಪ್ಲೇ 6.7 ಇಂಚು ಇದೆ. ಸೂಪರ್ ರೆಟಿನಾ XDR OLED ಡಿಸ್ಪ್ಲೇ ಹೊಂದಿದೆ. ಹಿಂಭಾಗದಲ್ಲಿ 48 MP ವೈಡ್ - ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 MP ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ನಿಯಂತ್ರಣ ಬಟನ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ಕ್ಲಿಕ್ಕಿಸಲು ಸುಧಾರಿತ ವೈಶಿಷ್ಟ್ಯವಿದೆ.
ಐಫೋನ್ 16 ವೈಶಿಷ್ಟ್ಯಗಳು:ಈ ಇತ್ತೀಚಿನ ಐಫೋನ್‌ನ ವೈಶಿಷ್ಟ್ಯಗಳ ಕುರಿತು ನಾವು ಮಾತನಾಡೋದಾದರೆ, ಕಂಪನಿಯು ಐಫೋನ್ 16 ನಲ್ಲಿ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ನೀಡಿದೆ. ಇದಲ್ಲದೇ, ಈ ಫೋನ್ A18 ಪ್ರೊಸೆಸರ್ ಅನ್ನು ಹೊಂದಿದೆ. ಈ ಚಿಪ್‌ಸೆಟ್ A16 ಬಯೋನಿಕ್‌ಗಿಂತ 30 ಪ್ರತಿಶತ ವೇಗವಾಗಿದೆ ಎಂದು ಆಪಲ್ ಹೇಳಿಕೊಂಡಿದೆ. iOS 18 ನೊಂದಿಗೆ ಹೊಸ ಮಾದರಿಗಳು ಎಐ ವೈಶಿಷ್ಟ್ಯಗಳೊಂದಿಗೆ ಆಪಲ್ ಇಂಟೆಲಿಜೆನ್ಸ್ ಅನ್ನು ಹೊಂದಿವೆ. ಸದ್ಯ ಎಲ್ಲ ಐಫೋನ್ಗಳು 18.2 ಐಒಎಸ್ಗಳನ್ನು ಅಪ್ಡೇಟ್ ನೀಡಲಾಗಿದೆ
ಐಫೋನ್ 16 ಸೀರಿಸ್ ವೈಶಿಷ್ಟ್ಯಗಳು:
- Apple iPhone 16 ಸಿರೀಸ್ನಲ್ಲಿ ಹತ್ತು ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಹೊಸ ಸೀರಿಸ್ನ ಫೋನ್‌ಗಳು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿವೆ. ಇದು ಗ್ಲಾಸ್ ಬ್ಯಾಕ್ ಫೋನ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಎಂದು ಆ್ಯಪಲ್ ತಿಳಿಸಿದೆ.
- ಐಫೋನ್ 16 ಡಿಸ್ಪ್ಲೇ 6.1 ಇಂಚುಗಳಷ್ಟು ಉದ್ದವಿದೆ. ಇದನ್ನು ವೆನಿಲ್ಲಾ ರೂಪಾಂತರದೊಂದಿಗೆ ವಿನ್ಯಾಸಗೊಳಿಸಲಾಗಿದೆ. iOS 18ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಬ್ರೈಟ್ನೆಸ್ ಅನ್ನು 2000 ನಿಟ್‌ಗಳವರೆಗೆ ಹೆಚ್ಚಿಸಬಹುದು.
- ಐಫೋನ್ 16 ಪ್ಲಸ್ ಡಿಸ್ಪ್ಲೇ 6.7 ಇಂಚು ಉದ್ದವಾಗಿದೆ. ಹಿಂಭಾಗದಲ್ಲಿ 48 MP ವೈಡ್ - ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 MP ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ಕಂಟ್ರೋಲ್ ಬಟನ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ತೆಗೆಯಲು ಸುಧಾರಿತ ವೈಶಿಷ್ಟ್ಯವಿದೆ.
- ಬೆಲೆಗಳ ವಿವರ: ಐಫೋನ್ 16 ಸೀರಿಸ್ನ ಆರಂಭಿಕ ಬೆಲೆ ರೂ.79,900. ಐಫೋನ್ 16ನಲ್ಲಿ 'AAA ಗೇಮ್ಸ್' ಆಡುವ ಅವಕಾಶ ಒದಗಿಸಲಾಗಿದೆ. ಮೊದಲು ಈ ವೈಶಿಷ್ಟ್ಯ ಪ್ರೊ ಮಾದರಿಗಳಲ್ಲಿ ಮಾತ್ರ ಸಿಗುತ್ತಿತ್ತು.
Samsung Galaxy Models: ಎಐ ಫೀಚರ್ವುಳ್ಳ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಮಾಡೆಲ್ಗಳು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮಾಡೆಲ್ಗಳಲ್ಲೊಂದು.Samsung Galaxy S24 Ultra, Samsung Galaxy S24 Plus ಮತ್ತು Samsung Galaxy S24 5Gಸ್ಮಾರ್ಟ್ಫೊನ್ಗಳಲ್ಲಿ ಅನೇಕ ವೈಶಿಷ್ಟ್ಯಗಗಳು ಲಭ್ಯಗಳಿವೆ. ಇದರಲ್ಲಿ ಸರ್ಕಲ್ ಟು ಸರ್ಚ್, ಲೈವ್ ಟ್ರಾನ್ಸ್‌ಲೇಟ್, ನೋಟ್ ಅಸಿಸ್ಟ್, ಜನರೇಟಿವ್ ಎಡಿಟ್, ಚಾಟ್ ಅಸಿಸ್ಟ್, ಸೂಪರ್ ಎಚ್‌ಡಿಆರ್ ಮತ್ತು ಫೋಟೋ ಅಸಿಸ್ಟ್ ಒಳಗೊಂಡಿದೆ.
ಗೂಗಲ್ನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಸರ್ಕಲ್ ಟು ಸರ್ಚ್ ಗೂಗಲ್ನ ಸ್ವಂತ ಸಾಧನಗಳಲ್ಲಿ ಪ್ರಾರಂಭಿಸುವ ಮೊದಲು ಗ್ಯಾಲೆಕ್ಸಿ ಎಸ್24 ಸೀರಿಸ್ನಲ್ಲಿ ಪರಿಚಯಿಸಲಾಯಿತು. ಈ ಫೀಚರ್ ಆ್ಯಕ್ಟಿವೇಟ್ ಮಾಡಲು ಕೆಲ ಕ್ಷಣದವರೆಗೆ ಹೋಮ್ ಬಟನ್ ಒತ್ತಿ ಹಿಡಿದುಕೊಳ್ಳಬೇಕು. ಇದು ಬಳಕೆದಾರರಿಗೆ ಫೋನ್‌ನ ಸ್ಕ್ರೀನ್ನ ಮೇಲೆ ಕಾಣುತ್ತದೆ. ನೀವು ಅದನ್ನು ಬಳಸಿ ತಮಗೆ ಬೇಕಾದ ಮಾಹಿತಿಗಳನ್ನು ಕೇಳಬಹುದು. ಈ ಫೀಚರ್ ಯಾವುದೇ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಸೆಟ್ ಆಗುತ್ತದೆ. ಅಷ್ಟೇ ಅಲ್ಲ ಸಾಮಾನ್ಯವಾಗಿ ತಕ್ಷಣದ ಫಲಿತಾಂಶಗಳು ಒದಗಿಸುತ್ತದೆ. ಹೆಚ್ಚುವರಿಯಾಗಿ ಹೆಚ್ಚಿನ ಒಳನೋಟಗಳಿಗಾಗಿ ಟೆಕ್ಸ್ಟ್ ಸೇರಿಸುವ ಮೂಲಕ ನಿಮ್ಮ ಇಮೇಜ್ ಸರ್ಚ್ಸ್ ನೀವು ಹೆಚ್ಚಿಸಬಹುದಾಗಿದೆ. ಸ್ಯಾಮ್‌ಸಂಗ್ ತನ್ನ ಹೊಸ ಎಐ ಚಾಲಿತ ವೈಶಿಷ್ಟ್ಯಗಳನ್ನು ಕಾರ್ಯಗತಗೊಳಿಸುವಾಗ ಬಳಕೆದಾರರ ಗೌಪ್ಯತೆಗೆ ಆದ್ಯತೆ ನೀಡಿದೆ. ಹೀಗೆ ಹತ್ತಾರು ವೈಶಿಷ್ಟ್ಯಗಳು ಇದರಲ್ಲಿ ಲಭ್ಯ ಇವೆ..
Samsung Galaxy S24 Ultra ವೈಶಿಷ್ಟ್ಯಗಳು:
- ಡಿಸ್ಪ್ಲೇ- 6.78 ಇಂಚಿನ ಡೈನಾಮಿಕ್ LTPO AMOLED
- ಫ್ರಂಟ್ ಕ್ಯಾಮೆರಾ- 12MP
- ಚಿಪ್‌ಸೆಟ್- ಸ್ನಾಪ್‌ಡ್ರಾಗನ್ 8 ಜನ್ 3
- ಬ್ಯಾಟರಿ-5000mAh
- RAM 12GB/ 1TB ಸ್ಟೋರೇಜ್
- ಚಾರ್ಜಿಂಗ್-45W
- ರಿಯರ್ ಕ್ಯಾಮೆರಾ- 200MP+50MP+12MP
- ಒಎಸ್- ಆಂಡ್ರಾಯ್ಡ್ 14
- ಬೆಲೆ: ರೂ.96,900 ರಿಂದ ಪ್ರಾರಂಭ
Xiaomi AI Smartphones:ಎಐ ವೈಶಿಷ್ಟ್ಯಗಳೊಂದಿಗೆ ಮತ್ತೊಂದು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾತನಾಡೋದಾದರೆ Xiaomi ಕಂಪನಿ ಉತ್ತಮವಾಗಿದೆ. Xiaomi 12 Pro, Xiaomi13 Pro, Xiaomi 14 ಮತ್ತು Xiaomi 14 Ultraಮಾಡೆಲ್ಗಳು ಈ ಸಾಧನದಲ್ಲಿ ಅನೇಕ ಎಐ ವೈಶಿಷ್ಟ್ಯಗಳು ಲಭ್ಯ ಇವೆ. ಎಐ ಆಲ್ಬಮ್ ಸರ್ಚ್, ಎಐ ಭಾವಚಿತ್ರಗಳು ಮತ್ತು ಎಐ ವಿಸ್ತರಣೆಯೊಂದಿಗೆ ಬರುತ್ತದೆ. ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳು ಒಳಗೊಂಡಿದೆ. ವಿಡಿಯೋ ಕಾಲ್ಗಳು, ರಿಯಲ್ ಟೈಂ ಸಬ್ಟೈಟಲ್ಗಳು, ಇಂಟೆಲಿಜೆಂಟ್ ಫೋಟೋ ಸರ್ಚ್ ಮೂಲಕ ನೈಸರ್ಗಿಕ ಲ್ಯಾಂಗ್ವೆಜ್ ಪ್ರೊಸೆಸ್ಸಿಂಗ್ ಮತ್ತು ಫೋಟೋ ವರ್ಧನೆಗಾಗಿ ಎಐ ವಿಸ್ತರಣೆಯೊಂದಿಗೆ ಸಜ್ಜುಗೊಂಡ ಎಐ ಎಡಿಟರ್‌ನಂತಹ ಎಐ ಕಾರ್ಯನಿರ್ವಹಣೆಗಳನ್ನು ಇದರಲ್ಲಿ ಕಾಣಬಹುದಾಗಿದೆ.
ಇದರಲ್ಲಿರುವ ವೈಶಿಷ್ಟ್ಯಗಳಿವು:
- ಡಿಸ್‌ಪ್ಲೇ- 6.73-ಇಂಚಿನ ಡೈನಾಮಿಕ್ LTPO AMOLED
- ಫ್ರಂಟ್ ಕ್ಯಾಮೆರಾ- 32MP
- ಚಿಪ್‌ಸೆಟ್- ಸ್ನಾಪ್‌ಡ್ರಾಗನ್ 8 ಜನ್ 3
- ಬ್ಯಾಟರಿ-5000mAh
- RAM+ಸ್ಟೋರೇಜ್- 16GB/ 1TB
- ಚಾರ್ಜಿಂಗ್-90W
- ರಿಯರ್ ಕ್ಯಾಮೆರಾ - 50MP+50MP+50MP+50MP
- ಒಎಸ್- ಆಂಡ್ರಾಯ್ಡ್ 14
- ಬೆಲೆ: ರೂ.40,999 ರಿಂದ ಪ್ರಾರಂಭ
Motorola Razr 50 Ultra:ಮೊಟೊ ರಾಜ್ರ್ 50 ಅಲ್ಟ್ರಾ ಸ್ಮಾರ್ಟ್ಫೋನ್ಗಳಲ್ಲಿ ಎಐ ವೈಶಿಷ್ಟ್ಯಗಳನ್ನು ಕಾಣಬಹುದು. ಮ್ಯಾಜಿಕ್ ಕ್ಯಾನ್ವಾಸ್, ಗೂಗಲ್ ಜೆಮಿನಿ, ಮ್ಯಾಜಿಕ್ ಎಡಿಟರ್, ಮ್ಯಾಜಿಕ್ ಎರೇಸರ್, ಫೋಟೋ ಅನ್ಬ್ಲರ್, ಎಐ ಆಕ್ಷನ್ ಶಾಟ್, ಎಐ ಅಡಾಪ್ಟಿವ್ ಸ್ಟೆಬಿಲೈಸೇಶನ್, ಇಂಟೆಲಿಜೆಂಟ್ ಆಟೋ ಫೋಕಸ್ ಟ್ರ್ಯಾಕಿಂಗ್, AI ಫೋಟೋ ವರ್ಧನೆ ಜೊತೆ ಬರುತ್ತದೆ. ಪ್ರಚಲಿತದಲ್ಲಿರುವ "ಎಐ" ಬ್ರ್ಯಾಂಡಿಂಗ್ ಜೊತೆಗೆ ಮೊಟೊರಾಲನ ಎಐ ಕಾರ್ಯಚಟುವಟಿಕೆಗಳು ಸ್ಪಷ್ಟವಾದ ಪ್ರಯೋಜನಗಳನ್ನು ಒದಗಿಸುತ್ತವೆ.