ನವದೆಹಲಿ: ಭಾರತದಲ್ಲಿ ಮಹಿಳೆಯರು ಮೊಬೈಲ್ ಇಂಟರ್ನೆಟ್ ಬಳಕೆ ದರ ಶೇ 37ರಷ್ಟು ಏರಿಕೆ ಕಂಡಿದೆ. ಈ ನಡುವೆ ಪುರುಷರ ಸಂಖ್ಯೆ ಸ್ಥಿರವಾಗಿದೆ. ಮಹಿಳೆಯರು ಮತ್ತು ಪುರುಷರ ನಡುವಿನ ಅಂತರ ಶೇ 30 ರಿಂದ 40ರಷ್ಟು ಕಡಿಮೆ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.
2023ರಲ್ಲಿ ಜಾಗತಿಕವಾಗಿ 120 ಮಿಲಿಯನ್ ಮಹಿಳೆಯರು ಮೊಬೈಲ್ ಮೂಲಕ ಇಂಟರ್ನೆಟ್ ಸಂಪರ್ಕಕ್ಕೆ ಒಳಗಾಗಿದ್ದಾರೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿನ ಜನರು ಈ ಮೊದಲಿಗಿಂತ ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ ಎಂದು ಜಾಗತಿಕ ಸಂಘಟನೆಯಾಗಿರುವ ಜಿಎಸ್ಎಂಎ ತಿಳಿಸಿದೆ. ಆದಾಗ್ಯೂ, 785 ಮಿಲಿಯನ್ ಮಹಿಳೆಯರು ಈ ಇಂಟರ್ನೆಟ್ ಸಂಪರ್ಕದಿಂದ ದೂರ ಉಳಿದಿದ್ದಾರೆ. ದಕ್ಷಿಣ ಏಷ್ಯಾ ಮತ್ತು ಉಪ ಸಹರಾನ್ ಆಫ್ರಿಕನ್ ದೇಶಗಳಲ್ಲಿ ಶೇ 60ರಷ್ಟು ಮಂದಿ ಸಂಪರ್ಕಿತರಾಗಿಲ್ಲ ಎಂದು ಜಿಎಸ್ಎಂಎಯ ಮೊಬೈಲ್ ಜೆಂಡರ್ ಗ್ಯಾಪ್ ರಿಪೋರ್ಟ್ 2024ರ ವರದಿಯಲ್ಲಿ ವಿವರಿಸಲಾಗಿದೆ.
ಮೊಬೈಲ್ ಇಂಟರ್ನೆಟ್ ಲಿಂಗ ಅಂತರವೂ ಭರವಸೆದಾಯಕವಾಗಿದೆ. ಆದರೆ, ಆವೇಗವನ್ನು ಉಳಿಸಿಕೊಳ್ಳುವುದು ದುರ್ಬಲವಾಗಿರುತ್ತದೆ. ಮಹಿಳೆಯರು ಇಂಟರ್ನೆಟ್ ಬಳಕೆಗೆ ಮೊಬೈಲ್ಗಳು ಕೈಗೆಟುಕುವಿಕೆ, ಅರಿವು ಮತ್ತು ಡಿಜಿಟಲ್ ಕೌಶಲ್ಯಗಳು ಸೇರಿದಂತೆ ಪ್ರಮುಖ ಅಡೆತಡೆಗಳನ್ನು ಪರಿಹರಿಸಲು ನಾವು ಉದ್ಯಮ, ನೀತಿ ನಿರೂಪಕರು ಮತ್ತು ಇತರ ಸಂಬಂಧಿತ ಪಾಲುದಾರರೊಂದಿಗೆ ಸಹಕರಿಸುತ್ತಿದ್ದೇವೆ ಎಂದು ಜಿಎಸ್ಎಂಎ ತಿಳಿಸಿದೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಮೊಬೈಲ್ ಒಡೆತನ ಮತ್ತು ಬಳಕೆಯ ನಡುವಿನ ಅಂತರ ಕಡಿಮೆಯಾಗುತ್ತಿದೆ. ಇದರಿಂದಾಗಿ ಕಳೆದ 8 ವರ್ಷದಲ್ಲಿ ಮೊಬೈಲ್ ಉದ್ಯಮ 230 ಬಿಲಿಯನ್ ಡಾಲರ್ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
2020ರ ಬಳಿಕ ಇದೇ ಮೊದಲ ಬಾರಿಗೆ ಮೊಬೈಲ್ ಬಳಕೆ ನಡುವಿನ ಅಂತರ ಕಡಿಮೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಮೊಬೈಲ್ ಹೊಂದುತ್ತಿದ್ದಾರೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಮಹಿಳೆಯರು ಮೊಬೈಲ್ ಇಂಟರ್ನೆಟ್ ಬಳಕೆಯಲ್ಲಿ ಪುರುಷರಿಗಿಂತ ಕೇವಲ ಶೇ 15ರಷ್ಟು ಕಡಿಮೆ ಇದ್ದಾರೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ 1.4 ಬಿಲಿಯನ್ ಅಂದರೆ ಶೇ 60ರಷ್ಟು ಮಹಿಳೆಯರು ಸ್ಮಾರ್ಟ್ಫೋನ್ ಹೊಂದಿದ್ದಾರೆ. ಶೇ 40ರಷ್ಟು ಮಹಿಳೆಯರು ಇನ್ನೂ ಸ್ಮಾರ್ಟ್ ಫೋನ್ ಹೊಂದಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. (ಐಎಎನ್ಎಸ್)
ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ನಿಂದ ಸಿಹಿ ಸುದ್ದಿ, ಆದಷ್ಟು ಬೇಗ ಹ್ಯಾಂಡ್ ಫ್ರೀ ವೈಶಿಷ್ಯ ಪರಿಚಯಿಸಲಿರುವ AI