ಹೈದರಾಬಾದ್: ಮೈಕ್ರೋಸಾಫ್ಟ್ ಕಂಪನಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡೆವಲಪರ್‌ಗಳ ಸಮುದಾಯವನ್ನು ಕೇವಲ ದೇಶದ ಉತ್ಪನ್ನ ಮತ್ತು ಸೇವೆಗಳನ್ನು ನೀಡಲು ಮಾತ್ರವೇ ಅಲ್ಲದೇ, ಜಾಗತಿಕವಾಗಿ ಅವರನ್ನು ಸಬಲರನ್ನಾಗಿ ಮಾಡುತ್ತದೆ ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯಾ ನಾದೆಲ್ಲಾ ತಿಳಿಸಿದರು. ಭಾರತ ಪ್ರವಾಸದಲ್ಲಿರುವ ಅವರು, ದೇಶದ ಡೆವಲಪರ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮೈಕ್ರೋಸಾಫ್ಟ್ ಅಂತಿಮವಾಗಿ ಒಂದು ಡೆವಲಪರ್ ಕಂಪನಿ. ಸಂಸ್ಥೆಯ ಕೃತಕ ಬುದ್ಧಿಮತ್ತೆ (ಎಐ) ಉತ್ಪನ್ನಗಳ ತಯಾರಿಕೆಗೆ ನಮ್ಮ ಫ್ಲಾಟ್ಫಾರ್ಮ್ ಗಿಟ್ಹಬ್ನಲ್ಲಿ ಭಾರತದ ಡೆವಲಪರ್ಗಳ ಪಾತ್ರ ಅತ್ಯಂತ ದೊಡ್ಡ ಭರವಸೆ ಮೂಡಿಸಿದೆ. ಅಮೆರಿಕದಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಭಾರತ 2017ರಲ್ಲಿ ಗಿಟ್ಹಬ್ನಲ್ಲಿ ಅತಿ ದೊಡ್ಡ ಡೆವಲಪರ್ ಸಮುದಾಯವನ್ನು ಹೊಂದಲಿದೆ. ಗಿಟ್ಹಬ್ಗಳಾಗಿ ಎಐ ಆಧಾರಿತ ಯೋಜನೆ ರೂಪಿಸುವ ಪ್ರಮುಖ 10 ಜಾಗತಿಕ ಸಮುದಾಯದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಕಳೆದ ನವೆಂಬರ್ನಲ್ಲಿ ಗಿಟ್ಹಬ್ಗೆ 3.5 ಮಿಲಿಯನ್ ಜನರು ಸೇರುವ ಮೂಲಕ ಭಾರತೀಯರ ಸಂಖ್ಯೆ 13.2 ಮಿಲಿಯನ್ ತಲುಪಿದೆ. ಜಾಗತಿಕವಾಗಿ ಗಿಟ್ಹಬ್ ರೂಪಿಸುವ ಎಐ ಯೋಜನೆಯಲ್ಲಿ ಭಾರತ ಅತಿ ದೊಡ್ಡ ಕೊಡುಗೆ ಹೊಂದಿದೆ. ಈ ಸುಸ್ಥಿರ ಮತ್ತು ಗಮನಾರ್ಹ ಬೆಳವಣಿಗೆಯಿಂದಾಗಿ ಗಿಟ್ಹಬ್ ಅಂದಾಜಿಸುವಂತೆ 2017ರ ಹೊತ್ತಿಗೆ ಸಂಸ್ಥೆಯಲ್ಲಿ ಒಟ್ಟಾರೆ ಡೆವಲಪರ್ಗಳ ಸಂಖ್ಯೆಯಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕಲಿದೆ ಎಂದು ಅವರು ಭವಿಷ್ಯ ನುಡಿದರು.