ಕರ್ನಾಟಕ

karnataka

ETV Bharat / technology

ಐಫೋನ್​ 16 ಸೀರಿಸ್ ಸ್ಮಾರ್ಟ್‌ಪೋನ್‌​ ಏಕೆ ಖರೀದಿಸಬೇಕು? ಇಲ್ಲಿದೆ 10 ಕಾರಣಗಳು - IPhone 16 Series Highlights - IPHONE 16 SERIES HIGHLIGHTS

IPHONE 16 HIGHLIGHTS: ಆ್ಯಪಲ್ ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕಳೆದ ರಾತ್ರಿ (ಸೆಪ್ಟೆಂಬರ್ 9) ಹೆಚ್ಚಿನ ನಿರೀಕ್ಷೆಯ ನಡುವೆ ಬಿಡುಗಡೆ ಮಾಡಲಾಗಿದೆ. ಊಹಿಸಿದಂತೆ, ಹೊಸ ಲುಕ್​ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಐಫೋನ್ 16 ಮಾದರಿಗಳು ಮಾರುಕಟ್ಟೆಗೆ ಬರಲು ಸಜ್ಜಾಗಿವೆ.

IPHONE 16 PRICE IN INDIA  IPHONE 16 FEATURES  APPLE IPHONE 16 SERIES
ಐಫೋನ್​ 16 ಸೀರಿಸ್​ (Apple)

By ETV Bharat Tech Team

Published : Sep 10, 2024, 12:29 PM IST

Updated : Sep 10, 2024, 3:50 PM IST

IPHONE 16 HIGHLIGHTS: Apple iPhone 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಸೆಪ್ಟೆಂಬರ್ 9ರಂದು 'ಇಟ್ಸ್ ಗ್ಲೋಟೈಮ್' ಎಂಬ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ಕಂಪನಿಯು Apple Watch Series 10 ಮತ್ತು Apple AirPods ಗ್ಯಾಜೆಟ್‌ಗಳನ್ನು ಪರಿಚಯಿಸಿದೆ. ಇದರ ವೈಶಿಷ್ಟ್ಯ ಮತ್ತು ಬೆಲೆಗಳ ಬಗ್ಗೆ ತಿಳಿಯೋಣ.

  1. ಐಫೋನ್ 16 ಬೇಸ್ ಮಾಡೆಲ್ 6.1 ಇಂಚಿನ ಡಿಸ್​ಪ್ಲೇ ಮತ್ತು ಐಫೋನ್ 16 ಪ್ಲಸ್ ಮಾದರಿಯು 6.7 ಇಂಚಿನ ಡಿಸ್​ಪ್ಲೇ 120 Hz OLED ಜೊತೆಗೆ 2000 nitsನ ಬ್ರೈಟ್​ನೆಸ್ ಸಾಮರ್ಥ್ಯ ಹೊಂದಿವೆ.
  2. ಐಫೋನ್ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳ ಹೊರತಾಗಿ, ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಹೊಸ ರಿಯರ್​ ಕ್ಯಾಮೆರಾ ವಿನ್ಯಾಸ ಹೊಂದಿವೆ.
    ಐಫೋನ್​ 16 ಸೀರಿಸ್ ಸ್ಮಾರ್ಟ್‌ಪೋನ್‌ (AP)
  3. ಇದರ ಜೊತೆಗೆ, ಆ್ಯಪಲ್ ತನ್ನ ಐಫೋನ್ 16 ಸರಣಿಯ ಆವೃತ್ತಿಯಲ್ಲಿ ಈ ಬಾರಿ ಬದಿಯಲ್ಲಿ ಹಲವು ಬಟನ್‌ಗಳನ್ನು ನೀಡಿದೆ. ಅದರಂತೆ, ಕ್ಯಾಮೆರಾ ಬಟನ್ ಅನ್ನು ಹಲವು ವೈಶಿಷ್ಟ್ಯಗಳೊಂದಿಗೆ ಹೊಸದಾಗಿ ಪರಿಚಯಿಸಲಾಗಿದೆ.
  4. ಐಫೋನ್ 16 ಮಾದರಿಯಲ್ಲಿನ ಆ್ಯಕ್ಷನ್ ಬಟನ್ ಅನ್ನು ಸಮಯಕ್ಕೆ ಸರಿಹೊಂದುವಂತೆ ಮಾಡಬಹುದು ಮತ್ತು ಬಹು ಅಪ್ಲಿಕೇಶನ್‌ಗಳನ್ನು ನಿರ್ವಹಿಸಬಹುದು.
    ಐಫೋನ್​ 16 ಸೀರಿಸ್ ಸ್ಮಾರ್ಟ್‌ಪೋನ್‌ (AP)
  5. ಭಾರತದಲ್ಲಿ iPhone 16ರ ಬೆಲೆ ರೂ.79,900, iPhone 16 Plus ಬೆಲೆ ರೂ.89,900, iPhone 16 Proರ ಬೆಲೆ ರೂ.1,19,900 ಮತ್ತು iPhone 16 Pro Maxರ ಬೆಲೆ ರೂ.1,44,900ರಿಂದ ಪ್ರಾರಂಭವಾಗುತ್ತದೆ.
  6. Apple iPhone 16 ಮಾದರಿಗಳಲ್ಲಿ ಹೊಸದಾಗಿ ಸುಧಾರಿತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿದೆ. ಕಂಪನಿಯು 'ಆ್ಯಪಲ್ ಇಂಟೆಲಿಜೆನ್ಸ್' ಎಂದು ಹೆಸರಿಸಿದೆ. ಆ್ಯಪಲ್ ತನ್ನ ಉದ್ಘಾಟನಾ ಸಮಾರಂಭದಲ್ಲಿ ಹೊಸ ಅಪ್​ಡೇಟ್​ ಮೂಲಕ ಬಳಕೆದಾರರಿಗೆ ಸೇವೆಯನ್ನು ಕ್ರಮೇಣವಾಗಿ ಹೊರತರಲಾಗುವುದು ಎಂದು ಘೋಷಿಸಿತು.
  7. A18 ಚಿಪ್‌ಸೆಟ್ ಅನ್ನು iPhone 16 ಮಾದರಿಗಳಲ್ಲಿ ಬಳಸಲಾಗುತ್ತದೆ. ಇದು ಮಷಿನ್​ ಲರ್ನಿಂಗ್​ ಜೊತೆಗೆ ಸಂಪೂರ್ಣವಾಗಿ ಸಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ, ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಕೃತಕ ಬುದ್ಧಿಮತ್ತೆಯೊಂದಿಗೆ ನಿರ್ವಹಿಸುವ ಕಾರ್ಯಗಳನ್ನು ಇನ್ನಷ್ಟು ಸುಲಭಗೊಳಿಸುತ್ತವೆ.
    ಐಫೋನ್​ 16 ಸೀರಿಸ್ ಸ್ಮಾರ್ಟ್‌ಪೋನ್‌ (AP)
  8. ಐಫೋನ್ 16ನ ಮೂಲ ಮಾದರಿಗಳು ಹೊಸ 48-ಮೆಗಾಪಿಕ್ಸೆಲ್ ಫ್ಯೂಷನ್ ಕ್ಯಾಮೆರಾವನ್ನು ಹೊಂದಿವೆ.
  9. iOS 18 ಹೊಸ ಆವೃತ್ತಿಯು ಸುಧಾರಿತ ಸ್ಯಾಟ್​ಲೈಟ್​ ಮೇಸೆಜ್​ ಕಳುಹಿಸುವ ವೈಶಿಷ್ಟ್ಯ ಒಳಗೊಂಡಿದೆ.
    ಐಫೋನ್​ 16 ಸೀರಿಸ್ ಸ್ಮಾರ್ಟ್‌ಪೋನ್‌ (AP)
  10. ಹೊಸ ಪ್ಲಾಟ್‌ಫಾರ್ಮ್ ಚಾಟ್‌ಜಿಪಿಟಿ ಒಳಗೊಂಡಿದೆ ಎಂದು ಆ್ಯಪಲ್ ದೃಢಪಡಿಸಿದೆ.
Last Updated : Sep 10, 2024, 3:50 PM IST

ABOUT THE AUTHOR

...view details