ಕರ್ನಾಟಕ

karnataka

ETV Bharat / technology

ಬಸ್​, ರೈಲ್ವೆ ಸ್ಟೇಷನ್​ಗಳಲ್ಲಿ ಮೊಬೈಲ್ ಚಾರ್ಜಿಂಗ್ ಡೇಂಜರೋ ಡೇಂಜರ್​: ಏಕೆ ಗೊತ್ತಾ? ಜ್ಯೂಸ್​ ಜಾಕಿಂಗ್​ ಎಂದರೇನು ? - IS PUBLIC USB PORTS ARE SAFE

Is Public USB Ports Are Safe : ನೀವು ಬಸ್​ ಮತ್ತು ರೈಲ್ವೆ ಸ್ಷೇಷನ್​ಗಳು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಮೊಬೈಲ್​ ಚಾರ್ಜಿಂಗ್​ ಮಾಡುತ್ತಿದ್ದೀರಾ.. ಹಾಗಾದರೆ ಹುಷಾರ್​ ಆಗಿರಿ. ಏಕಂತೀರಾ.. ಈ ಸುದ್ದಿ ಓದಿ..

USB CHARGER SCAM RAMPANT IN INDIA  IS PUBLICCHARGINGSTATIONS ARE SAFE  IS PUBLIC USB PORTS ARE SAFE  WHAT IS JUICE JACKING
ಬಸ್​, ರೈಲ್ವೇ ಸ್ಟೇಷನ್​ಗಳಲ್ಲಿ ಮೊಬೈಲ್ ಚಾರ್ಜಿಂಗ್ ಡೇಂಜರೋ ಡೇಂಜರ್ (ETV Bharat)

By ETV Bharat Tech Team

Published : 9 hours ago

Is Public USB Ports Are Safe : ನೀವು ಪ್ರಯಾಣಿಸುವಾಗ ಬಸ್​ಗಳು ಮತ್ತು ರೈಲು ನಿಲ್ದಾಣಗಳಲ್ಲಿ ನಿಮ್ಮ ಫೋನ್ ಚಾರ್ಜಿಂಗ್​ ಇಡುತ್ತೀರಾ?.. ಹಾಗಾದರೆ ಇದರಿಂದ ಹುಷಾರ್​ ಆಗಿರಿ. ಸೈಬರ್ ವಂಚಕರು ನಿಮ್ಮ ಫೋನ್‌ನಿಂದ ಫೋಟೋಗಳು, ವಿಡಿಯೋಗಳು, ಪಾಸ್‌ವರ್ಡ್‌ಗಳು, ಫೈಲ್‌ಗಳು ಮತ್ತು ಮೆಸೇಜ್​ಗಳನ್ನು ಒಳಗೊಂಡಂತೆ ಮೌಲ್ಯಯುತ ಮತ್ತು ಸೂಕ್ಷ್ಮ ಡೇಟಾ ಕದಿಯಬಹುದು. ಇದಲ್ಲದೇ ಹಣಕಾಸಿನ ಡೇಟಾವನ್ನು ಕದಿಯುವ ಮತ್ತು ಆರ್ಥಿಕವಾಗಿ ನಿಮ್ಮನ್ನು ದೋಚುವ ಅಪಾಯವಿದೆ.

ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಕೆಫೆಗಳು, ಹೋಟೆಲ್‌ಗಳು ಸೇರಿದಂತೆ ಅನೇಕ ಸ್ಥಳಗಳು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿವೆ. ಪ್ರಯಾಣಿಕರು ತಮ್ಮ ಫೋನ್ ಚಾರ್ಜ್ ಮಾಡಲು ಇವುಗಳನ್ನು ಬಳಸುತ್ತಾರೆ. ಆದರೆ ಅಂತಹ ಸ್ಥಳಗಳಲ್ಲಿ ಚಾರ್ಜ್ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಸೈಬರ್ ಅಪರಾಧಿಗಳು ಕೆಲವು ಸಾಧನಗಳನ್ನು ಚಾರ್ಜಿಂಗ್ ಪೋರ್ಟ್‌ಗಳಿಗೆ ಸಂಪರ್ಕಿಸುತ್ತಾರೆ. ಬಳಿಕ ಅವುಗಳ ಮೂಲಕ ಮಾಲ್‌ವೇರ್ ವೈರಸ್​ಗಳನ್ನು ಬಿಡುತ್ತಾರೆ. ಯಾರಾದರೂ ಆ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸಿದರೆ ಅವರ ಡೇಟಾ ತಕ್ಷಣವೇ ಸೈಬರ್ ಕ್ರಿಮಿನಲ್‌ಗಳಿಗೆ ಬಹಿರಂಗಗೊಳ್ಳುತ್ತದೆ. ಇದಲ್ಲದೇ ಅವರು ತಮ್ಮ ಮೊಬೈಲ್ ಸಾಧನಗಳಲ್ಲಿ ದುರುದ್ದೇಶಪೂರಿತ ಸಾಫ್ಟ್‌ವೇರ್ ಇನ್​ಸ್ಟಾಲ್​ ಮಾಡುತ್ತಾರೆ. ಅಂದರೆ ನಿಮ್ಮ ಮೊಬೈಲ್ ಸಂಪೂರ್ಣವಾಗಿ ಅವರ ನಿಯಂತ್ರಣಕ್ಕೆ ಒಳಗಾಗುತ್ತದೆ. ಅದಕ್ಕಾಗಿಯೇ ಸೈಬರ್ ಭದ್ರತಾ ತಜ್ಞರು ಈ ಹಗರಣವನ್ನು 'ಜ್ಯೂಸ್ ಜಾಕಿಂಗ್' ಎಂದು ಕರೆಯುತ್ತಾರೆ. ಹಾಗಾಗಿ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಫೋನ್ ಚಾರ್ಜ್ ಮಾಡದಿರುವುದು ಉತ್ತಮ. ಇಲ್ಲದಿದ್ದರೆ ನೀವು ಆರ್ಥಿಕ ನಷ್ಟವನ್ನು ಎದುರಿಸುತ್ತೀರಿ.

ಡೇಟಾ ಕದಿಯುವುದು ಹೇಗೆ?:

  • ಸಾರ್ವಜನಿಕ ನಿಲ್ದಾಣಗಳಲ್ಲಿನ ಚಾರ್ಜಿಂಗ್ ಕೇಬಲ್‌ಗಳನ್ನು ಫೋನ್ ಚಾರ್ಜಿಂಗ್‌ಗೆ ಸಾಧ್ಯವಾದಷ್ಟು ಬಳಸಬಾರದು. ಏಕೆಂದರೆ ಸೈಬರ್ ಕ್ರಿಮಿನಲ್‌ಗಳು ಅವರನ್ನು ಮಾಲ್‌ವೇರ್‌ನೊಂದಿಗೆ ಟ್ಯಾಂಪರ್​ ಮಾಡಿರುತ್ತಾರೆ. ಇಲ್ಲ ಎಂದರೆ ಅವುಗಳನ್ನು ಮಾಲ್‌ವೇರ್‌ನೊಂದಿಗೆ ಮೊದಲೇ ಲೋಡ್ ಮಾಡುತ್ತಾರೆ.
  • ಸೈಬರ್ ಅಪರಾಧಿಗಳು ನಿಮ್ಮ ಸಾಧನವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲು ಕ್ರಾಲರ್ ಪ್ರೋಗ್ರಾಂಗಳನ್ನು ಬಳಸುತ್ತಾರೆ. ಇದು ನಿಮ್ಮ ಫೋನ್ ಡೇಟಾವನ್ನು ಕ್ಲೋನ್ ಮಾಡಿ ಅದನ್ನು ಅವರ ಸಿಸ್ಟಮ್‌ಗೆ ವರ್ಗಾಯಿಸುತ್ತದೆ.
  • ನಿಮ್ಮ ಸಾಧನವನ್ನು ದೂರದಿಂದಲೇ ಪ್ರವೇಶಿಸಲು ಸೈಬರ್ ಹ್ಯಾಕರ್‌ಗಳು ಇತ್ತೀಚಿನ ಮಾಲ್‌ವೇರ್ ಪ್ರೋಗ್ರಾಂಗಳನ್ನು ಬಳಸುತ್ತಾರೆ. ಅಂದರೆ ಅವರು ನಿಮ್ಮ ಚಟುವಟಿಕೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಿಮ್ಮ ಫೋನ್‌ನ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ.

ಈ ಮುನ್ನೆಚ್ಚರಿಕೆಗಳು ಅಗತ್ಯ!:

  • ದೀರ್ಘ ಪ್ರಯಾಣದ ಸಮಯದಲ್ಲಿ ಫೋನ್ ಚಾರ್ಜ್ ಆಗುತ್ತಲೇ ಇರುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಸ್ವಂತ ಚಾರ್ಜರ್ ಮತ್ತು ಪೋರ್ಟಬಲ್ ಪವರ್ ಬ್ಯಾಂಕ್‌ಗಳನ್ನು ಸಾಧ್ಯವಾದಷ್ಟು ಕೊಂಡೊಯ್ಯಬೇಕು.
  • ನಿಮ್ಮ ಫೋನ್‌ನಲ್ಲಿ ಉತ್ತಮ ಆಂಟಿವೈರಸ್ ಸಾಫ್ಟ್‌ವೇರ್ ಇನ್​​ಸ್ಟಾಲ್​ ಮಾಡಿಕೊಂಡರೆ ಒಳ್ಳೆಯದು.
  • ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಲ್ಲಿ ಫೋನ್ ಅನ್ನು ಸಾಧ್ಯವಾದಷ್ಟು ಬಳಸದಿರುವುದು ಉತ್ತಮ. ನೀವು ಅವಸರದ ಪರಿಸ್ಥಿತಿಯಲ್ಲಿ ಚಾರ್ಜ್ ಮಾಡಬೇಕಾದರೆ ಡೇಟಾ ಬ್ಲಾಕರ್ ಬಳಸಿ.
  • ಡೇಟಾ ಬ್ಲಾಕರ್ ಎನ್ನುವುದು ನಿಮ್ಮ ಚಾರ್ಜಿಂಗ್ ಕೇಬಲ್‌ಗೆ ಲಗತ್ತಿಸುವ ಸಣ್ಣ ಸಾಧನವಾಗಿದೆ. ಇದು ನಿಮ್ಮ ಫೋನ್‌ನಲ್ಲಿರುವ ಡೇಟಾ ಸೈಬರ್ ಅಪರಾಧಿಗಳನ್ನು ತಲುಪದಂತೆ ಪರಿಣಾಮಕಾರಿಯಾಗಿ ತಡೆಯುತ್ತದೆ.
  • USB ಪೋರ್ಟ್‌ಗಳ ಬದಲಿಗೆ ಮೊಬೈಲ್ ಚಾರ್ಜಿಂಗ್‌ಗಾಗಿ ಪ್ರಮಾಣಿತ ಮೂರು-ಪಿನ್ ಎಲೆಕ್ಟ್ರಿಕ್ ಔಟ್‌ಲೆಟ್ ಪ್ಲಗ್‌ಗಳನ್ನು ಬಳಸಿ.

ಓದಿ:ಹಲೋ ಸ್ಮಾರ್ಟ್​ಫೋನ್​ ಪ್ರಿಯರೇ ಬೈಪಾಸ್​ ಚಾರ್ಜಿಂಗ್​ ಎಂದರೇನು?: ಇದನ್ನು ಬಳಸುವುದೇಕೆ ಗೊತ್ತಾ?

ABOUT THE AUTHOR

...view details