Vivo V40e Launched In India: ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸದ್ಯ ಸ್ಮಾರ್ಟ್ಫೋನ್ಗಳಲ್ಲಿ ಆಫರ್ಗಳ ಜಾತ್ರೆ ನಡೆಯುತ್ತಿದೆ. ಆನ್‌ಲೈನ್ ಮಾರುಕಟ್ಟೆಗಳಲ್ಲಿ ಹಲವು ಕಂಪನಿಗಳು ಗ್ರಾಹಕರನ್ನು ಸೆಳೆಯಲು ಭರ್ಜರಿ ಕೊಡುಗೆಗಳನ್ನು ಘೋಷಿಸಿವೆ. ಇತ್ತೀಚೆಗೆ, ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ಹೊಸ ಫೋನ್ ರಿಲೀಸ್ ಮಾಡಿದೆ.
ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುವ Vivo V40E ಮೊಬೈಲ್‌ನ ಕ್ಯಾಮೆರಾ ವೈಶಿಷ್ಟ್ಯಗಳನ್ನು ಕಂಪನಿ ಬಹಿರಂಗಪಡಿಸಿದೆ. 98 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು 20 ಗಂಟೆಗಳ YouTube ಪ್ಲೇಬ್ಯಾಕ್ ಅನ್ನು ಇದು ಒದಗಿಸುತ್ತದೆ. ಹೊಸ ಸ್ಮಾರ್ಟ್‌ಫೋನ್‌ನ ವಿನ್ಯಾಸವು Vivo V40 Pro ಮೊಬೈಲ್ ಅನ್ನು ಹೋಲುತ್ತದೆ.
Vivo V40e ಫೋನ್‌ನಲ್ಲಿ ಏನೇನಿದೆ?:
- ಡಿಸ್ಪ್ಲೇ: 6.77 ಇಂಚು, 3D ಕರ್ವ್‌ಡ್
- ರಿಫ್ರೆಶ್ ರೇಟ್: 120Hz
- ತೂಕ: 183 ಗ್ರಾಂ
- ರಿಯರ್ ಕ್ಯಾಮೆರಾ: 50 ಮೆಗಾ ಪಿಕ್ಸೆಲ್
- ಅಲ್ಟ್ರಾವೈಡ್ ಕ್ಯಾಮೆರಾ: 8 ಮೆಗಾಪಿಕ್ಸೆಲ್
- ಸೆಲ್ಫಿ ಕ್ಯಾಮೆರಾ: 50 ಮೆಗಾಪಿಕ್ಸೆಲ್ i-AF ಕ್ಯಾಮೆರಾ
- ಸೋನಿ IMX882 ಸೆನ್ಸಾರ್
- 2x ಪೋರ್ಟ್ರೇಟ್ ಮೋಡ್
Vivo V40eನ ಇತರೆ ವೈಶಿಷ್ಟ್ಯಗಳು:
- 8GB RAM, 256GBವರೆಗೆ ಇಂಟರ್ನಲ್ ಸ್ಟೋರೇಜ್
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಶನ್ 7300 ಚಿಪ್ಸೆಟ್
- ಪೀಕ್ ಬ್ರೈಟ್ನೆಸ್: 4500 ನಿಟ್ಸ್
- ಬ್ಯಾಟರಿ: 5500 mAh
- 8W ಫ್ಲಾಶ್ ಚಾರ್ಜ್
- ವೆಟ್ ಟಚ್ ಫೀಚರ್
- AI ಎರೇಸರ್
- IP64 ರೇಟಿಂಗ್
- ಬ್ಲೂಟೂತ್ 5.4
- USB ಟೈಪ್-ಸಿ ಪೋರ್ಟ್ ಚಾರ್ಜರ್