ಕರ್ನಾಟಕ

karnataka

ETV Bharat / technology

ದೇಶದ ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ವಿಧಿವಶ - NUCLEAR SCIENTIST IS NO MORE

Nuclear Scientist No More: ದೇಶದ ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು 1975 ಮತ್ತು 1998 ರ ಪರಮಾಣು ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

SCIENTIST RAJAGOPALA CHIDAMBARAM  R CHIDAMBARAM DIES AT 88  NUCLEAR TEST  R CHIDAMBARAM PASSED AWAY
ದೇಶದ ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ಇನ್ನಿಲ್ಲ (Photo Credit: IIT Delhi)

By ETV Bharat Tech Team

Published : Jan 4, 2025, 11:31 AM IST

Veteran Nuclear Scientist is No More: ದೇಶದ ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ಅವರು ಕೊನೆಯುಸರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು 1975 ಮತ್ತು 1998 ರ ಪರಮಾಣು ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಣುಶಕ್ತಿ ಇಲಾಖೆಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ್ದ ಚಿದಂಬರಂ ಅವರು ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ 3.20 ಕ್ಕೆ ಕೊನೆಯುಸಿರೆಳೆದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಚಿದಂಬರಂ ಅವರಿಗೆ 1975 ಮತ್ತು 1999 ರಲ್ಲಿ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ : ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಸರಿ ಇರಲಿಲ್ಲ. ವಿಜ್ಞಾನಿಯಾಗಿ ತಮ್ಮ ವೃತ್ತಿ ಜೀವನದಲ್ಲಿ, ಡಾ. ಚಿದಂಬರಂ ಅವರು ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ನಿರ್ದೇಶಕರಾಗಿ, ಪರಮಾಣು ಶಕ್ತಿ ಆಯೋಗದ (AEC) ಅಧ್ಯಕ್ಷರಾಗಿ ಮತ್ತು ಪರಮಾಣು ಶಕ್ತಿ ಇಲಾಖೆ (DAE) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು 1994-95ರ ಅವಧಿಯಲ್ಲಿ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯ (IAEA) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು.

ಡಾ. ಚಿದಂಬರಂ ಅವರು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರೂ ಆಗಿದ್ದರು. ಅವರು ಭಾರತದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೋಖ್ರಾನ್-I (1975) ಮತ್ತು ಪೋಖ್ರಾನ್-II (1998) ಗಾಗಿ ಪರೀಕ್ಷಾ ಸಿದ್ಧತೆಗಳನ್ನು ನಡೆಸಿದರು.

ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು : ಪರಮಾಣು ಶಕ್ತಿಯ ಶಾಂತಿಯುತ ಬಳಕೆಯ ಸಮರ್ಥಕಾರದ ಅವರು ಭಾರತದ ಪರಮಾಣು ಶಕ್ತಿ ಕಾರ್ಯಕ್ರಮವನ್ನು ಮುನ್ನಡೆಸಿದರು. ಡಾ. ಚಿದಂಬರಂ ಅವರು ಪದ್ಮಶ್ರೀ (1975) ಮತ್ತು ಪದ್ಮವಿಭೂಷಣ (1999) ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ಓದಿ:ಆಹಾ! ಏನ್​ ನೋಟ, ಏನ್​ ಫೀಚರ್ಸ್​: ಹೋಂಡಾ ಎಲಿವೇಟ್ ಬ್ಲ್ಯಾಕ್​ ಎಡಿಷನ್​ ಬಿಡುಗಡೆ ಯಾವಾಗ ಗೊತ್ತಾ?

ABOUT THE AUTHOR

...view details