ಮುಂಬೈ : ಎಜ್ಯುಟೆಕ್ ಮತ್ತು ಸ್ಕಿಲಿಂಗ್ ಕಂಪನಿ ಅಪ್ ಗ್ರಾಡ್ ಸೋಮವಾರ ತನ್ನ ವಾರ್ಷಿಕ ಉದ್ಯೋಗ ನೇಮಕಾತಿಗಳಲ್ಲಿ ಸ್ಥಿರವಾದ ಬೆಳವಣಿಗೆ ಘೋಷಿಸಿದ್ದು, 2024ರ ಹಣಕಾಸು ವರ್ಷದಲ್ಲಿ ದಾಖಲೆಯ 55,000 ಉದ್ಯೋಗಗಳನ್ನು ಸೃಷ್ಟಿಸಿದೆ. ಇವುಗಳಲ್ಲಿ ಸುಮಾರು 3,000 ರಾಷ್ಟ್ರೀಯ ಮತ್ತು ಜಾಗತಿಕ ಕಂಪನಿಗಳಲ್ಲಿ ಹೊಸ ಉದ್ಯೋಗಗಳು, ವೃತ್ತಿಜೀವನದ ಬದಲಾವಣೆಗಳು ಮತ್ತು ಬಡ್ತಿಗಳು ಸೇರಿವೆ. ಈ ಉದ್ಯೋಗಿಗಳ ವಾರ್ಷಿಕ ಸಂಬಳ ಸಿಟಿಸಿ ಲೆಕ್ಕದಲ್ಲಿ ಬೇಸ್ಲೈನ್ 4.5 ಲಕ್ಷದಿಂದ ಗರಿಷ್ಠ 1.80 ಕೋಟಿ ರೂ.ಗಳವರೆಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.
ಮಾರ್ಕೆಟಿಂಗ್, ಡೇಟಾ ಮತ್ತು ಟೆಕ್ ಡೊಮೇನ್ಗಳಲ್ಲಿ ಮುಖ್ಯವಾಗಿ ನೇಮಕಾತಿಗಳು ನಡೆದಿವೆ ಮತ್ತು ಇವುಗಳಲ್ಲಿ ಸುಮಾರು ಶೇಕಡಾ 50ರಷ್ಟು ನೇಮಕಾತಿಗಳು ಮುಂಬೈ, ನವದೆಹಲಿ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ನಡೆದಿವೆ. ಪುಣೆ, ಕೋಲ್ಕತಾ, ಹೈದರಾಬಾದ್, ನೋಯ್ಡಾ, ಗುರ್ಗಾಂವ್ ಮತ್ತು ಅಹಮದಾಬಾದ್, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ.
ಮುಖ್ಯವಾಗಿ ವೃತ್ತಿಜೀವನದ ಬೆಳವಣಿಗೆಗೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅಥವಾ 'ರಿಟರ್ನ್ ಶಿಪ್' ಕಾರ್ಯಕ್ರಮಗಳ ಮೂಲಕ ಮತ್ತೆ ಕೆಲಸಕ್ಕೆ ಸೇರ ಬಯಸುವವರಲ್ಲಿ ಸುಮಾರು ಮೂರನೇ ಎರಡರಷ್ಟು ಮಹಿಳಾ ವೃತ್ತಿಪರರು ಇದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಜೆನ್ ಎಐ, ಡೇಟಾ, ಎಐ / ಎಂಎಲ್ ಮತ್ತು ತಂತ್ರಜ್ಞಾನದಲ್ಲಿ ಅಪ್ಗ್ರಾಡ್ನ ಉಚಿತ ಕೋರ್ಸ್ಗಳಿಗೆ 1.4 ಲಕ್ಷಕ್ಕೂ ಹೆಚ್ಚು ಜನ ದಾಖಲಾಗಿದ್ದಾರೆ.