Donald Trump And Elon Musk Watch SpaceX Rocket Launch: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಹಾಗೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಇದೀಗ ಇವರಿಬ್ಬರೂ ಸ್ಪೇಸ್‌ಎಕ್ಸ್‌ಗೆ ಸೇರಿದ ಬೃಹತ್ ಸ್ಟಾರ್‌ಶಿಪ್ ರಾಕೆಟ್ ಉಡಾವಣೆಯನ್ನು ನೇರವಾಗಿ ವೀಕ್ಷಿಸಿದ್ದಾರೆ. ಉಡ್ಡಯನದ ಒಂದು ಹಂತ ವಿಫಲವಾದರೆ, ಎರಡನೇ ಹಂತ ಯಶಸ್ವಿಯಾಯಿತು.
ಸ್ಪೇಸ್ಎಕ್ಸ್ ಉಡ್ಡಯನದ ಉದ್ದೇಶವೇನು?: ಸ್ಪೇಸ್‌ಎಕ್ಸ್ ಮಂಗಳವಾರ (ಯುಎಸ್ ಕಾಲಮಾನ) ಟೆಕ್ಸಾಸ್‌ನಲ್ಲಿ ಸುಮಾರು 400 ಅಡಿ ಎತ್ತರದ ಬೃಹತ್ ರಾಕೆಟ್ ಉಡಾಯಿಸಿತು. ಈ ರಾಕೆಟ್ ಅನ್ನು ಚಂದ್ರನ ಮೇಲೆ ಗಗನಯಾತ್ರಿಗಳನ್ನು ಸಾಗಿಸಲು ಮತ್ತು ಮಂಗಳ ಗ್ರಹಕ್ಕೆ ಫೆರ್ರಿ ಕ್ರೂಸ್ ಸಾಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬೂಸ್ಟರ್ ಯೋಜಿಸಿದಂತೆ ಭೂಮಿಗೆ ಹಿಂತಿರುಗಿದರೆ, ಲಾಂಚ್‌ಪ್ಯಾಡ್‌ನಲ್ಲಿರುವ ಮೆಕ್ಯಾನಿಕಲ್ ಆರ್ಮಸ್ ಅದನ್ನು ಹಿಡಿಯಬೇಕು. ಆದರೆ, ಇತ್ತೀಚಿನ ಪ್ರಯೋಗದಲ್ಲಿ ಈ ಹಂತ ವಿಫಲವಾಗಿದೆ.
ಉಡಾವಣೆಯಾದ ನಾಲ್ಕು ನಿಮಿಷಗಳ ನಂತರ ತಾಂತ್ರಿಕ ಸಮಸ್ಯೆಯಿಂದ 'ಬೂಸ್ಟರ್ ಕ್ಯಾಚ್' ಪ್ರಕ್ರಿಯೆಯನ್ನು ನಿಲ್ಲಿಸಲಾಯಿತು. ಮತ್ತೊಂದು ಬೂಸ್ಟರ್ ಮೂರು ನಿಮಿಷಗಳ ನಂತರ, ಗಲ್ಫ್ ಆಫ್ ಮೆಕ್ಸಿಕೋದ ನೀರಿನಲ್ಲಿ ಇಳಿಯಿತು. ಪರೀಕ್ಷೆಗೆ ಬಳಸಲಾದ ಖಾಲಿ ಸ್ಟಾರ್‌ಶಿಪ್ ಕ್ಯಾರಿಯರ್ ಸುಮಾರು 90 ನಿಮಿಷಗಳ ಕಾಲ ಭೂಮಿಯನ್ನು ಸುತ್ತಿ ಹಿಂದೂ ಮಹಾಸಾಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಸ್ಪೇಸ್ ಎಕ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.