ಕರ್ನಾಟಕ

karnataka

ETV Bharat / technology

ಉತ್ತರ ಕೊರಿಯಾ ಚೆಲ್ಲಾಟ, ದಕ್ಷಿಣ ಕೊರಿಯಾಗೆ ಪ್ರಾಣಸಂಕಟ: ಕಸದ ಬಲೂನ್​ನಿಂದ ವಿಮಾನ ಹಾರಾಟಕ್ಕೆ ಹೊಡೆತ - North Korea Trash Balloons - NORTH KOREA TRASH BALLOONS

North Korea Trash Balloons: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರವು ಜಂಕ್ ಅಥವಾ ಕಸದ ಬಲೂನ್‌ಗಳನ್ನು ಕಳುಹಿಸುವ ಮೂಲಕ ದಕ್ಷಿಣ ಕೊರಿಯಾ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟುಮಾಡುತ್ತಿದೆ. ಇದರ ಪರಿಣಾಮ, ಸಿಯೋಲ್‌ನ ಪ್ರಮುಖ ವಿಮಾನ ನಿಲ್ದಾಣಗಳ ರನ್‌ವೇಗಳನ್ನು ಆಗಾಗ್ಗೆ ಮುಚ್ಚಬೇಕಾದ ಪರಿಸ್ಥಿತಿ ಬಂದೊದಗಿದೆ.

SEOULS AIRPORTS  NORTH KOREA AND SOUTH KOREA  BALLOONS PROBLEMS FOR AIRLINES
ಉತ್ತರ ಕೊರಿಯಾದತ್ತ ಕಸ ತುಂಬಿದ ಬಲೂನ್‌ ಹಾರಿಸುತ್ತಿರುವ ಉತ್ತರ ಕೊರಿಯಾ (AP)

By ETV Bharat Tech Team

Published : Sep 25, 2024, 11:42 AM IST

North Korea Trash Balloons:ಮೊದಲಿಗೆ, ಉತ್ತರ ಕೊರಿಯಾ ಕಳುಹಿಸಿದ ಕಸದ ಬಲೂನ್‌ಗಳು 'ಸಣ್ಣ ಸಮಸ್ಯೆ' ಎಂದು ದಕ್ಷಿಣ ಕೊರಿಯಾ ಭಾವಿಸಿತ್ತು. ಆದರೆ ಇದೀಗ ಬಹುದೊಡ್ಡ ಸಮಸ್ಯೆಯಾಗಿ ಬದಲಾಗುತ್ತಿದೆ. ಶೀಘ್ರದಲ್ಲೇ ದಕ್ಷಿಣ ಕೊರಿಯಾದ ವಾಯುಯಾನ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಗೋಚರಿಸಿದೆ. ಏಕೆಂದರೆ, ಈಗಾಗಲೇ ಹಲವು ಬಾರಿ ರಾಜಧಾನಿ ಸಿಯೋಲ್‌ನಲ್ಲಿರುವ ಎರಡು ಪ್ರಮುಖ ವಿಮಾನ ನಿಲ್ದಾಣಗಳ ರನ್‌ವೇಗಳನ್ನೇ ಮುಚ್ಚಲಾಗಿದೆ.

ದಕ್ಷಿಣ ಕೊರಿಯಾದ ಡೆಮಾಕ್ರಟಿಕ್ ಪಕ್ಷದ ಸದಸ್ಯ ಯಂಗ್ ಬೂ ನಾಮ್ ಪ್ರತಿಕ್ರಿಯಿಸಿ, "ಜೂನ್ 1ರಿಂದ ಇಚಿಯಾನ್ ಮತ್ತು ಗಿಂಪೊ ವಿಮಾನ ನಿಲ್ದಾಣಗಳ ಕೆಲವು ಅಥವಾ ಎಲ್ಲ ರನ್‌ವೇಗಳನ್ನು ಸುಮಾರು 20 ದಿನಗಳವರೆಗೆ ಮುಚ್ಚಬೇಕಾಯಿತು. ಆ ಸಮಯದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಸ್ಯೆಯಾಯಿತು. ಒಟ್ಟು 413 ನಿಮಿಷಗಳ ಕಾಲ (ಆರು ಗಂಟೆಗಳಿಗೂ ಹೆಚ್ಚು) ನಮ್ಮ ವಿಮಾನ ಸೇವೆಗಳು ಅಸ್ತವ್ಯಸ್ತಗೊಂಡವು" ಎಂದು ಹೇಳಿದ್ದಾರೆ. ಇಚಿಯಾನ್ ವಿಶ್ವದ 5ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬುದು ಗಮನಾರ್ಹ.

ಮೇ ಅಂತ್ಯದಿಂದ ಉತ್ತರ ಕೊರಿಯಾ ಸಾವಿರಾರು ಕಸ ತುಂಬಿದ ಬಲೂನ್‌ಗಳನ್ನು ದಕ್ಷಿಣ ಕೊರಿಯಾದ ವಾಯುಪ್ರದೇಶಕ್ಕೆ ಹಾರಿಸುತ್ತಿದೆ. ಇತ್ತೀಚೆಗೆ ಇವುಗಳ ಸಂಖ್ಯೆ 5,500 ಮೀರಿದೆ ಎಂದು ಅಂದಾಜಿಸಲಾಗಿದೆ. ಈ ಬಲೂನುಗಳು ಪ್ರಚಾರದ ಕರಪತ್ರಗಳನ್ನೂ ಸಹ ಒಳಗೊಂಡಿರುತ್ತವೆ. ದೇಶದ ಅಧ್ಯಕ್ಷರ ವಸತಿ ಆವರಣದಲ್ಲೂ ಈ ಬಲೂನ್​ಗಳು ಹಾರಾಡಿ ಸಂಚಲನ ಮೂಡಿಸಿದ್ದವು. ಅಷ್ಟೇ ಅಲ್ಲ, ವಿಮಾನ ನಿಲ್ದಾಣದ ರನ್‌ವೇ ಮೇಲೂ ಬಲೂನ್‌ಗಳು ಬಿದ್ದು ಆತಂಕ ಸೃಷ್ಟಿಯಾಗಿತ್ತು.

ಜೂನ್ 26ರಂದು ಇಚಿಯಾನ್​ ವಿಮಾನ ನಿಲ್ದಾಣದ ರನ್ವೇಯನ್ನು ಸುಮಾರು ಮೂರು ಗಂಟೆ ಮುಚ್ಚಲಾಯಿತು. ಸೋಮವಾರ ಅದೇ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಬಲೂನ್​ ಕಂಡು ಬಂದಿದ್ದು, ಸುಮಾರು 90 ನಿಮಿಷ ಅಡಚಣೆಯಾಗಿದೆ. ಜಿಂಪೊ ವಿಮಾನ ನಿಲ್ದಾಣದಲ್ಲಿ ದೇಶೀಯ ವಿಮಾನ ಸೇವೆಗಳನ್ನು ನಿರ್ವಹಿಸಲಾಗುತ್ತಿದೆ.

ಉತ್ತರ ಕೊರಿಯಾ ಮೇ ತಿಂಗಳಿನಿಂದ ಎರಡು ಸಾವಿರ ಬಲೂನ್‌ಗಳನ್ನು ಕಳುಹಿಸಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಉತ್ತರ ಕೋರಿಯಾ ಕಳುಹಿಸುವ ಬಲೂನ್​ ಬ್ಯಾಗ್‌ಗಳಲ್ಲಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಟರಿಗಳು, ಹಾಳಾದ ಶೂಗಳು ಮತ್ತು ಪೇಪರ್‌ಗಳನ್ನು ತುಂಬಲಾಗಿದೆ. ಕೆಲವು ಬಲೂನ್‌ಗಳಲ್ಲಿ ಕೊಳಚೆ ನೀರು ಮತ್ತು ಪ್ರಾಣಿಗಳ ಮಲಮೂತ್ರವೂ ಇರುತ್ತದೆ ಎಂಬುದು ಗಮನಾರ್ಹ. 2016ರಲ್ಲಿಯೂ ಕಿಮ್ ಸರ್ಕಾರ ಬಲೂನ್‌ಗಳನ್ನು ಕಳುಹಿಸಿದಾಗ ದಕ್ಷಿಣ ಕೊರಿಯಾದಲ್ಲಿ ಕೆಲವು ವಾಹನ ಮತ್ತು ಆಸ್ತಿಗಳಿಗೂ ಹಾನಿಯಾಗಿದ್ದವು.

ಇದನ್ನೂ ಓದಿ:'ಸುಸೈಡ್​ ಕ್ಯಾಪ್ಸುಲ್‌'ನಲ್ಲಿ ವ್ಯಕ್ತಿ ಆತ್ಮಹತ್ಯೆ; ಸ್ವಿಟ್ಜರ್ಲೆಂಡ್​ನಲ್ಲಿ ನಡೆದ ಘಟನೆಯಿಂದ ಜಗತ್ತಿನಲ್ಲಿ ಸಂಚಲನ! - Suicide Capsule

ABOUT THE AUTHOR

...view details