Toyota Urban Cruiser Hyryder: ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕೇವಲ ಎರಡು ವರ್ಷಗಳಲ್ಲಿ ಲಕ್ಷ ಯೂನಿಟ್ ಮಾರಾಟ ಮಾಡಿ ಹೊಸ ದಾಖಲೆ ಬರೆದಿದೆ. ಮಾರುತಿ ಸುಜುಕಿ ಜೊತೆಗಿನ ಪಾಲುದಾರಿಕೆಯ ನಂತರ ಟೊಯೊಟಾ ಅನೇಕ ಮಾರುತಿ ರೀಬ್ಯಾಡ್ಜ್ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆಗಿನಿಂದಲೂ ಕಂಪನಿಯ ಮಾರಾಟ ಗಣನೀಯವಾಗಿ ಏರುತ್ತಿದೆ.
ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಎರಡನೇ ಮಾರುತಿ ರೀಬ್ಯಾಡ್ಜ್ ಮಾಡಲಾದ ಕಾರು ಎಂದು ಎನಿಸಿಕೊಂಡಿದೆ. ಇದರ ಹೋಲ್ಸೆಲ್ ಮಾರಾಟ ಒಂದು ಲಕ್ಷ ಯುನಿಟ್ಗಳನ್ನು ದಾಟಿವೆ. ಸೆಪ್ಟಂಬರ್ ತಿಂಗಳಲ್ಲೇ ಟೊಯೊಟಾ ಈ ದಾಖಲೆಯನ್ನು ಬರೆದಿರುವುದು ಗಮನಾರ್ಹ. ಈ ಕಾರು ಅಕ್ಟೋಬರ್ ಅಂತ್ಯದ ವೇಳೆಗೆ ಒಟ್ಟು 1,07,975 ಯುನಿಟ್ ಮಾರಾಟವಾಗಿದೆ.
ಕಂಪನಿ ಈ ಕಾರನ್ನು 2022ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್ ಮಾರುತಿ ಬಲೆನೊ ಆಧರಿತವಾಗಿದೆ. ಕಂಪನಿಯ ಮೊದಲ ರಿಬ್ಯಾಡ್ಜ್ ಕಾರು ಕೂಡಾ ಹೌದು. ಅಕ್ಟೋಬರ್ ಅಂತ್ಯದ ವೇಳೆಗೆ ಹ್ಯಾಚ್‌ಬ್ಯಾಕ್ ಅನ್ನು 1,91,029 ಯುನಿಟ್ಗಳನ್ನು ಡಿಲರ್ಶಿಪ್ಗಳಿಗೆ ಕಳುಹಿಸಲಾಗಿದೆ ಎಂದು ಕಂಪನಿ ತಿಳಿಸಿದೆ.