ಗ್ಯಾಬೊರೊನ್ (ಬೋಟ್ಸ್‌ವಾನಾ): ಆಫ್ರಿಕನ್ ದೇಶವಾದ ಬೋಟ್ಸ್‌ವಾನಾ ವಿಶ್ವದ ಪ್ರಮುಖ ವಜ್ರ ಉತ್ಪಾದಕರಲ್ಲಿ ಒಂದಾಗಿದೆ. ಪ್ರಪಂಚದ ಒಟ್ಟು ವಜ್ರ ಉತ್ಪಾದನೆಯ ಶೇಕಡ 20ರಷ್ಟು ಇಲ್ಲಿಯೇ ಉತ್ಪಾದನೆಯಾಗುತ್ತದೆ. ಈ ವೇಳೆ ಬೋಟ್ಸ್‌ವಾನಾ ಕೆನಡಾ ಮೂಲದ ಲುಕಾರ ಡೈಮಂಡ್ ಕಂಪನಿಯ ಒಡೆತನದ ಗಣಿಯಲ್ಲಿ ಸುಮಾರು 2,492 ಕ್ಯಾರೆಟ್ನ ವಜ್ರ ಪತ್ತೆಯಾಗಿದೆ.
ವಿಶ್ವದ ಎರಡನೇ ಅತಿ ದೊಡ್ಡ ವಜ್ರ:1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ 3,106 ಕ್ಯಾರೆಟ್ನ 'ಕುಲಿನನ್ ಡೈಮಂಡ್' (Cullinan Diamond) ವಿಶ್ವದ ಅತಿದೊಡ್ಡ ವಜ್ರವಾಗಿದೆ. ಇದರ ನಂತರ, 'ಬೋಟ್ಸ್‌ವಾನಾ ಡೈಮಂಡ್' ಅನ್ನು ಇದುವರೆಗೆ ಕಂಡುಹಿಡಿದ ಅತಿದೊಡ್ಡ ವಜ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಬೋಟ್ಸ್‌ವಾನಾ ವಜ್ರವು ವಿಶ್ವದ ಎರಡನೇ ಅತಿ ದೊಡ್ಡ ವಜ್ರವಾಗಿದೆ ಎಂದು ಲುಕಾರಾ ಡೈಮಂಡ್ ಕಂಪನಿ ಅಧ್ಯಕ್ಷ ವಿಲಿಯಂ ಲ್ಯಾಂಬ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ದೊಡ್ಡ ಗಾತ್ರದ ಮತ್ತು ಹೆಚ್ಚಿನ ಮೌಲ್ಯದ ವಜ್ರಗಳನ್ನು ಗುರುತಿಸಲು ಮತ್ತು ರಕ್ಷಿಸಲು 2017 ರಲ್ಲಿ ಸ್ಥಾಪಿಸಲಾದ ಮೆಗಾ ಡೈಮಂಡ್ ರಿಕವರಿ (ಎಮ್‌ಡಿಆರ್) ಕಂಪನಿಯು ಎಕ್ಸ್-ರೇ ಟ್ರಾನ್ಸ್‌ಮಿಷನ್ (ಎಕ್ಸ್‌ಆರ್‌ಟಿ) ತಂತ್ರಜ್ಞಾನವನ್ನು ಬಳಸಿಕೊಂಡು 'ಬೋಟ್ಸ್‌ವಾನಾ ಡೈಮಂಡ್' ಅನ್ನು ಪತ್ತೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.
ಎಕ್ಸ್ ರೇ ಟ್ರಾನ್ಸ್‌ಮಿಷನ್ ತಂತ್ರಜ್ಞಾನ:ಕೆನಡಾ ಮೂಲದ ಲುಕಾರ ಡೈಮಂಡ್ ಕಂಪನಿ 2012ರಲ್ಲಿ ಬೋಟ್ಸ್‌ವಾನಾದಲ್ಲಿ ವಜ್ರದ ಗಣಿಗಾರಿಕೆ ಆರಂಭಿಸಿತ್ತು. ಅಂದಿನಿಂದ, 216 ವಜ್ರಗಳು ತಲಾ $ 1 ಮಿಲಿಯನ್‌ಗಿಂತ ಹೆಚ್ಚು ಮಾರಾಟವಾಗಿವೆ ಮತ್ತು 11 ಕ್ಕೂ ಹೆಚ್ಚು ಸಿಂಗಲ್ ಡೈಮಂಡ್‌ಗಳು ತಲಾ $ 10 ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟವಾಗಿವೆ.
ಅದರಂತೆ, 2019 ರಲ್ಲಿ, 1,758 ಕ್ಯಾರೆಟ್ ಮೌಲ್ಯದ ವಜ್ರವನ್ನು ಗರೋವ್ ಗಣಿಯಲ್ಲಿ ಲುಕಾರಾ ಕಂಪನಿ ಪತ್ತೆ ಮಾಡಿತು. ಬೋಟ್ಸ್‌ವಾನಾದಲ್ಲಿ ಪತ್ತೆಯಾದ ಮೊದಲ ಅತಿ ದೊಡ್ಡ ವಜ್ರ ಇದಾಗಿದೆ. ಅದಕ್ಕೆ ‘ಚೆವಿಲೋ ಡೈಮಂಡ್’ (Chevilo Diamond) ಎಂದು ಹೆಸರಿಡಲಾಯಿತು.