ಕರ್ನಾಟಕ

karnataka

ETV Bharat / technology

'ಕ್ರೂ-10' ಮಿಷನ್​ ಉಡ್ಡಯನ ದಿನ​ ಘೋಷಿಸಿದ ನಾಸಾ: ಶೀಘ್ರದಲ್ಲೇ ಸುನೀತಾ, ಬುಚ್ ಭೂಮಿಗೆ​ - WHEN ASTRONAUTS RETURN TO EARTH

ಕೊನೆಗೂ ಕ್ರೂ-10 ಮಿಷನ್​ ಲಾಂಚಿಂಗ್​ ದಿನವನ್ನು​ ನಾಸಾ ಪ್ರಕಟಿಸಿದೆ. ಹಾಗಾಗಿ, ಶೀಘ್ರದಲ್ಲೇ ಬಾಹ್ಯಾಕಾಶದಲ್ಲಿ ಸಿಲುಕಿರುವ ವಿಜ್ಞಾನಿಗಳಾದ ಸುನೀತಾ ವಿಲಿಯಮ್ಸ್‌ ಮತ್ತು ಬುಚ್​ ಭೂಮಿಗೆ ಮರಳುವ ಆಶಾಭಾವ ಮೂಡಿದೆ.

SUNITA WILLIAMS AND BUTCH WILMORE  CREW 10 LAUNCH MISSION  NASA AND SPACEX  CREW 9 MISSION
ಐಎಸ್‌ಎಸ್‌ನಲ್ಲಿ ವಿಜ್ಞಾನಿಗಳಾದ ಸುನೀತಾ ವಿಲಿಯಮ್ಸ್‌ ಮತ್ತು ಬುಚ್ (NASA)

By ETV Bharat Tech Team

Published : Feb 12, 2025, 4:32 PM IST

Updated : Feb 12, 2025, 8:15 PM IST

ಕೊನೆಗೂ ನಾಸಾ ತನ್ನ ಮುಂದಿನ ಬಾಹ್ಯಾಕಾಶ ಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಇದರಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ಇಬ್ಬರು ಗಗನಯಾತ್ರಿಗಳು ಮರಳಿ ಭೂಮಿಗೆ ಬರುವ ಆಶಾವಾದ ಮೂಡಿದೆ.

ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಶೀಘ್ರದಲ್ಲೇ ಭೂಮಿಗೆ ಮರಳಲಿದ್ದಾರೆ. ಮಾರ್ಚ್ ಮಧ್ಯದಲ್ಲಿ ಭೂಮಿಗೆ ಮರಳಬಹುದು ಎಂದು ನಾಸಾ ಅಧಿಕೃತವಾಗಿ ತಿಳಿಸಿದೆ. ಇಬ್ಬರೂ ಗಗನಯಾತ್ರಿಗಳು ಕಳೆದ 8 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದಾರೆ.

ನಾಸಾ ಮತ್ತು ಸ್ಪೇಸ್‌ಎಕ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್​ಎಸ್​) ಮತ್ತು ಅಲ್ಲಿಂದ ಮುಂಬರುವ ಕ್ರೂ ರೊಟೇಶನ್​ ಮಿಷನ್ ಟಾರ್ಗೆಟ್​​ ಲಾಂಚ್​ ಮತ್ತು ರಿಟರ್ನ್​ ಡೇಟ್ಸ್​ ವೇಗಗೊಳಿಸುತ್ತಿವೆ. ಇದು ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ನಾಸಾ ವಾಪಸ್​ ಭೂಮಿಗೆ ಮರಳಿ ತರುತ್ತದೆ.

ಲಾಂಚ್​ ಡೇಟ್​ ಯಾವಾಗ?:ನಾಸಾದ ಕ್ರೂ-10 ಲಾಂಚಿಂಗ್​ ಮಾರ್ಚ್ 12ರ ಟಾರ್ಗೆಟ್​ ಹೊಂದಿದೆ. ಮಿಷನ್ ಸಿದ್ಧತೆ ಪ್ರಕ್ರಿಯೆಯ ಸರ್ಟಿಫಿಕೇಶನ್​ ಬಾಕಿ ಉಳಿದಿದೆ ಎಂದು ನಾಸಾ ತಡವಾಗಿ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಲಿಯಮ್ಸ್, ವಿಲ್ಮೋರ್, ನಾಸಾ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಒಳಗೊಂಡ ಕ್ರೂ-9 ಮಿಷನ್, ಹೊಸದಾಗಿ ಆಗಮಿಸುವ ಕ್ರೂ-10 ಸಿಬ್ಬಂದಿಯೊಂದಿಗೆ ಹಲವು ದಿನಗಳ ಹಸ್ತಾಂತರದ ಅವಧಿಯ ಬಳಿಕ ಭೂಮಿಗೆ ಮರಳಲು ಯೋಜಿಸಲಾಗಿದೆ.

ಕ್ರೂ-10ಗಾಗಿ ಹಿಂದಿನ ಉಡಾವಣಾ ದಿನಾಂಕ ಮಾರ್ಚ್ ಅಂತ್ಯಕ್ಕಿಂತ ಮುಂಚೆಯೇ ಇರಲಿಲ್ಲ. ಕ್ರೂ-10 ಮಿಷನ್ ನಾಸಾ ಗಗನಯಾತ್ರಿಗಳಾದ ಆನ್ ಮೆಕ್‌ಕ್ಲೈನ್ ​​ಮತ್ತು ನಿಕೋಲ್ ಅಯರ್ಸ್, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಅವರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುತ್ತದೆ.

ಕಳೆದ ವರ್ಷ ಜೂನ್ 5ರಂದು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೊತೆ ಐಎಸ್​ಎಸ್​ ತಲುಪಿದ್ದರು. ಮಿಷನ್​ ಒಂದು ವಾರದ ಬಳಿಕ ಅವರು ಹಿಂತಿರುಗಬೇಕಾಗಿತ್ತು. ಈ ಇಬ್ಬರು ಗಗನಯಾತ್ರಿಗಳು ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್ ಪರೀಕ್ಷಿಸಲು ಹೋಗಿದ್ದರು. ಆದರೆ ಕ್ಯಾಪ್ಸುಲ್​ನಲ್ಲಿ ತಾಂತ್ರಿಕ ಸಮಸ್ಯೆ ಕಂಡ ಬಂದ ಹಿನ್ನೆಲೆಯಲ್ಲಿ ಆಗಿನಿಂದಲೂ ಅವರಿಬ್ಬರೂ ಐಎಸ್‌ಎಸ್‌ನಲ್ಲಿಯೇ ಸಿಲುಕಿದ್ದರು.

ಇದಕ್ಕೂ ಮೊದಲು, ಫೆಬ್ರವರಿ 2025ರಲ್ಲಿ ಎಲೋನ್ ಮಸ್ಕ್ ಅವರ ಕಂಪೆನಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಸುನೀತಾ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರುವ ಬಗ್ಗೆ ನಾಸಾ ತಿಳಿಸಿತ್ತು. ಆದಾಗ್ಯೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ:ಬಾಹ್ಯಾಕಾಶದಲ್ಲೇ ಕ್ರಿಸ್ಮಸ್ ಖುಷಿ: ಸುನಿತಾ ವಿಲಿಯಮ್ಸ್ ಫುಲ್ ಬಿಂದಾಸ್​​ ಹಬ್ಬದ ಆಚರಣೆ

Last Updated : Feb 12, 2025, 8:15 PM IST

ABOUT THE AUTHOR

...view details