ನವದೆಹಲಿ: ಬಿಲಿಯನೇರ್ ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಭಾನುವಾರ ಸ್ಟಾರ್‌ಶಿಪ್‌ನ ಐದನೇ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು. "ಚಾಪ್‌ಸ್ಟಿಕ್ ಆರ್ಮ್ಸ್" ಹೊಂದಿರುವ ಸೂಪರ್ ಹೆವಿ ಬೂಸ್ಟರ್‌ನ ಐತಿಹಾಸಿಕ ಉಡ್ಡಯನ ಮಾಡಿ ಸೈ ಎನಿಸಿಕೊಂಡಿದೆ.
400-ಅಡಿ ಎತ್ತರದ ಸ್ಟಾರ್‌ಶಿಪ್ ರಾಕೆಟ್ ಮತ್ತು ಹೆವಿ ಬೂಸ್ಟರ್ ವಿಶ್ವದ ಅತಿದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಎಂಬ ಹೆಸರಿಗೆ ಪಾತ್ರವಾಗಿದೆ. ದಕ್ಷಿಣ ಟೆಕ್ಸಾಸ್‌ನ ಬೊಕಾ ಚಿಕಾ ಬೀಚ್ ಬಳಿಯ ಸ್ಟಾರ್‌ಬೇಸ್ ಸೌಲಭ್ಯದಿಂದ ಬೆಳಗ್ಗೆ 8 ಗಂಟೆಗೆ EDT ನಂತರ ಹಾರಾಟ ಆರಂಭಿಸಿತು.
"Mechazilla ಸೂಪರ್ ಹೆವಿ ಬೂಸ್ಟರ್ ನೊಂದಿಗೆ ಗಗನಕ್ಕೆ ಚಿಮ್ಮಿದೆ ಎಂದು SpaceX - ತನ್ನ X ಹ್ಯಾಂಡಲ್ನಿಂದ ಪೋಸ್ಟ್ ಮಾಡಿದೆ. ಸೂಪರ್ ಹೆವಿ ಬೂಸ್ಟರ್ ಯಶಸ್ವಿಯಾಗಿ ತನ್ನ ಉಡಾವಣಾ ಸೈಟ್‌ಗೆ ಹಿಂತಿರುಗಿದ ಬಳಿಕ ಈ ಪೋಸ್ಟ್ ಮಾಡಲಾಗಿದೆ.
ಜೂನ್‌ನಲ್ಲಿ ಸ್ಪೇಸ್ ಎಕ್ಸ್ ತನ್ನ ಕೊನೆಯ ಹಾರಾಟ ನಡೆಸಿತ್ತು. ಈ ಸಮಯದಲ್ಲಿ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಹಿಂದೂ ಮಹಾಸಾಗರದಲ್ಲಿ ತನ್ನ ಮೊದಲ ಯಶಸ್ವಿ ಸ್ಪ್ಲಾಶ್‌ಡೌನ್ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಹೊಸ ಸಾಧನೆಯು, ಬಾಹ್ಯಾಕಾಶ ನೌಕೆಗಳ ಕ್ಷಿಪ್ರ ಮರುಬಳಕೆಗಾಗಿ ಕಂಪನಿ ನಡೆಸುತ್ತಿರುವ ಅನ್ವೇಷಣೆಗಳಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಬೂಸ್ಟರ್ ಕ್ಯಾಚ್ ಉಡ್ಡಯನ ಮತ್ತು ಅದನ್ನು ಗಗನದಿಂದ ಭೂಮಿಗೆ ಕರೆಸುವ ಯಶಸ್ವಿ ಪ್ರಯತ್ನಕ್ಕಾಗಿ ಅದರ ಎಂಜಿನಿಯರ್‌ಗಳು ವರ್ಷಗಳಿಂದ ಸತತ ತಯಾರಿ ನಡೆಸಿದ್ದರು. ಹಾಗೂ ತಿಂಗಳು ಗಟ್ಟಲೇ ಈ ಬಗ್ಗೆ ಪರೀಕ್ಷೆ ಹಾಗೂ ಪ್ರಯೋಗಗಳನ್ನು ಮಾಡಿ ಅದರ ಯಶಸ್ಸನ್ನು ಖಾತರಿ ಮಾಡಿಕೊಂಡಿದ್ದರು ಎಂದು ಕಂಪನಿ ಹೇಳಿದೆ.
ಸುರಕ್ಷಿತ ಲ್ಯಾಂಡಿಂಗ್ ಹಾಗೂ ಎಂಜಿನ್ಗಳ ಮರುಬಳಕೆ:ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಲು ತಂತ್ರಜ್ಞರು ಮೂಲಸೌಕರ್ಯಗಳನ್ನು ನಿರ್ಮಿಸಲು ಹತ್ತಾರು ಸಾವಿರ ಗಂಟೆಗಳ ಕಾಲವನ್ನು ವ್ಯಯಿಸಿದ್ದಾರೆ ಎಂದು ಅದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ಸ್ಪೇಸ್‌ಎಕ್ಸ್ ತನ್ನ ಸ್ಟಾರ್‌ಶಿಪ್ ವಾಹನವು 1-ಗಂಟೆಗಳ ಕಾಲ ಕರಾವಳಿ ಪ್ರದೇಶದ ಮೇಲೆ ಸುತ್ತುಹಾಕಿತ್ತು. ಈ ಸಂದರ್ಭದಲ್ಲಿ ಅದು ಆಸ್ಟ್ರೇಲಿಯಾದ ಪಶ್ಚಿಮಕ್ಕೆ ಹಿಂದೂ ಮಹಾಸಾಗರದ ಮೇಲೆ ಮರುಪ್ರವೇಶ ಪಡೆದುಕೊಂಡಿತ್ತು. ಸ್ಟಾರ್‌ಶಿಪ್‌ನ ರಾಪ್ಟರ್ ಎಂಜಿನ್ ದಹನ ಪೂರ್ಣಗೊಳಿಸಿದ ಬಳಿಕ ಸ್ಟಾರ್‌ಶಿಪ್ ಕರಾವಳಿಯ ಹಂತವನ್ನು ಪ್ರವೇಶಿಸಿತು ಎಂದು ಸ್ಟಾರ್ ಎಕ್ಸ್ ಹೇಳಿದೆ.
ಸ್ಟಾರ್‌ಶಿಪ್ ಹಾರಾಟ ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇಷ್ಟಾದರೂ ಸ್ಟಾರಶಿಪ್ ನಿಯಂತ್ರಿತ ಮರುಪ್ರವೇಶ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುತ್ತಿದೆ.
ಪ್ರತಿಸ್ಪರ್ಧಿಯಿಂದಲೂ ಗುಣಗಾನ: ಏತನ್ಮಧ್ಯೆ, ಪ್ರತಿಸ್ಪರ್ಧಿ ಬ್ಲೂ ಒರಿಜಿನ್ SpaceX ನ ಈ ಯಶಸ್ವಿ ಕಾರ್ಯಾಚರಣೆಯನ್ನು "ಅಭಿನಂದಿಸಿದೆ". ಜೆಫ್ ಬೆಜೋಸ್-ಮಾಲೀಕತ್ವದ ಕಂಪನಿಯು ತನ್ನ ಎರಡನೇ ಮಾನವ - ರೇಟೆಡ್ ಬಾಹ್ಯಾಕಾಶ ನೌಕೆಯನ್ನು ಪ್ರಾರಂಭಿಸಲು ಮತ್ತೊಮ್ಮೆ ಪ್ರಯತ್ನಿಸುತ್ತದೆ, ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಅದರ ಮೊದಲ ಉಡಾವಣಾ ಪ್ರಯತ್ನ ವಿಫಲಗೊಳಿಸಿದ ಸುಮಾರು ಒಂದು ವಾರದ ನಂತರ ಈ ಹೇಳಿಕೆ ಬಂದಿದೆ.
ಎರಡನೇ ಮಾನವ-ರೇಟೆಡ್ ನ್ಯೂ ಶೆಪರ್ಡ್ ವಾಹನವು ಬೂಸ್ಟರ್ 5 ಎಂದು ಕರೆಯಲ್ಪಡುವ ಮೊದಲ ಹಂತದ ಮತ್ತು RSS ಕರ್ಮನ್ ಲೈನ್ ಹೆಸರಿನ ಸಿಬ್ಬಂದಿ ಕ್ಯಾಪ್ಸುಲ್ ಅನ್ನು ಒಳಗೊಂಡಿದೆ. ಕರ್ಮನ್ ಲೈನ್ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಬಾಹ್ಯಾಕಾಶ ಗಡಿಯಾಗಿದೆ.
NS-27 ಮಿಷನ್ 12 ಸಂಶೋಧನಾ ಪೇಲೋಡ್‌ಗಳನ್ನು ಉಡ್ಡಯನ ಮಾಡಲು ನಿರ್ಧರಿಸಿದೆ. ಅವುಗಳಲ್ಲಿ ಐದು ಬೂಸ್ಟರ್‌ನಲ್ಲಿ ಮತ್ತು ಏಳು ಕ್ಯಾಪ್ಸುಲ್‌ಗಳಿರಲಿವೆ. ಇವು ಮಾನವ ರಹಿತ ನೌಕೆಗಳಾಗಿರಲಿವೆ. ಇದು ನ್ಯೂ ಶೆಪರ್ಡ್ ಮತ್ತು ಬ್ಲೂ ಒರಿಜಿನ್‌ನ ಬೃಹತ್ ನ್ಯೂ ಗ್ಲೆನ್ ರಾಕೆಟ್‌ಗಾಗಿ ಅಭಿವೃದ್ಧಿಪಡಿಸಿದ ಹೊಸ ನ್ಯಾವಿಗೇಷನ್ ಸಿಸ್ಟಮ್‌ಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಬ್ಲೂ ಒರಿಜಿನ್ ಪ್ರಕಾರ, ಚಂದ್ರನ ಪರಿಸರದಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಎರಡು LIDAR (ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್) ಸಂವೇದಕಗಳನ್ನು ಒಳಗೊಂಡಿರುತ್ತದೆ.
ಇದನ್ನು ಓದಿ:ಚೀನಾ, ಪಾಕ್ ಸೇರಿ ವಿರೋಧಿಗಳ ಮೇಲೆ ಭಾರತದ 52 ಉಪಗ್ರಹಗಳ ಕಣ್ಗಾವಲು: ಏನಿದು ವ್ಯವಸ್ಥೆ?