ಕರ್ನಾಟಕ

karnataka

ETV Bharat / technology

'2035ಕ್ಕೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040ಕ್ಕೆ ಚಂದ್ರನ ಮೇಲೆ ಭಾರತೀಯನ ಪಾದಾರ್ಪಣೆ' - India to set Space Station - INDIA TO SET SPACE STATION

2035ನೇ ಇಸ್ವಿಯ ಹೊತ್ತಿಗೆ ಭಾರತವು ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (IANS)

By ETV Bharat Karnataka Team

Published : Aug 18, 2024, 12:32 PM IST

ನವದೆಹಲಿ: 2035ರ ವೇಳೆಗೆ ಭಾರತವು ತನ್ನದೇಯಾದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ನಿರೀಕ್ಷೆಯಿದೆ ಮತ್ತು ಇದಕ್ಕೆ ಭಾರತೀಯ ಅಂತರಿಕ್ಷ ನಿಲ್ದಾಣ (ಬಿಎಎಸ್​) ಎಂದು ಹೆಸರಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

2024-25ರ ಕೇಂದ್ರ ಬಜೆಟ್​ನಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿದ ಘೋಷಣೆಗಳು ಭವಿಷ್ಯದ ದೃಷ್ಟಿಕೋನವನ್ನು ಹೊಂದಿವೆ ಎಂದು ಸಚಿವರು ಅಭಿಪ್ರಾಯ ಪಟ್ಟರು. 2025 ರ ದ್ವಿತೀಯಾರ್ಧದ ವೇಳೆಗೆ ಭಾರತೀಯನೋರ್ವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು 2040 ರ ವೇಳೆಗೆ ಮೊದಲ ಬಾರಿಗೆ ಭಾರತೀಯನನ್ನು ಚಂದ್ರನ ಮೇಲೆ ಇಳಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

"2023 ರಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ 1,000 ಕೋಟಿ ರೂ. ಹೂಡಿಕೆ ಬಂದಿದೆ. ಮುಂದಿನ 10 ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯು ಐದು ಪಟ್ಟು ಅಥವಾ ಸುಮಾರು 44 ಬಿಲಿಯನ್ ಡಾಲರ್​ಗೆ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದಿಂದ ಪ್ರತಿಭಾ ಪಲಾಯನವನ್ನು ಅಂತ್ಯಗೊಳಿಸಲಿದೆ" ಎಂದು ಸಚಿವ ಸಿಂಗ್ ತಿಳಿಸಿದರು.

"ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಮಿಷನ್ 'ಗಗನಯಾನ್​' ಕೋವಿಡ್​ನಿಂದಾಗಿ ವಿಳಂಬವಾಗಿದ್ದು, ಇದು ಮುಂದಿನ ವರ್ಷ ನಡೆಯಲಿದೆ ಹಾಗೂ ಇದಕ್ಕಾಗಿ ಪ್ರಾಯೋಗಿಕ ಹಾರಾಟ ಯಾನಗಳನ್ನು ಈಗಾಗಲೇ ನಡೆಸಲಾಗುತ್ತಿದೆ. ಇದಲ್ಲದೆ, ಭಾರತವು ಬಾಹ್ಯಾಕಾಶಕ್ಕೆ ರೋಬೋಟ್ ವಿಮಾನಗಳನ್ನು ಕಳುಹಿಸುವ ಗುರಿಯನ್ನು ಹೊಂದಿದೆ ಮತ್ತು ಈ ಮಿಷನ್ ಅಡಿಯಲ್ಲಿ 'ವಾಯುಮಿತ್ರ' ಹೆಸರಿನ ಮಹಿಳಾ ರೋಬೋಟನ್ನು 2025 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ರೋಬೋಟ್ ಗಗನಯಾತ್ರಿಯೊಬ್ಬ ಮಾಡಬಹುದಾದ ಎಲ್ಲಾ ಕಾರ್ಯಾಚರಣೆಗಳನ್ನು ನಡೆಸಿ ಭೂಮಿಗೆ ಮರಳಲಿದೆ" ಎಂದು ಅವರು ಮಾಹಿತಿ ನೀಡಿದರು.

"2023 ರ ಹೊಸ ಬಾಹ್ಯಾಕಾಶ ನೀತಿಯನ್ನು ಉಲ್ಲೇಖಿಸಿದ ಸಚಿವ ಡಾ. ಜಿತೇಂದ್ರ ಸಿಂಗ್, ಹೊಸ ನೀತಿಯು ಭಾರತದಲ್ಲಿ ಈ ವಲಯವನ್ನು ಮುಕ್ತಗೊಳಿಸಿದೆ ಮತ್ತು ಇದರಿಂದ ದೇಶದಲ್ಲಿ ಡಿಜಿಟಲ್ ಬಾಹ್ಯಾಕಾಶ ಸ್ಟಾರ್ಟ್ಅಪ್​​ಗಳ ಸಂಖ್ಯೆ ಹೆಚ್ಚಾಗುತ್ತಿದೆ. 2021 ರಲ್ಲಿ ಕೇವಲ ಒಂದು ಡಿಜಿಟಲ್ ಬಾಹ್ಯಾಕಾಶ ಸ್ಟಾರ್ಟ್ಅಪ್ ಇತ್ತು. ಈಗ ಈ ಸಂಖ್ಯೆ ಸುಮಾರು 300 ಕ್ಕೆ ಏರಿಕೆಯಾಗಿದೆ" ಎಂದು ಅವರು ತಿಳಿಸಿದರು.

ಇತ್ತೀಚೆಗೆ ಸಂಪೂರ್ಣ 3ಡಿ ಮುದ್ರಿತ ಎಂಜಿನ್​ನೊಂದಿಗೆ ಅಗ್ನಿಕುಲ್ ಕಾಸ್ಮೋಸ್ ವಿಶ್ವದ ಮೊದಲ ರಾಕೆಟ್ ಉಡಾವಣೆ ಮಾಡಿರುವುದನ್ನು ಅವರು ಉಲ್ಲೇಖಿಸಿದರು. ಮೂಲಸೌಕರ್ಯವನ್ನು ಬಲಪಡಿಸಲು ಇಸ್ರೋ ಆವರಣದಲ್ಲಿ ಅಗ್ನಿಕುಲ್ ಕಾಸ್ಮೋಸ್ ಖಾಸಗಿ ಲಾಂಚ್ ಪ್ಯಾಡ್ ಅನ್ನು ಸಹ ಸ್ಥಾಪಿಸಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : 6,915 ಕೋಟಿ ರೂ.ಗೆ ತಲುಪಿದ ಭಾರತದ ರಕ್ಷಣಾ ಸಾಮಗ್ರಿ ರಫ್ತು: ಶೇ 78ರಷ್ಟು ಹೆಚ್ಚಳ - Indias Defence Exports

ABOUT THE AUTHOR

...view details