SKODA KYLAQ GLOBAL DEBUT:ಭಾರತದಲ್ಲಿ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಸ್ಕೋಡಾ ಪ್ರವೇಶಿಸಿದೆ. ಈ ವಿಭಾಗದಲ್ಲಿ ಕಂಪನಿಯು ತನ್ನ ಮೊದಲ ಕಾರು ಸ್ಕೋಡಾ ಕೈಲಾಕ್ ಅನ್ನು ಪರಿಚಯಿಸಿದೆ. ಸ್ಕೋಡಾ ಕೈಲಾಕ್ ಅನ್ನು ಭಾರತ-ನಿರ್ದಿಷ್ಟ MQB A0 ಪ್ಲಾಟ್‌ಫಾರ್ಮ್‌ನ ರೂಪಾಂತರದ ಮೇಲೆ ನಿರ್ಮಿಸಲಾಗಿದೆ. ಇದನ್ನು MQB 27 ಎಂದು ಕರೆಯಲಾಗುತ್ತದೆ.
ಸ್ಕೋಡಾ ಆಟೋ ಇಂಡಿಯಾ ಪ್ರಸ್ತುತ ತನ್ನ ಆರಂಭಿಕ ಬೆಲೆಯನ್ನು ಬಹಿರಂಗಪಡಿಸಿದೆ. ಈ ಕಾರನ ಬೆಲೆ ರೂ. 7.89 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಬುಕಿಂಗ್ ಡಿಸೆಂಬರ್ 2, 2024 ರಿಂದ ಶುರುವಾಗಲಿದೆ. ಈ SUV ಜನವರಿ 17, 2025 ರಂದು ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಜನರಿಗೆ ಪರಿಚಯಿಸಲಾಗುವುದು. ಆದರೆ ಡೆಲಿವರಿ ಮಾತ್ರ ಜನವರಿ 27 ರಿಂದ ಆರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಸ್ಕೋಡಾ ಕೈಲಾಕ್ ವಿನ್ಯಾಸ: ಇದರ ವಿನ್ಯಾಸದ ಬಗ್ಗೆ ಮಾತನಾಡುವುದಾದ್ರೆ, ಕೈಲಾಕ್ ಭಾರತದಲ್ಲಿ ಮೊದಲ ಸ್ಕೋಡಾ ಕಾರು. ಇದರಲ್ಲಿ ನ್ಯೂ ಮಾಡರ್ನ್ ಸಾಲಿಡ್ ಡಿಸೈನ್ ಲಾಂಗ್ವೆಜ್ ನೀಡಲಾಗಿದೆ. ಮುಂಭಾಗವು ಬಟರ್ಫ್ಲೈ ಗ್ರಿಲ್ ಅನ್ನು ಹೊಂದಿದೆ. ಇದು ಸ್ಲಿಮ್ ಎಲ್ಇಡಿ ಡಿಆರ್ಎಲ್ಗಳಿಂದ ಸುತ್ತುವರಿದಿದೆ. ಮುಖ್ಯ ಹೆಡ್‌ಲ್ಯಾಂಪ್‌ಗಳು ಕೆಳಮುಖವಾಗಿವೆ. ಆದರೆ ಬಂಪರ್ ಪ್ರಮುಖವಾದ ಸೆಂಟರ್ ಏರ್ ವೆಂಟ್ ಮತ್ತು ಇದರ ಕೆಳಭಾಗದಲ್ಲಿ ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ನೀಡಲಾಗಿದೆ.
ಉನ್ನತ ಮಾದರಿಯು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ಗಳನ್ನು ಹೊಂದಿದೆ. ಹಿಂಭಾಗದ ವಿನ್ಯಾಸವು ಕುಶಾಕ್‌ನೊಂದಿಗೆ ಕೆಲವು ಹೋಲಿಕೆಗಳನ್ನು ಹಂಚಿಕೊಳ್ಳುತ್ತದೆ. ಆದರೂ ಇದು ಬ್ಲ್ಯಾಕ್ ಟ್ರಿಮ್ ಸ್ಟ್ರಿಪ್‌ಗೆ ಜೋಡಿಸಲಾದ ಸರಳವಾಗಿ ಕಾಣುವ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಹಿಂಭಾಗದ ಬಂಪರ್ ಬಹಳಷ್ಟು ಕ್ಲಾಡಿಂಗ್ ಮತ್ತು ಮೇನ್ ಸ್ಕಿಡ್ ಪ್ಲೇಟ್ ಅಂಶವನ್ನು ಪಡೆಯುತ್ತದೆ.
ಸ್ಕೋಡಾ ಕೈಲಾಕ್ ಇನ್ಡಿಸೈನ್:ಇದರ ಕ್ಯಾಬಿನ್ ವಿನ್ಯಾಸವು ಕುಶಾಕ್ ಅನ್ನು ಹೋಲುತ್ತದೆ. ಉನ್ನತ ಮಾದರಿಯು 10-ಇಂಚಿನ ಸೆಂಟರ್ ಟಚ್‌ಸ್ಕ್ರೀನ್, ಎರಡು-ಸ್ಪೋಕ್ ಸ್ಟೀರಿಂಗ್ ಮತ್ತು ವರ್ಟಿಕಲ್ ಓರಿಯೆಂಟೆಡ್ ಸೈಡ್ ವೆಂಟ್‌ಗಳನ್ನು ಪಡೆಯುತ್ತದೆ. ಇದು ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್‌ನಲ್ಲಿರುವ ಇಂಟಿರಿಯರ್ ಅನ್ನು ಹೋಲುತ್ತದೆ.