ಕರ್ನಾಟಕ

karnataka

ETV Bharat / technology

'ಸೈನ್ಸ್ ಸಿಟಿ ಆಫ್ ಬೆಂಗಳೂರು' ಅನಾವರಣ: ಸಿವಿ ರಾಮನ್ ತಬಲಾ, ಸಿಂಪ್ಯೂಟರ್​ ಸೇರಿ 30 ಮಾಡೆಲ್​ಗಳ ಪ್ರದರ್ಶನ - SCI 560 science exhibition - SCI 560 SCIENCE EXHIBITION

ಬೆಂಗಳೂರಿನಲ್ಲಿನ ಶನಿವಾರದಿಂದ 'ಎಸ್‌ಸಿಐ560' ಎಂಬ ವಿಜ್ಞಾನ ವಸ್ತು ಪ್ರದರ್ಶನ ಆರಂಭವಾಗಿದೆ. ಇಲ್ಲಿ 19ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ವಿಜ್ಞಾನಿಗಳು ಸಂಶೋಧನೆಗೆ ಬಳಸಿದ ಅಪರೂಪದ ವಸ್ತುಗಳು, ಸಂಶೋಧನೆ ನಡೆದು ಬಂದ ಹಾದಿಯನ್ನು ವಿವರಿಸಲಾಗುತ್ತಿದೆ.

'ಎಸ್‌ಸಿಐ560' ವಿಜ್ಞಾನ ವಸ್ತು ಪ್ರದರ್ಶನ
'ಎಸ್‌ಸಿಐ560' ವಿಜ್ಞಾನ ವಸ್ತು ಪ್ರದರ್ಶನ (ETV Bharat)

By ETV Bharat Karnataka Team

Published : Aug 25, 2024, 7:30 AM IST

ಬೆಂಗಳೂರು:19ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ವಿಜ್ಞಾನಿಗಳು ಸಂಶೋಧನೆಗೆ ಬಳಸಿದ ಅಪರೂಪದ ವಸ್ತುಗಳು, ಸಂಶೋಧನೆ ನಡೆದು ಬಂದ ಹಾದಿಯನ್ನು ವಿವರಿಸುವಂತ 'ಎಸ್‌ಸಿಐ560'ಎಂಬ ‘ಸೈನ್ಸ್​ ಸಿಟಿ ಆಫ್ ಬೆಂಗಳೂರಿನ ವೈಜ್ಞಾನಿಕ ಇತಿಹಾಸ’ ರಾಜಧಾನಿಯಲ್ಲಿ ಪ್ರಾರಂಭವಾಗಿದೆ.

'ಎಸ್‌ಸಿಐ560' ವಿಜ್ಞಾನ ವಸ್ತು ಪ್ರದರ್ಶನ (ETV Bharat)

ಯುವ ಸಮುದಾಯವನ್ನು ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಸಕ್ರಿಯಗೊಳಿಸುವ ಗುರಿಯಿಟ್ಟುಕೊಂಡು ರಾಜ್ಯ ಸರ್ಕಾರ ಹಾಗೂ ಇಂಟರ್​​ ನ್ಯಾಶನಲ್​​ ಸೈನ್ಸ್​​ ಗ್ಯಾಲರಿ ನೆಟ್‌ವರ್ಕ್​ ಸಹಯೋಗದಲ್ಲಿ ಹೆಬ್ಬಾಳದಲ್ಲಿ "ಬೆಂಗಳೂರು ಸೈನ್ಸ್​ ಗ್ಯಾಲರಿ" ಆರಂಭಿಸಿದೆ.

ಗ್ಯಾಲರಿಯ 7ನೇ 'ಎಸ್‌ಸಿಐ560'ಪ್ರದರ್ಶನದಲ್ಲಿ 19ನೇ ಶತಮಾನದಿಂದ ಇಂದಿನವರೆಗೆ ಕೈಗಾರಿಕಾ, ಮಿಲಿಟರಿ ಮತ್ತು ವಿಜ್ಞಾನ ಸಂಶೋಧನ ಕೇಂದ್ರಗಳಿಗೆ ಬೆಂಗಳೂರು ನೀಡಿದ ವೈಜ್ಞಾನಿಕ ಕೊಡುಗೆಗಳ ಸಂಪೂರ್ಣವಾದ ಚಿತ್ರಣ ಕಾಣ ಸಿಗಲಿದೆ. ವಿಜ್ಞಾನಲೋಕದ ಸಂಶೋಧನೆ, ಕೊಡುಗೆಯನ್ನು ಯುವ ವಿದ್ಯಾರ್ಥಿಗಳು ಕಣ್ತುಂಬಿಕೊಳ್ಳಲು ಅನುವು ಮಾಡಿಕೊಟ್ಟಿದೆ.

'ಎಸ್‌ಸಿಐ560' ವಿಜ್ಞಾನ ವಸ್ತು ಪ್ರದರ್ಶನ (ETV Bharat)

'ಎಸ್‌ಸಿಐ560'ನಲ್ಲಿ ಮೊದಲ ವಿಶ್ವ ಯುದ್ಧಕ್ಕೆ ಭಾರತೀಯರು ಬಳಸಿದ ಟಾರ್ಪಿಡೋ (ಕಬ್ಬಿಣದ ಈಟಿ) ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಇದನ್ನು ವಿನ್ಯಾಸ ಹಾಗೂ ನಿರ್ಮಿಸಿದ್ದು ಬೆಂಗಳೂರಿನಲ್ಲಿ. ಅಂದಿನ ಮದ್ರಾಸ್ ಎಂಜಿನಿಯರ್ ಗ್ರೂಪ್ ಟಾರ್ಪಿಡೋ ತಯಾರಿಸಿತ್ತು. ಇದನ್ನು ಮೊದಲ ವಿಶ್ವ ಯುದ್ಧ ಸಂದರ್ಭದಲ್ಲಿ ಸೈನಿಕರು ಶತ್ರುಗಳ ವಿರುದ್ಧ ಹೋರಾಡಲು ಬಳಕೆ ಮಾಡಿದ್ದರು ಎಂಬುದಾಗಿ ಆಯೋಜಕರು ಮಾಹಿತಿ ನೀಡಿದರು.

'ಎಸ್‌ಸಿಐ560' ವಿಜ್ಞಾನ ವಸ್ತು ಪ್ರದರ್ಶನ (ETV Bharat)

ಮನ್ಸೆಲ್ ರಿಕ್ಟರ್ ಆಕರ್ಷಣೆ: 2019ರಲ್ಲಿ ವಿವಿಧ ಕೆರೆಗಳ ಮಣ್ಣು ಸಂಗ್ರಹಿಸಿ ಬೇರೆ ಬೇರೆ ಸ್ಥಳ ನೀರು ಹಾಗೂ ಬ್ಯಾಕ್ಟೀರಿಯಗಳನ್ನು ಹಾಕಿ ಬೆಳೆಸಲಾಗಿದೆ. ಇದೀಗ ನಿರಂತರವಾಗಿ ಸೂಕ್ಷ್ಮಾಣು ಜೀವಿಗಳ ಸಂತಾನೋತ್ಪತ್ತಿ ನಡೆಯುತ್ತಿದ್ದು, ಮಣ್ಣಿಗೆ ತಕ್ಕಂತೆ ವಿಭಿನ್ನ ಆಕರ್ಷಕ ಬಣ್ಣಗಳ ಚಿತ್ತಾರ ಫ್ರೇಮ್‌ನಲ್ಲಿ ಕಾಣಲಿದೆ.

ಸಿವಿ ರಾಮನ್ ತಬಲಾ:ಭೌತಶಾಸ್ತ್ರಜ್ಞ ಡಾ. ಸಿ.ವಿ. ರಾಮನ್​ ಅವರು ವಾದ್ಯಗಳ ಕಂಪನಗಳ ಕುರಿತು ಅಧ್ಯಯನ ನಡೆಸಿದ ವೇಳೆ ಸಂಶೋಧನೆಗೆ ಬಳಕೆ ಮಾಡಲಾದ ತಬಲಾ ಪ್ರದರ್ಶನಕ್ಕೆ ಇಡಲಾಗಿದೆ. ಸಾರ್ವಜನಿಕರಿಗೆ ಶಬ್ಧ ಅಧ್ಯಯನದ ಕುರಿತು ಪ್ರಾಯೋಗಿಕವಾಗಿ ವಾದ್ಯದ ಕಂಪನಗಳು ಮತ್ತು ಶಬ್ಧ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನ ಸಿಂಪ್ಯೂಟರ್: 2001-2003ರ ಅವಧಿಯಲ್ಲಿ ಕಂಪ್ಯೂಟರ್​ ಪೂರ್ವದಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಸಿಂಪ್ಯೂಟರ್ ಆವಿಷ್ಕಾರ ಮಾಡಿತ್ತು. ಇದನ್ನು ವಿಜ್ಞಾನಿಗಳು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಬಹುದಾಗಿತ್ತು, ಜತೆಗೆ ಕೀಬೋರ್ಡ್ನ ಅಗತ್ಯವಿದ್ದಿರಲಿಲ್ಲ. ಇದು ನೋಡಲು ಇಂದಿನ ಸ್ಮಾರ್ಟ್ ಫೋನ್ ಮಾದರಿಯಲ್ಲಿದ್ದರೂ, ಕಂಪ್ಯೂಟರ್ ಮಾಡುವ ಕೆಲಸ ಸಿಂಪ್ಯೂಟರ್‌ಗಳು ಮಾಡುತ್ತಿದ್ದವು. ಇದನ್ನೂ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.

ವಿವಿಧ ಪ್ರಯೋಗಾಲಯಗಳು:ಸೈನ್ಸ್​ ಗ್ಯಾಲರಿಯಲ್ಲಿ ರಾಷ್ಟ್ರೀಯ ವಿಜ್ಞಾನದ ಜೀವಾಣು ಮಾಡೆಲ್​​​ ಸೇರಿದಂತೆ ಬೆಂಗಳೂರಿನ ಪಕ್ಷಿಗಳ ಧ್ವನಿ ಸಂಗ್ರಹ ಪ್ರದರ್ಶನ, ದೂರವಾಣಿಯ ಆವಿಷ್ಕಾರ, ಬೆಂಗಳೂರಿನ ಮ್ಯಾಪಿಂಗ್​, ಕೆರೆಗಳ ವೃತ್ತಾಂತಗಳು, ಮನಸ್ಸು ಮತ್ತು ಯಂತ್ರಗಳು, ಕಾಸ್ಮಿಕ್ ಕಿರಣಗಳು, ನಗರದಲ್ಲಿ ಅಂಚೆ ಚೀಟಿಗಳು, ಪ್ರಸರಣಾ ಎಲೆಕ್ಟ್ರಾನಿಕ್ ಸೇರಿದಂತೆ ಇತರೆ ವಿಚಾರಗಳ ಸಂಪೂರ್ಣ ಮಾಹಿತಿಗಳು 30 ಮಾಡೆಲ್‌ಗಳ ಮೂಲಕ ಪ್ರದರ್ಶನಕ್ಕೆ ಇಡಲಾಗಿದೆ.

ಉಚಿತ ಪ್ರವೇಶ:ಸಾರ್ವಜನಿಕರಿಗೆ ಉಚಿತ ಪ್ರವೇಶದ ಅವಕಾಶವಿದೆ. ಸೋಮವಾರ, ಮಂಗಳವಾರ ಹೊರತುಪಡಿಸಿ ಬುಧವಾರದಿಂದ ಭಾನುವಾರದವರೆಗೆ ಕಾರ್ಬನ್ ಸೈನ್ಸ್​ ಗ್ಯಾಲರಿ ತೆರೆದಿರಲಿದೆ. ಬೆಳಗ್ಗೆ 10 ರಿಂದ ರಾತ್ರಿ 10ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ವಿಶೇಷ 12 ಮಂದಿಯ ತಂಡ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ವಿಜ್ಞಾನ ಮಾದರಿಗಳ ಕುರಿತು ವಿವರಣೆ ನೀಡಲಿದ್ದಾರೆ.

ಇದನ್ನೂ ಓದಿ:ಮುಂದಿನ ಒಲಿಂಪಿಕ್​​ನಲ್ಲಿ ಪಾಲ್ಗೊಳ್ಳುವ ಬಗ್ಗೆ ಚಿಂತಿಸಿಲ್ಲ: ಅಥ್ಲೀಟ್​ ಪೂವಮ್ಮ - Athlete Poovamma

ABOUT THE AUTHOR

...view details