Samsung Tri-Fold Smartphone: ಟೆಕ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಕಾಲಕಾಲಕ್ಕೆ ಹೊಸ ರೀತಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಬೇಕು. ಈ ಹಿನ್ನೆಲೆ ಗ್ರಾಹಕರ ಅಭಿರುಚಿ, ಆಸಕ್ತಿಗೆ ತಕ್ಕಂತೆ ಹೊಸ ಮಾದರಿಯ ಮೊಬೈಲ್‌ಗಳನ್ನು ತರಲು ಎಲ್ಲ ಕಂಪನಿಗಳೂ ಆಸಕ್ತಿ ತೋರುತ್ತಿವೆ. ಪ್ರಸ್ತುತ, ಫೋಲ್ಡಬಲ್ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ. ಹೀಗಾಗಿ ಸ್ಮಾರ್ಟ್ ಫೋನ್ ತಯಾರಕರು ಫೋಲ್ಡಬಲ್ ಮೊಬೈಲ್‌ಗಳನ್ನು ಹೊರತರಲು ಪೈಪೋಟಿ ನಡೆಸುತ್ತಿದ್ದಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳಿಂದ ಫೋಲ್ಡಬಲ್ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಈ ಹಿನ್ನೆಲೆ ಸ್ಯಾಮ್‌ಸಂಗ್ ಸಹ ತನ್ನ ಹೊಸ ಮಾದರಿಯ ಫೋಲ್ಡಬಲ್ ಮೊಬೈಲ್‌ಗಳನ್ನು ಪರಿಚಯಿಸಲು ಉತ್ಸುಕವಾಗಿದೆ. ಸ್ಯಾಮ್‌ಸಂಗ್ ಟ್ರೈ-ಫೋಲ್ಡ್ ಮೊಬೈಲ್ ಅನ್ನು ಹೊರ ತರಲು ಕೆಲಸ ಮಾಡುತ್ತಿದೆ ಎಂಬ ವದಂತಿಗಳು ಕೆಲವು ಸಮಯದಿಂದ ಸುತ್ತುತ್ತಿದ್ದವು. ಆದರೆ, ಇತ್ತೀಚಿನ ZDNet ಕೊರಿಯಾ ವರದಿ ಇವುಗಳ ಬಗ್ಗೆ ಸ್ಪಷ್ಟತೆ ನೀಡಿದೆ.
ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಎಂಟ್ರಿ - ಲೆವೆಲ್ ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಫೋನ್ ಮತ್ತು ಟ್ರೈ-ಫೋಲ್ಡ್ ಮಾಡೆಲ್ ತರಲು ಕೆಲಸ ಮಾಡುತ್ತಿದೆ ಎಂದು ವರದಿ ಬಹಿರಂಗಪಡಿಸುತ್ತದೆ. ಈ ಎರಡು ಫೋಲ್ಡಬಲ್ ಮೊಬೈಲ್‌ಗಳನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು ಎಂದು ಸ್ಯಾಮ್‌ಸಂಗ್ ಹೇಳಿದೆ.
ಸ್ಯಾಮ್‌ಸಂಗ್ ಮಾತ್ರವಲ್ಲದೇ Xiaomi, Honor, Oppo ನಂತಹ ಇತರ ಸ್ಮಾರ್ಟ್‌ಫೋನ್ ತಯಾರಕರು ಸಹ ತಮ್ಮ ಟ್ರೈ- ಫೋಲ್ಡ್ ಮೊಬೈಲ್‌ಗಳನ್ನು ತರಲು ಕೆಲಸ ಮಾಡುತ್ತಿವೆ ಎಂದು ವರದಿಯಾಗಿದೆ. ಆದರೆ, ಅವರು ತಮ್ಮ ಟ್ರೈ-ಫೋಲ್ಡ್ ಮೊಬೈಲ್‌ಗಳನ್ನು ಬಿಗ್ ಸ್ಕ್ರೀನ್ನೊಂದಿಗೆ ಹೊರ ತರಬಹುದು ಎಂದು ತೋರುತ್ತದೆ.
Xiaomi ಮತ್ತು Oppo ನಂತಹ ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗೆ ಫೋಲ್ಡಬಲ್ ಡಿಸ್‌ಪ್ಲೇಗಳನ್ನು ಪೂರೈಸುವಲ್ಲಿ Samsung Displays ಪ್ರಮುಖ ಪಾತ್ರ ವಹಿಸಿದೆ. ಆದರೆ, ಈ ZDNet ಕೊರಿಯಾ ವರದಿಯ ಪ್ರಕಾರ ಫೋಲ್ಡಬಲ್ ಫೋನ್‌ಗಳಲ್ಲಿ ಬಳಸಲಾಗುವ OLED ಡಿಸ್ಪ್ಲೇಗಳ ಬೇಡಿಕೆ ಈ ವರ್ಷ 10 ಪ್ರತಿಶತದಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಈ ವರ್ಷದ ಆರಂಭದಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡಿದ Galaxy Z Flip 6 ಮತ್ತು Galaxy Z Fold 6 ಮಾದರಿಗಳಿಗೆ ಬೇಡಿಕೆ ನಿರೀಕ್ಷೆಗಿಂತ ಕಡಿಮೆಯಾಗಿದೆ. ಇದರೊಂದಿಗೆ, ಹೊಸ ಫೋಲ್ಡಬಲ್ ಡಿಸ್ಪ್ಲೇಗಳ ಅಭಿವೃದ್ಧಿಯಲ್ಲಿ ಪ್ರಮುಖ ಬದಲಾವಣೆ ಕಂಡು ಬರುತ್ತಿದೆ.
ಆದರೆ ಇತ್ತೀಚೆಗೆ Huawei ಕಂಪನಿಯು ವಿಶ್ವದ ಮೊದಲ ಟ್ರೈ-ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. Huawei ಇದನ್ನು Mate XT ಎಂಬ ಹೆಸರಿನೊಂದಿಗೆ ತಂದಿದೆ. ಈ ಮೊಬೈಲ್ ಮಾರಾಟದಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಇದರೊಂದಿಗೆ, ಸ್ಯಾಮ್‌ಸಂಗ್ ತನ್ನ ಪ್ರತಿಸ್ಪರ್ಧಿ Huawei ಅನ್ನು ಸೋಲಿಸಲು ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಅನ್ನು ತರಲು ಪ್ರಯತ್ನಿಸುತ್ತಿದೆ. ಈ ಮೊಬೈಲ್ 2025ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಓದಿ:ಮ್ಯಾಕ್ನ ಹೊಸ ಅಲೆಗಳನ್ನು ಘೋಷಿಸಲು ಸಿದ್ಧವಾಗಿದೆ ಆಪಲ್!