ಕರ್ನಾಟಕ

karnataka

ETV Bharat / technology

ಇಂದಿನಿಂದ ಮಾರುಕಟ್ಟೆಗೆ ಸ್ಯಾಮ್​ಸಂಗ್​​ ಗ್ಯಾಲಕ್ಸಿ ಎಸ್​ 24 ಸರಣಿ ಮೊಬೈಲ್​

ಆ್ಯಪಲ್​ನ ಐಫೋನ್ 15​ರ ಬಳಿಕ ಭಾರತದಲ್ಲಿಯೇ ತಯಾರಾದ ಸ್ಮಾರ್ಟ್​ಫೋನ್​ ಇದಾಗಿದೆ.

Samsung Galaxy S24 now available in indian market
Samsung Galaxy S24 now available in indian market

By ETV Bharat Karnataka Team

Published : Jan 31, 2024, 3:28 PM IST

ನವದೆಹಲಿ: ಐಫೋನ್​​​ 15ರ ಬಳಿಕ ದಕ್ಷಿಣ ಕೊರಿಯಾದ ದೈತ್ಯ ಸಂಸ್ಥೆ ಸ್ಯಾಮ್​ಸಂಗ್​ ಭಾರತದ ಘಟಕದಲ್ಲಿ ಗ್ಯಾಲಕ್ಸಿ ಎಸ್​24 ಸರಣಿಯ ಸ್ಮಾರ್ಟ್​​ಫೋನ್​ಗಳನ್ನು ಉತ್ಪಾದನೆ ಮಾಡಿದೆ. ಈ ಫೋನ್​ ಇಂದಿನಿಂದ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಗ್ರಾಹಕರು ಇದನ್ನು ಕೊಳ್ಳಬಹುದಾಗಿದೆ.

ಉತ್ತರ ಪ್ರದೇಶದ ನೋಯ್ಡಾದ ಸ್ಯಾಮ್​​ಸಂಗ್​​​ ಫ್ಯಾಕ್ಟರಿಯಲ್ಲಿ ಈ ಮೂರು ಗ್ಯಾಲಕ್ಸಿ ಸರಣಿಯ ಸ್ಮಾರ್ಟ್​ಫೋನ್​ಗಳ ನಿರ್ಮಾಣ ಮಾಡಲಾಗಿದೆ. ಅವು ಗ್ಯಾಲಕ್ಸಿ ಎಸ್​24 ಅಲ್ಟ್ರಾ, ಗ್ಯಾಲಕ್ಸಿ ಎಸ್​ 24 ಪ್ಲಸ್​​ ಮತ್ತು ಗ್ಯಾಲಕ್ಸಿ ಎಸ್​​ 24 ಆಗಿದೆ. ಈ ಸ್ಮಾರ್ಟ್​ಫೋನ್​ಗಳು ಎಐ ತಂತ್ರಜ್ಞಾನದೊಂದಿಗೆ ಅದ್ಬುತ ಫೀಚರ್​ಗಳಾದ ಲೈವ್​​ ಟ್ರಾನ್ಸ್​ಲೇಟ್​​, ಸರ್ಕಲ್​ ಟೂ ಸರ್ಚ್​, ಪ್ರೊ ವಿಷವಲ್​ ಇಂಜಿನ್​ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕ ಸ್ನೇಹಿಯಾಗಿದೆ.

ಹೀಗಿದೆ ದರ: ಪ್ರಿ ಬುಕ್ಕಿಂಗ್​ ಹೊರತಾಗಿ ಇಂದಿನಿಂದ ಮಾರುಕಟ್ಟೆಯಲ್ಲಿ ಕೊಳ್ಳಲು ಲಭ್ಯವಿರುವ ಗ್ಯಾಲಕ್ಸಿ ಎಸ್​ 24 ಸರಣಿಯ ಮೊಬೈಲ್​ಗಳು ವಿವಿಧ ರಾಮ್​​, ಸ್ಟೋರೇಜ್​ ಹಾಗೂ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಗ್ಯಾಲಕ್ಸಿ ಎಸ್​24 8 ಜಿಬಿ 256 ಜಿಬಿ ಮಾಡೆಲ್​ ಬೆಲೆ 79,999ನಿಂದ 89,999ರೂವರೆಗೆ ಇದೆ. ಗ್ಯಾಲಕ್ಸಿ ಎಸ್​24ಪ್ಲಸ್​​ 12 ಜಿಬಿ 256 ಜಿಬಿ ಮಾದರಿ ಫೋನ್​, 99,999ರಿಂದ 1,09,999 ರೂವರೆಗೆ ಇದೆ. ಗ್ಯಾಲಕ್ಸಿ ಎಸ್​ 24 ಅಲ್ಟ್ರಾ ಇವುಗಳಿಗಿಂತ ಕೊಂಚ ದುಬಾರಿಯಾಗಿದ್ದು, 12ಜಿಬಿ 256 ಜಿಬಿ ಮಾಡೆಲ್​ ದರ 1,29,000 ದಿಂದ 159,999 ರೂವರೆಗೆ ಲಭ್ಯವಿದೆ.

ಗ್ಯಾಲಕ್ಸಿ ಎಸ್​24 ಪ್ಲಸ್​ ಕೊಬಾಲ್ಡ್​​ ವೈಲೆಟ್​​ ಮತ್ತು ಒನೆಕ್ಸ್​​ ಬ್ಲಾಕ್ ಬಣ್ಣದಲ್ಲಿ ಲಭ್ಯವಿದ್ದರೆ, ಗ್ಯಾಲಕ್ಸಿ ಎಸ್​24 ಅಂಬರ್​ ಯೆಲ್ಲೊ, ಕೊಬಾಲ್ಡ್​​ ವೈಲೆಟ್​​ ಮತ್ತು ಒನೆಕ್ಸ್​​ ಬ್ಲಾಕ್​ ಬಣ್ಣದಲ್ಲಿ ಲಭ್ಯವಿದೆ. ಟೈಟಾನಿಯಂ ಫ್ರೇಂ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಇದರ ಬಾಳಿಕೆ ದೀರ್ಘಕಾಲ ಬರಲಿದೆ.

ಸ್ಯಾಮ್​ಸಂಗ್ ಈ ಎಲ್ಲ ಮೂರು ಫೋನ್​ಗಳಿಗೆ ಏಳು ಜನರೇಷನ್​ವರೆಗೆ ಆಪರೇಟಿಂಗ್​ ಸಿಸ್ಟಮ್ ಅಪ್ಡೇಟ್​ ಮತ್ತು ಏಳು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ಸ್​ ನೀಡುವುದಾಗಿ ಭರವಸೆ ನೀಡಿದೆ. ಸ್ಯಾಮ್​ಸಂಗ್ ಕೀಬೋರ್ಡ್​ನಲ್ಲಿ ಅಳವಡಿಸಲಾದ ಎಐ ತಂತ್ರಜ್ಞಾನವು ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ನೈಜ ಸಮಯದಲ್ಲಿ ಸಂದೇಶಗಳನ್ನು ಭಾಷಾಂತರಿಸಬಲ್ಲದು.

ಗ್ಯಾಲಕ್ಸಿ 24 ಸರಣಿಯು ಸ್ಯಾಪ್​ಡ್ರಾಗನ್​ 8 ಜೆನ್​ 3 ಮೊಬೈಲ್​ ಫ್ಲಾಟ್​​ಫಾರ್ಮ್​ನಿಂದ ರಚಿತವಾಗಿದೆ. ಕ್ಯಾಮೆರಾದಲ್ಲಿ ಪ್ರೊವಿಶುವಲ್​ ಎಂಜಿನ್​ ಹೊಂದಿದ್ದು, ಎಐ ಆಧಾರಿತ ಸಾಧನಗಳು ಇಮೇಜ್​ ಸೆರೆ ಸಾಮರ್ಥ್ಯದ ಗುಣಮಟ್ಟವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ದಾಖಲೆಯ 2.5 ಲಕ್ಷ ಪ್ರೀ - ಬುಕಿಂಗ್ ಪಡೆದ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​24

ABOUT THE AUTHOR

...view details