ಕರ್ನಾಟಕ

karnataka

ETV Bharat / technology

ಸ್ಯಾಮ್ಸಂಗ್ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳು ಹೀಗಿವೆ - Samsung Galaxy M55s 5G - SAMSUNG GALAXY M55S 5G

Samsung Galaxy M55s 5G: ಸ್ಯಾಮ್ಸಂಗ್ ಮತ್ತೊಂದು ಹೊಸ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 20 ಸಾವಿರ ರೂಪಾಯಿ ಬೆಲೆಯ ಸ್ಮಾರ್ಟ್​ಫೋನ್​ನ ವೈಶಿಷ್ಟ್ಯಗಳು ಇಲ್ಲಿವೆ.

SMARTPHONE LAUNCHED  GALAXY M55S 5G LAUNCHED  SAMSUNG GALAXY NEW PHONE PRICE  SAMSUNG GALAXY FEATURES
ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ (Samsung)

By ETV Bharat Tech Team

Published : Sep 24, 2024, 10:43 AM IST

Samsung Galaxy M55s 5G:ಪ್ರಮುಖ ಮೊಬೈಲ್ ತಯಾರಕ ಕಂಪನಿ ಸ್ಯಾಮ್‌ಸಂಗ್ ಮತ್ತೊಂದು ಹೊಸ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು M ಸರಣಿಯ M55s (Samsung Galaxy M55s 5G) ಫೋನ್ ಆಗಿದೆ. ಈ ಹಿಂದೆ M55 ಮತ್ತು F55 ಫೋನ್‌ಗಳನ್ನು ಹೊರತಂದಿದ್ದು, ಸಣ್ಣ ಬದಲಾವಣೆಗಳೊಂದಿಗೆ ಇದೀಗ ಹೊಸ ಫೋನ್ ರಿಲೀಸ್ ಮಾಡಿದೆ.

Samsung Galaxy M55s 5G 8GB+256GB ವೇರಿಯಂಟ್ Sನ ಬೆಲೆ 19,999 ರೂ ಆಗಿದೆ. 12GB RAM ಮತ್ತು 256GB ಸ್ಟೋರೇಜ್​ನ ಇನ್ನೂ ಎರಡು ರೂಪಾಂತರಗಳಿದ್ದರೂ, ಅವುಗಳ ಬೆಲೆಗಳನ್ನು ಬಹಿರಂಗಪಡಿಸಿಲ್ಲ. ಅಮೆಜಾನ್, ಸ್ಯಾಮ್‌ಸಂಗ್ ಇಂಡಿಯಾದ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಸೆಪ್ಟಂಬರ್ 26ರಂದು ಸ್ಮಾರ್ಟ್​ಫೋನ್​ನ ಮಾರಾಟ ಪ್ರಾರಂಭವಾಗಲಿದೆ. ಆಯ್ದ ಬ್ಯಾಂಕ್ ಕಾರ್ಡ್​ಗಳ ಮೂಲಕ ಖರೀದಿಸಿದರೆ 2 ಸಾವಿರ ರೂ ರಿಯಾಯಿತಿ ಇದೆ. ಕೋರಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

Samsung Galaxy M55s 5G ಸ್ಮಾರ್ಟ್​ಫೋನ್ (Samsung)

ಫೋನ್‌ನ ವೈಶಿಷ್ಟ್ಯಗಳು: 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್​ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್​ ಸಪೋರ್ಟ್​ ಮಾಡುತ್ತದೆ. 1000 ನಿಟ್ಸ್ ಗರಿಷ್ಠ ಬ್ರೈಟ್​ನೆಸ್​ ನೀಡಲಾಗಿದೆ. ಸ್ನಾಪ್‌ಡ್ರಾಗನ್ 7 ಜನರೇಷನ್ 1 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ.

Samsung Galaxy M55s 5G ಸ್ಮಾರ್ಟ್​ಫೋನ್ (Samsung)

50MP ಹಿಂಬದಿ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ ಬರುತ್ತದೆ. 8 MP ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮೆರಾ ಮತ್ತು 2 MP ಮ್ಯಾಕ್ರೋ ಕ್ಯಾಮೆರಾ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದು. 5000 mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ, ಇನ್-ಡಿಸ್​ಪ್ಲೇ ಫಿಂಗರ್‌ಪ್ರಿಂಟ್ ಸೇರಿದಂತೆ ಮುಂತಾದ ಸೌಲಭ್ಯಗಳಿವೆ.

ಇದನ್ನೂ ಓದಿ:ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌: ₹7 ಸಾವಿರಕ್ಕಿಂತ ಕಡಿಮೆ ಬೆಲೆಗೆ POCO 5G ಫೋನ್‌ - Discount On POCO Smartphones

ABOUT THE AUTHOR

...view details