ನವದೆಹಲಿ: ನವೀನ ತಂತ್ರಜ್ಞಾನವನ್ನೊಳಗೊಂಡ ಗ್ಯಾಲಕ್ಸಿ ಎ 55 5ಜಿ ಮತ್ತು ಗ್ಯಾಲಕ್ಸಿ ಎ 35 5ಜಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದಾಗಿ ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್ಸಂಗ್ ಇಂದು ಘೋಷಿಸಿದೆ. ಹೊಸ ಎ ಸರಣಿಯ ಸ್ಮಾರ್ಟ್ಫೋನ್ಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್+ ಸುರಕ್ಷತೆ, ಎಐನಿಂದ ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಟ್ಯಾಂಪರ್-ನಿರೋಧಕ ಸೆಕ್ಯೂರಿಟಿ ವೈಶಿಷ್ಟ್ಯ, ಸ್ಯಾಮ್ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಫ್ಲ್ಯಾಗ್ಶಿಪ್ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ.
ಫ್ಲ್ಯಾಗ್ ಶಿಪ್ ಮಾದರಿಯ ವಿನ್ಯಾಸ ಮತ್ತು ದೀರ್ಘ ಬಾಳಿಕೆ: ಗ್ಯಾಲಕ್ಸಿ ಎ 55 5ಜಿ ಮೆಟಲ್ ಫ್ರೇಮ್ ಮತ್ತು ಗ್ಯಾಲಕ್ಸಿ ಎ 35 5ಜಿ ಪ್ರೀಮಿಯಂ ಗ್ಲಾಸ್ ಬ್ಯಾಕ್ ಅನ್ನು ಹೊಂದಿದೆ. ಆವ್ಸಮ್ ಲೈಲಾಕ್, ಆವ್ಸಮ್ ಐಸ್ ಬ್ಲೂ ಮತ್ತು ಆವ್ಸಮ್ ನೇವಿ ಬಣ್ಣಗಳಲ್ಲಿ ಈ ಫೋನ್ಗಳು ಲಭ್ಯವಿವೆ. ಐಪಿ 67 ರೇಟಿಂಗ್ ಹೊಂದಿರುವುದರಿಂದ ಶುದ್ಧ ನೀರಿನಲ್ಲಿ 1 ಮೀಟರ್ ಆಳದಲ್ಲಿ 30 ನಿಮಿಷಗಳವರೆಗೆ ಏನೂ ಆಗದೇ ತಡೆಯ ಬಲ್ಲವು. ಧೂಳು ಮತ್ತು ಮರಳಿನಿಂದ ಯಾವುದೇ ಪ್ರತಿಕೂಲ ಪರಿಣಾಮ ಆಗದಂತೆ ಇವುಗಳನ್ನು ನಿರ್ಮಿಸಲಾಗಿದೆ.
6.6-ಇಂಚಿನ ಎಫ್ಎಚ್ಡಿ+ ಸೂಪರ್ ಅಮೋಲೆಡ್ ಡಿಸ್ಪ್ಲೇ ಮತ್ತು ಮಿನಿಮೈಸ್ಡ್ ಬೆಜೆಲ್ಗಳೊಂದಿಗೆ, 120 ಹೆರ್ಟ್ಜ್ ರಿಫ್ರೆಶ್ ರೇಟ್ ಅತ್ಯಂತ ಸುಗಮ ಕಾರ್ಯಕ್ಷಮತೆ ನೀಡುತ್ತದೆ. ಈ ಸ್ಮಾರ್ಟ್ಫೋನ್ಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆಯೊಂದಿಗೆ ಫ್ಲ್ಯಾಗ್ಶಿಪ್ ಮಾದರಿಯ ದೀರ್ಘಾವಧಿ ಬಾಳಿಕೆ ಹೊಂದಿವೆ.
ಫ್ಲ್ಯಾಗ್ಶಿಪ್ ಮಾದರಿಯ ಕ್ಯಾಮೆರಾ: ಹೊಸ ಎ ಸರಣಿಯ ಸ್ಮಾರ್ಟ್ಫೋನ್ಗಳು ಅನೇಕ ನವೀನ ಎಐ-ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿವೆ. ಫೋಟೋ ರಿಮಾಸ್ಟರ್, ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಮುಂತಾದುವು ಪ್ರಮುಖ ವೈಶಿಷ್ಟ್ಯಗಳಾಗಿವೆ. ಗ್ಯಾಲಕ್ಸಿ ಎ 55 5ಜಿ ಮತ್ತು ಎ 35 5ಜಿ 50 ಎಂಪಿ ಟ್ರಿಪಲ್ ಕ್ಯಾಮೆರಾ ಹೊಂದಿವೆ. ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್ಪಿ) ನಿಂದ ವರ್ಧಿತ ನೈಟೊಗ್ರಫಿಯೊಂದಿಗೆ ಈ ಕ್ಯಾಮೆರಾಗಳು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯುತ್ತವೆ.
ಫ್ಲ್ಯಾಗ್ಶಿಪ್ ಮಟ್ಟದ ಭದ್ರತೆ: ಸ್ಯಾಮ್ ಸಂಗ್ ನಾಕ್ಸ್ ವಾಲ್ಟ್ ಸೆಕ್ಯುರಿಟಿ ವೈಶಿಷ್ಟ್ಯವನ್ನು ಇದೇ ಮೊದಲ ಬಾರಿಗೆ ಎ-ಸೀರಿಸ್ ಸ್ಮಾರ್ಟ್ಫೋನ್ಗಳಲ್ಲಿ ಪರಿಚಯಿಸಲಾಗಿದೆ. ಇದು ಫ್ಲ್ಯಾಗ್ ಶಿಪ್ ಲೆವೆಲ್ ಸೆಕ್ಯುರಿಟಿ ನೀಡುತ್ತದೆ. ಹಾರ್ಡ್ವೇರ್ ಆಧರಿತ ಸುರಕ್ಷತಾ ವ್ಯವಸ್ಥೆಯು ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ದಾಳಿಗಳ ವಿರುದ್ಧ ಸಮಗ್ರ ರಕ್ಷಣೆ ನೀಡುತ್ತದೆ. ಪಿನ್ ಕೋಡ್, ಪಾಸ್ ವರ್ಡ್ ಮತ್ತು ಲಾಕ್ ಸ್ಕ್ರೀನ್ ಅನ್ಲಾಕ್ ಸೇರಿದಂತೆ ಸಾಧನದಲ್ಲಿನ ಅತ್ಯಂತ ಪ್ರಮುಖ ಡೇಟಾ ರಕ್ಷಿಸಲು ಇದು ಸಹಾಯ ಮಾಡುತ್ತದೆ.
ಬೆಲೆ ಎಷ್ಟು?: ಗ್ಯಾಲಕ್ಸಿ ಎ55 5ಜಿ 8GB+128GB ಮಾದರಿಗೆ 36,999 ರೂ., 8GB+256GB ಮಾದರಿಗೆ 39,999 ರೂ. ಮತ್ತು 12GB+256GB ಮಾದರಿಗೆ 42,999 ರೂ. ಬೆಲೆ ನಿಗದಿಪಡಿಸಲಾಗಿದೆ. ಗ್ಯಾಲಕ್ಸಿ ಎ35 5ಜಿ 8GB+128GB ಮಾದರಿಗೆ 27,999 ರೂ. ಮತ್ತು 8GB+256GB ಮಾದರಿಗೆ 30,999 ಬೆಲೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ : 5ಜಿ ಡೇಟಾ ಬಳಕೆ 4ಜಿಗಿಂತ 4 ಪಟ್ಟು ವೇಗದಲ್ಲಿ ಹೆಚ್ಚಳ: ವರದಿ