ಕರ್ನಾಟಕ

karnataka

ETV Bharat / technology

ದೇಶದಲ್ಲಿ ₹1 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಳ - Sale Of Costly Mobile In India - SALE OF COSTLY MOBILE IN INDIA

Sale Of Costly Mobiles in India: ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಹೈ ಎಂಡ್ ಮೊಬೈಲ್​ಗಳ ಮಾರಾಟ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇಂಥ ಮೊಬೈಲ್‌ಗಳ ಬೆಲೆ 1 ಲಕ್ಷ ರೂ.ಗಿಂತ ಹೆಚ್ಚೆಂಬುದು ಗಮನಾರ್ಹ.

SMARTPHONES PRICE  COSTLY MOBILE SALES  SALE OF COSTLY MOBILE IN INDIA  COUNTERPOINT RESEARCH
ಮೊಬೈಲ್ ಫೋನ್‌ (Getty Image)

By ETV Bharat Tech Team

Published : Sep 4, 2024, 11:17 AM IST

Sale Of Costly Mobiles In India: ಇತ್ತೀಚಿನ ತ್ರೈಮಾಸಿಕಗಳಲ್ಲಿ ದುಬಾರಿ ಸ್ಮಾರ್ಟ್‌ಫೋನ್ ಮಾರಾಟ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದು ಟೆಕ್ ತಜ್ಞರು ಹೇಳಿದ್ದಾರೆ. ಕೌಂಟರ್‌ಪಾಯಿಂಟ್ ರಿಸರ್ಚ್ ವರದಿ ಪ್ರಕಾರ, ಪ್ರಸಕ್ತ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ 1 ಲಕ್ಷ ರೂ ಮತ್ತು ಅದಕ್ಕಿಂತ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳ ಸಾಗಣೆ ಶೇ 20ರಷ್ಟು ಮತ್ತು ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 10ರಷ್ಟು ಹೆಚ್ಚಾಗಿದೆ.

Samsung Galaxy foldableಮತ್ತು ಹೊಸ Apple iPhone ಸರಣಿಗಳ ಆಗಮನದೊಂದಿಗೆ ದ್ವಿತೀಯಾರ್ಧದಲ್ಲಿ ಈ ಪಾಲು ಸ್ವಲ್ಪ ಏರುವ ನಿರೀಕ್ಷೆಯಿದೆ. 2021ರಲ್ಲಿ ದೇಶದಲ್ಲಿ ದುಬಾರಿ ಅಥವಾ ಸೂಪರ್-ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಶೇ 14ರಷ್ಟು ಏರಿಕೆಯಾಗಿ್ತತು. ಇದು 2022ರಲ್ಲಿ ಶೇ 96 ಮತ್ತು 2023ರಲ್ಲಿ ಶೇ 53ರಷ್ಟು ಹೆಚ್ಚಾಗಿದೆ. 2023ರಲ್ಲಿ, ಸ್ಯಾಮ್‌ಸಂಗ್ ಸೂಪರ್-ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ 52 ಪಾಲು ಸಾಧಿಸಿದರೆ, ಆ್ಯಪಲ್‌ನ ಪಾಲು ಶೇ 46ರಷ್ಟಿತ್ತು ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ನಿರ್ದೇಶಕ ತರುಣ್ ಪಾಠಕ್ ಮಾಹಿತಿ ನೀಡಿದ್ದಾರೆ.

ಇಂಡಸ್ಟ್ರಿ ರಿಸರ್ಚ್ ಗ್ರೂಪ್, ಸೈಬರ್ ಮೀಡಿಯಾ ರಿಸರ್ಚ್ (CMR) ಉಪಾಧ್ಯಕ್ಷ ಪ್ರಭು ರಾಮ್ ಅವರು ಹೇಳುವ ಪ್ರಕಾರ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಮೀಕರಣದ ಅಲೆ ನಿರಂತರವಾಗಿ ಪ್ರಬಲವಾಗುತ್ತಿದೆ. "ಗ್ರಾಹಕರು ಈಗ ಸ್ಮಾರ್ಟ್‌ಫೋನ್ ಸಾಧನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅದು ಉತ್ತಮ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ನೀಡುತ್ತದೆ" ಎಂದು ತಿಳಿಸಿದ್ದಾರೆ.

1 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚು ಬೆಲೆಯ ಉಬರ್-ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಮೊದಲಾರ್ಧದಲ್ಲಿ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಶೇ 80 ದಷ್ಟು ಗಮನಾರ್ಹ ಬೆಳವಣಿಗೆ ಕಂಡಿವೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ, ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ಶೇ 25ದಷ್ಟು ಪಾಲು ಹೆಚ್ಚಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ವಿವೋ ಮತ್ತು ಆ್ಯಪಲ್ ಫೋನ್​ಗಳಿವೆ. ಐಫೋನ್ ಶ್ರೇಣಿಯಾದ್ಯಂತ ಇತ್ತೀಚಿನ ಬೆಲೆ ಕಡಿತದ ಕಾರಣ ಮುಂದಿನ ತ್ರೈಮಾಸಿಕದಲ್ಲಿ ಆ್ಯಪಲ್ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ಪಾಲು ದಾಖಲೆಯ ಶೇ 77ದಷ್ಟಿತ್ತು. ಆದ್ರೆ ಅವುಗಳ ಸರಾಸರಿ ಮಾರಾಟದ ಬೆಲೆ (ASP) ಕುಸಿಯುತ್ತಿದೆ ಟೆಕ್ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:ಉಚಿತ ಆಧಾರ್​ ಅಪ್​ಡೇಟ್​ಗೆ 10 ದಿನ ಬಾಕಿ: ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್‌ನಲ್ಲೇ​ ಟ್ರೈ ಮಾಡಿ - Free Aadhaar Update

ABOUT THE AUTHOR

...view details