Secret Drone Project:ರಷ್ಯಾ ತನ್ನ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಚೀನಾಕ್ಕೆ ವರ್ಗಾಯಿಸುತ್ತಿದೆಯೇ ಎಂಬ ಅನುಮಾನ ಬಲಗೊಳ್ಳುತ್ತಿವೆ. ಇತ್ತೀಚೆಗೆ, ಯುರೋಪಿಯನ್ ಗುಪ್ತಚರ ಮೂಲಗಳು ಚೀನಾದಲ್ಲಿ ರಷ್ಯಾ ಅತ್ಯಾಧುನಿಕ ಡ್ರೋನ್ ಉತ್ಪಾದನಾ ಯೋಜನೆಯನ್ನು ಸ್ಥಾಪಿಸಿದೆ ಎಂದು ಹೇಳಿವೆ. ಈ ವಿಚಾರವನ್ನು ಆಂಗ್ಲ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ರಷ್ಯಾದ ಸರ್ಕಾರಿ ಸ್ವಾಮ್ಯದ ಅಲ್ಮಾಜ್-ಆಂಟೆಯ ಅಂಗಸಂಸ್ಥೆಯಾದ IEMZ ಕುಪೋಲ್, ಇತ್ತೀಚೆಗೆ ಚೀನಾದಲ್ಲಿ ತನ್ನ ಇತ್ತೀಚಿನ ಮಾದರಿ ಗಾರ್ಪಿಯಾ-3 ಡ್ರೋನ್ ಪರೀಕ್ಷಿಸಿದೆ. ಇದಕ್ಕೆ ಸ್ಥಳೀಯ ತಜ್ಞರೂ ಕೊಡುಗೆ ನೀಡಿದ್ದಾರೆ. ನಂತರ, ಕುಪೋಲ್ ಕಂಪನಿಯು ಈ ಹೊಸ ಡ್ರೋನ್‌ಗಳನ್ನು ಚೀನಾದ ಕಾರ್ಖಾನೆಯಲ್ಲಿ ಉತ್ಪಾದಿಸುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯಕ್ಕೆ ತಿಳಿಸಿದೆ. ಉಕ್ರೇನ್ ವಿರುದ್ಧದ ಇತ್ತೀಚಿನ ಕಾರ್ಯಾಚರಣೆಯಲ್ಲಿ ರಷ್ಯಾ ಹೊಸ ಅಸ್ತ್ರವನ್ನು ಬಳಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇಂತಹ ಯೋಜನೆಯ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಡ್ರೋನ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳ ಮಾರಾಟದ ವಿಚಾರದಲ್ಲಿ ಬೀಜಿಂಗ್ ಕಟ್ಟುನಿಟ್ಟಾದ ರಫ್ತು ಕಾರ್ಯವಿಧಾನಗಳನ್ನು ಅನುಸರಿಸುತ್ತಿದೆ ಎಂದು ಅದು ಹೇಳಿದೆ.