JioHotstar Free Access Mobile Plans:ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ವಿಲೀನದೊಂದಿಗೆ 'ಜಿಯೋಹಾಟ್‌ಸ್ಟಾರ್' ಎಂಬ ಹೊಸ ಒಟಿಟಿ ಪ್ಲಾಟ್‌ಫಾರ್ಮ್ ಇತ್ತೀಚೆಗೆ ಲಾಂಚ್ ಆಗಿದೆ. ಈ ಹೊಸ ಪ್ಲಾಟ್‌ಫಾರ್ಮ್‌ಗೆ ಸಬ್ಸ್ಕ್ರಿಪ್ಶನ್ ಪ್ಲಾನ್ಗಳು ಶುರುವಾಗಿವೆ. ಆದರೂ ಈ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವ ಗ್ರಾಹಕರು ತಮ್ಮ ಯೋಜನೆಯ ಅಂತ್ಯದವರೆಗೆ ತಮ್ಮ ಚಂದಾದಾರಿಕೆಗಳನ್ನು ಮುಂದುವರಿಸುತ್ತಾರೆ. ಅದಾದ ನಂತರ, ಹೊಸದಾಗಿ ಪ್ರಾರಂಭಿಸಲಾದ 'JioHotstar' ಸಬ್ಸ್ಕ್ರೀಪ್ಶನ್ ಪ್ಲಾನ್ ಅನ್ನು ಇದಕ್ಕಾಗಿ ತೆಗೆದುಕೊಳ್ಳಬೇಕಾಗುತ್ತದೆ.
ಹೀಗಿದ್ದರೂ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಮೊಬೈಲ್ ಯೋಜನೆಗಳೊಂದಿಗೆ ಉಚಿತ 'ಜಿಯೋಹಾಟ್‌ಸ್ಟಾರ್' ಎಂಟ್ರಿಯನ್ನು ಸಹ ನೀಡುತ್ತಿವೆ. ನೀವು ಮೊಬೈಲ್ ರೀಚಾರ್ಜ್‌ಗಳೊಂದಿಗೆ 'JioHotstar' ಚಂದಾದಾರಿಕೆಯನ್ನು ಸಹ ಪಡೆಯಬಹುದು. ಇದರಲ್ಲಿ ಯಾವ ಯೋಜನೆಗಳು ಉಚಿತ 'ಜಿಯೋಹಾಟ್‌ಸ್ಟಾರ್' ಪ್ರವೇಶವನ್ನು ನೀಡುತ್ತವೆ ಎಂಬುದನ್ನು ನೋಡೋಣ.
ರಿಲಯನ್ಸ್ ಜಿಯೋ ಹಾಟ್‌ಸ್ಟಾರ್ ಯೋಜನೆಗಳು: ಜಿಯೋ ಈಗಾಗಲೇ ಉಚಿತ 'ಜಿಯೋಸಿನಿಮಾ' ಪ್ರವೇಶವನ್ನು ನೀಡುವ ಹಲವಾರು ಯೋಜನೆಗಳನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಈ ನೆಟ್‌ವರ್ಕ್ ಆಪರೇಟರ್ 'JioHotstar' ಚಂದಾದಾರಿಕೆಯೊಂದಿಗೆ ಹಲವು ಯೋಜನೆಗಳನ್ನು ಹೊಂದಿರಬಹುದು. ಆದರೂ ಪ್ರಸ್ತುತ ಈ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಕಂಟೆಂಟ್ ಅನ್ನು ವೀಕ್ಷಿಸಲು ಜಿಯೋ ನೆಟ್‌ವರ್ಕ್‌ನಲ್ಲಿ ಕೇವಲ ಎರಡು ಯೋಜನೆಗಳಿವೆ.
ಇವೆರಡರಲ್ಲಿ ಅಗ್ಗವಾದದ್ದು ಹೊಸದಾಗಿ ಬಿಡುಗಡೆಯಾದ 195 ರೂ ಕ್ರಿಕೆಟ್ ಡೇಟಾ ಪ್ಯಾಕ್. ಇದು 3 ತಿಂಗಳ ಉಚಿತ 'JioHotstar' ಸಬ್ಸ್ಕ್ರೀಪ್ಶನ್ ನೀಡುತ್ತದೆ. ಈ ಡೇಟಾ-ಓನ್ಲಿ ಆಡ್-ಆನ್ ಯೋಜನೆಯು 15GB 4G/5G ಡೇಟಾದೊಂದಿಗೆ ಬರುತ್ತದೆ. ಇದು ಜಾಹೀರಾತು ಬೆಂಬಲಿತ 'JioHotstar' ಮೊಬೈಲ್ ಯೋಜನೆಗೆ ಉಚಿತ ಎಂಟ್ರಿ ಅನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ ಸಿಂಗಲ್ ಡಿವೈಸ್ಗೆ ಮಾತ್ರ HD ರೆಸಲ್ಯೂಶನ್‌ನಲ್ಲಿ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ.
ಈ ಪಟ್ಟಿಯಲ್ಲಿ 949 ರೂ.ಗಳ ಯೋಜನೆಯನ್ನು ಈಚೆಗೆ ಅಪ್ಡೇಟ್ ಮಾಡಿದೆ. ಪ್ರಿಪೇಯ್ಡ್ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರತಿದಿನ 2GBಯ 4G ಡೇಟಾ, ಅನ್ಲಿಮಿಟೆಡ್ ಕಾಲ್ಸ್, ದಿನಕ್ಕೆ 100 ಮೆಸೇಜ್ ಮತ್ತು ಅನ್ಲಿಮಿಟೆಡ್ 5G ಡೇಟಾವನ್ನು ನೀಡುತ್ತದೆ.
ನೀವು ಈಗಾಗಲೇ ಅನ್ಲಿಮಿಟೆಡ್ ಕಾಲ್ಸ್ ಮತ್ತು ದೈನಂದಿನ ಡೇಟಾವನ್ನು ನೀಡುವ ಜಿಯೋ ಯೋಜನೆಗೆ ಚಂದಾದಾರಿಕೆ ಹೊಂದಿದ್ದರೆ ನೀವು 'ಜಿಯೋಹಾಟ್‌ಸ್ಟಾರ್'ಗೆ ಉಚಿತ ಪ್ರವೇಶವನ್ನು ಪಡೆಯಲು 195 ರೂ ಪ್ಯಾಕ್ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ನೀವು ನಿಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡಲು ಬಯಸಿದರೆ ದುಬಾರಿ ಪ್ಲಾನ್ ಅನ್ನು ಆಯ್ಕೆ ಮಾಡುವುದು ಉತ್ತಮ.