Redmi Turbo 4 Launched:ಚೀನಾ ಮಾರುಕಟ್ಟೆಯಲ್ಲಿ ರೆಡ್ಮಿ ಟರ್ಬೋ 4 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಇದು Xiaomi ಉಪ-ಬ್ರಾಂಡ್‌ನ ಪ್ರಮುಖ ಸ್ಮಾರ್ಟ್‌ಫೋನ್ ಆಗಿದ್ದು, ಕಂಪನಿಯು ಇದನ್ನು ಮೀಡಿಯಾ ಟೆಕ್ ಡೈಮೆನ್ಶನ್ 8400-ಅಲ್ಟ್ರಾ ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಿದೆ.
ಈ ಫೋನ್‌ನ ವಿಶೇಷತೆಯೆಂದರೆ ಇದನ್ನು ಭಾರತ ಸೇರಿದಂತೆ ವಿಶ್ವದ ಇತರ ಮಾರುಕಟ್ಟೆಗಳಲ್ಲಿ 'Poco X7 Pro' ಹೆಸರಿನಲ್ಲಿ ಬಿಡುಗಡೆ ಮಾಡಬಹುದು. ಈ ಸ್ಮಾರ್ಟ್‌ಫೋನ್ ಜನವರಿ 9 ರಂದು ಭಾರತಕ್ಕೆ ಪ್ರವೇಶಿಸಲಿದೆ. ಈ ವೇಳೆ 'ರೆಡ್ಮಿ ಟರ್ಬೋ 4' ಮೊಬೈಲ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ..
ರೆಡ್ಮಿ ಟರ್ಬೋ 4 ವಿಶೇಷತೆಗಳು:
ಡಿಸ್‌ಪ್ಲೇ:ಈ ಫೋನ್ 6.67 ಇಂಚಿನ TCL Huaxing 1.5K ಫ್ಲಾಟ್ OLED ಸ್ಕ್ರೀನ್ ಹೊಂದಿದೆ. ಇದರ ರಿಫ್ರೆಶ್ ರೇಟ್ 120Hz ಆಗಿದೆ, ಬ್ರೈಟ್ನೆಸ್ 3200 ನಿಟ್ಸ್ ಆಗಿದೆ. ಈ ಡಿಸ್‌ಪ್ಲೇ HDR10+, Dolby Vision ಸಪೋರ್ಟ್ನೊಂದಿಗೆ ಬರುತ್ತದೆ.
ಪ್ರೊಸೆಸರ್:ಈ ಫೋನ್‌ನಲ್ಲಿರುವ ಪ್ರೊಸೆಸರ್‌ಗಾಗಿ ಕಂಪನಿಯು ಮೀಡಿಯಾ ಟೆಕ್ ಡೈಮೆನ್ಶನ್ 8400-ಅಲ್ಟ್ರಾ ಚಿಪ್‌ಸೆಟ್ ಅನ್ನು ಒದಗಿಸಿದೆ. ಈ ಪ್ರೊಸೆಸರ್ ತುಂಬಾ ಪವರ್ಫುಲ್ ಆಗಿದೆ.
ಕ್ಯಾಮೆರಾ: OIS ಬೆಂಬಲದೊಂದಿಗೆ 50MP Sony LYT-600 ಮೇನ್ ಸೆನ್ಸಾರ್ ಅನ್ನು ಈ ಫೋನ್‌ನ ಹಿಂಭಾಗದಲ್ಲಿ ಜೋಡಿಸಲಾಗಿದೆ. ಫೋನ್‌ನ ಎರಡನೇ ಹಿಂಭಾಗದ ಕ್ಯಾಮರಾ 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. ಇವುಗಳ ಹೊರತಾಗಿ ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ 20MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.