ETV Bharat / technology

ಸಿಟ್ರೊಯೆನ್ ಬಸಾಲ್ಟ್ ದರ ಹೆಚ್ಚಳ, ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ! ಹೊಸ ಬೆಲೆ ಎಷ್ಟು ಗೊತ್ತಾ? - CITROEN BASALT PRICE HIKE

Citroen Basalt Price Hike: ಸಿಟ್ರೊಯೆನ್ ಇಂಡಿಯಾ ತನ್ನ ಕೂಪೆ SUV ಸಿಟ್ರೊಯೆನ್ ಬಸಾಲ್ಟ್ ಬೆಲೆ ಹೆಚ್ಚಿಸಿದೆ.

CITROEN PRICE HIKE  CITROEN BASALT SPECIFICATIONS  CITROEN BASALT FEATURES  CITROEN BASALT PRICE HIKED
ಸಿಟ್ರೊಯೆನ್ ಬಸಾಲ್ಟ್ ಕಾರು (Photo Credit- Citroen Basalt)
author img

By ETV Bharat Tech Team

Published : Jan 7, 2025, 10:12 AM IST

Citroen Basalt Price Hike: ಫ್ರೆಂಚ್ ಮೂಲದ ಸಿಟ್ರೊಯೆನ್ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಹೊಸ ಕಾರು ತಯಾರಕರ ಕಂಪನಿ. ತನ್ನ ಕೂಪೆ SUV ಸಿಟ್ರೊಯೆನ್ ಬಸಾಲ್ಟ್ ಕಾರನ್ನು ಈಚೆಗೆ ಬಿಡುಗಡೆ ಮಾಡಿತ್ತು. ಆದರೆ ಹೊಸ ವರ್ಷದ ಪ್ರಾರಂಭದ ನಂತರ ಬೆಲೆ ಹೆಚ್ಚಿಸಿದೆ. ಹಾಗಾಗಿ ಸದ್ಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ ₹8.25 ಲಕ್ಷ (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗುತ್ತದೆ. ಇದು ಮೊದಲಿಗಿಂತ ₹26 ಸಾವಿರ ರೂಪಾಯಿ ಹೆಚ್ಚು.

ಆಗಸ್ಟ್ 2024ರಲ್ಲಿ ಮಾರಾಟ ಪ್ರಾರಂಭವಾದಾಗ ತನ್ನ ಅಗ್ರೆಸ್ಸಿವ್​ ಪ್ರೈಸಿಂಗ್​ ಸ್ಟ್ರಾಟಜಿಯೊಂದಿಗೆ ಭಾರತೀಯ ವಾಹನ ಕಂಪನಿಗಳನ್ನು ಚಕಿತಗೊಳಿಸಿತ್ತು. ಬಸಾಲ್ಟ್ ಒಂದು ಕಾಂಪ್ಯಾಕ್ಟ್ SUV. ಆದರೆ ಇದು ಸಬ್ 4 ಮೀಟರ್ ಎಸ್‌ಯುವಿ ಮಟ್ಟದ ಬೆಲೆ ಹೊಂದಿದೆ. ಈ ಕಾರು ಭಾರಿ ಪ್ರಮಾಣದಲ್ಲಿ ಮಾರಾಟವಾಗಲಿದೆ ಎಂದು ಕಂಪನಿ ಭವಿಷ್ಯ ನುಡಿದಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ.

ಆಕರ್ಷಕ ಬೆಲೆಯ ಹೊರತಾಗಿಯೂ ಕಂಪನಿ ಕಳೆದ ತಿಂಗಳು ಕಂಪನಿಯ ಬಸಾಲ್ಟ್‌ನ 79 ಘಟಕಗಳನ್ನು ಮಾತ್ರ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಈಗ ಅದರ ಬೆಲೆ ಪರಿಷ್ಕರಣೆಯಿಂದಾಗಿ ಕಾರು ಮೊದಲಿಗಿಂತ ಹೆಚ್ಚು ದುಬಾರಿಯಾಗಿದೆ. ಇದು ಮೊದಲಿಗಿಂತ ಕಡಿಮೆ ಆಕರ್ಷಕವಾಗಿದೆ. ಬಿಡುಗಡೆಯ ಬೆಲೆಗಳಿಗೆ ಹೋಲಿಸಿದರೆ ಕಂಪನಿ ಈ ಕಾರಿನ ಎಕ್ಸ್ ಶೋ ರೂಂ ಬೆಲೆಯನ್ನು ಗರಿಷ್ಠ 28,000 ರೂ.ಗಳಷ್ಟು ಹೆಚ್ಚಿಸಿದೆ.

ಟ್ರಿಮ್ ಆಯ್ಕೆಗಳು: ಯು, ಪ್ಲಸ್​ ಮತ್ತು ಮ್ಯಾಕ್ಸ್​ ಎಂಬ ಮೂರು ಟ್ರಿಮ್‌ಗಳಲ್ಲಿ ಕಾರು ಗ್ರಾಹಕರಿಗೆ ಲಭ್ಯವಿದೆ.

ಎಂಜಿನ್:

  • ಸಿಟ್ರೊಯೆನ್ ಬಸಾಲ್ಟ್‌ನ ಎಂಟ್ರಿ ಲೆವೆಲ್​ U ಟ್ರಿಮ್ ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಬರುತ್ತದೆ.
  • ಇದರ ಮಧ್ಯ-ವೇರಿಯಂಟ್ ಪ್ಲಸ್ ಟ್ರಿಮ್ ನ್ಯಾಚುರಲಿ ಆಸ್ಪಿರೆಟೆಡ್​ ಮತ್ತು ಟರ್ಬೊ-ಪೆಟ್ರೋಲ್ ಆಯ್ಕೆಗಳೊಂದಿಗೆ ಬರುತ್ತದೆ.
  • ಟಾಪ್-ಸ್ಪೆಕ್ ಮ್ಯಾಕ್ಸ್ ರೂಪಾಂತರಕ್ಕೆ ಬಂದಾಗ ಇದನ್ನು ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಬೆಲೆಗಳು:

ಪ್ರಸ್ತುತ ಸಿಟ್ರೊಯೆನ್ ಬಸಾಲ್ಟ್ ಬೇಸ್ ಯು ರೂಪಾಂತರದ ಬೆಲೆ ₹26,000 ಏರಿಕೆಯಾಗಿದೆ. ಹಾಗಾಗಿ ಈಗ ಇದರ ಬೆಲೆ ₹8.25 ಲಕ್ಷ (ಎಕ್ಸ್ ಶೋ ರೂಂ). ಮೊದಲು ಮಾರುಕಟ್ಟೆಯಲ್ಲಿ ₹7.99 ಲಕ್ಷಕ್ಕೆ ಮಾರಾಟವಾಗುತ್ತಿತ್ತು.

ಕಂಪನಿ ಅದರ ಮಿಡ್-ಸ್ಪೆಕ್ ಪ್ಲಸ್ 1.2 MT ಬೆಲೆ ಬದಲಾಯಿಸಿಲ್ಲ. ಇದು ಈಗಲೂ ಮಾರುಕಟ್ಟೆಯಲ್ಲಿ ₹9.99 ಲಕ್ಷಕ್ಕೆ ಲಭ್ಯವಿದೆ. ಪ್ಲಸ್ 1.2 ಟರ್ಬೊ ಎಂಟಿ, ಪ್ಲಸ್ 1.2 ಟರ್ಬೊ ಎಟಿ ರೂಪಾಂತರಗಳು ರೂ. 28,000 (ಎಕ್ಸ್ ಶೋ ರೂಂ) ಹೆಚ್ಚಿದೆ.

ಇದರ ಟಾಪ್-ಸ್ಪೆಕ್ ಮ್ಯಾಕ್ಸ್ 1.2 ಟರ್ಬೊ MT ವೆರಿಯಂಟ್​ ಮತ್ತು ಡ್ಯುಯಲ್-ಟೋನ್ ಬೆಲೆಯಲ್ಲಿ ₹21,000 (ಎಕ್ಸ್ ಶೋ ರೂಂ) ಹೆಚ್ಚಿದೆ. ಮಾರುಕಟ್ಟೆಯಲ್ಲಿ ಮ್ಯಾಕ್ಸ್ 1.2 ಟರ್ಬೊ MT ಬೆಲೆ ₹12.49 ಲಕ್ಷ ಮತ್ತು ಡ್ಯುಯಲ್-ಟೋನ್ ಬೆಲೆ ₹12.70 ಲಕ್ಷ ಇದೆ. ಸಿಟ್ರೊಯೆನ್ ಬಸಾಲ್ಟ್ ಮ್ಯಾಕ್ಸ್ 1.2 ಟರ್ಬೊ ಎಟಿ ರೂಪಾಂತರ ಮತ್ತು ಅದರ ಡ್ಯುಯಲ್-ಟೋನ್ ಬೆಲೆಯಲ್ಲಿ ₹17,000 (ಎಕ್ಸ್ ಶೋ ರೂಂ) ಹೆಚ್ಚಿದೆ. ಸದ್ಯ ಸಿಟ್ರೊಯೆನ್ ಬಸಾಲ್ಟ್ ಮ್ಯಾಕ್ಸ್ 1.2 ಟರ್ಬೊ ಎಟಿ ರೂಪಾಂತರ ಮಾರುಕಟ್ಟೆ ದರ ₹13.79 ಲಕ್ಷ ಆದ್ರೆ, ಡ್ಯುಯಲ್-ಟೋನ್ ಬೆಲೆ ₹14 ಲಕ್ಷದಲ್ಲಿ ಮಾರಾಟವಾಗುತ್ತಿದೆ.

ಇದನ್ನೂ ಓದಿ: ರೆಡ್​ಮಿ 14ಸಿ 5ಜಿ ಸ್ಮಾರ್ಟ್‌ಫೋನ್: ಅಬ್ಬಬ್ಬಾ! ಕೈಗೆಟುಕುವ ದರದಲ್ಲಿ ಇಷ್ಟೊಂದು ಫೀಚರ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.