Realme P2 Pro 5G Launch : ಸ್ಮಾರ್ಟ್‌ಫೋನ್ ತಯಾರಕ Realme ತನ್ನ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. Realme P2 Pro ನಲ್ಲಿ, ಕಂಪನಿಯು 24 GB RAM ಮತ್ತು 5200 mAh ನ ಶಕ್ತಿಶಾಲಿ ಬ್ಯಾಟರಿ ಒದಗಿಸಿದೆ. ಇದರೊಂದಿಗೆ ಈ ಫೋನಿನ ವಿನ್ಯಾಸವೂ ತುಂಬಾ ಸ್ಟೈಲಿಶ್ ಆಗಿದೆ. ಅಷ್ಟೇ ಅಲ್ಲ, 80 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನೂ ಹೊಂದಿದೆ. ಈ ಫೋನಿನ ಇನ್ನಷ್ಟು ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
Realme P2 Pro ವೈಶಿಷ್ಟ್ಯಗಳು:Realme ತನ್ನ ಹೊಸ ಫೋನ್‌ನಲ್ಲಿ 6.7-ಇಂಚಿನ AMOLED ಡಿಸ್ಪ್ಲೇ ಒದಗಿಸಿದೆ. ಇದು 120 Hz ನ ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಡಿಸ್ಪ್ಲೇ 2000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಮಾಡುತ್ತದೆ. ಇದಲ್ಲದೇ, ಈ ಫೋನ್‌ನಲ್ಲಿ AI ಕಣ್ಣಿನ ರಕ್ಷಣೆಯನ್ನು ಸಹ ಒದಗಿಸಲಾಗಿದೆ. ಇದು ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿರಿಸುತ್ತದೆ. ಅಲ್ಲದೇ, ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ.
ಮೂರು ರೂಪಾಂತರಗಳಲ್ಲಿ ಬಿಡುಗಡೆ: ಈ ಫೋನ್ Realme 5.0 UI Android 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್ ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದು 8GB + 128GB, 12GB+256GB ಮತ್ತು 12GB+512GB ಸ್ಟೋರೇಜ್ನ ಮೂರು ರೂಪಾಂತರಗಳನ್ನು ಹೊಂದಿದೆ. ಇದರ ಟಾಪ್ ಮಾದರಿ 12+12 GB ಡೈನಾಮಿಕ್ RAM ಅನ್ನು ಹೊಂದಿದೆ.