Realme GT 7 Pro Smartphone: Realme GT 7 Pro ಸ್ಮಾರ್ಟ್‌ಫೋನ್‌ನ ಪೂರ್ವ ಬುಕಿಂಗ್ ನವೆಂಬರ್ 18 ರಿಂದ ಪ್ರಾರಂಭವಾಗಲಿದೆ. ನೀವು ಈ ಸ್ಮಾರ್ಟ್‌ಫೋನ್ ತೆಗೆದುಕೊಳ್ಳಲು ಬಯಸಿದ್ರೆ Realme.com ನಲ್ಲಿ ಮಧ್ಯಾಹ್ನ 1 ಗಂಟೆಗೆ ಮುಂಗಡವಾಗಿ ಬುಕ್ ಮಾಡಬಹುದಾಗಿದೆ. ನೀವು ಅಮೆಜಾನ್ ಸೇರಿದಂತೆ ಇತರ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಫೋನ್ ಅನ್ನು ಆರ್ಡರ್ ಮಾಡಬಹುದು. ಈ ಫೋನ್‌ನ ವೈಶಿಷ್ಟ್ಯಗಳು, ಬ್ಯಾಂಕ್ ಆಫರ್ ಮತ್ತು ಇಎಂಐ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Realme GT 7 Pro ಪ್ರಿ-ಬುಕಿಂಗ್:ರಿಯಲ್‌ಮಿ ತನ್ನ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ ಜಿಟಿ 7 ಪ್ರೋ ಮುಂಗಡ ಬುಕಿಂಗ್ ಅನ್ನು 18 ನವೆಂಬರ್ 2024 ರಿಂದ ಪ್ರಾರಂಭಿಸಲಿದೆ. ಗ್ರಾಹಕರು Amazon.in, Realmeನ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಫೋನ್ ಅನ್ನು ಮೊದಲೇ ಬುಕ್ ಮಾಡಬಹುದು. Realme GT 7 Pro ಬಿಡುಗಡೆಯಾದ ನಂತರವೇ ನವೆಂಬರ್ 26 ರಂದು ಮಧ್ಯಾಹ್ನ 1 ಗಂಟೆಯಿಂದ realme.com ನಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಈ ಫೋನ್‌ನ ವೈಶಿಷ್ಟ್ಯಗಳು: ರಿಯಲ್‌ಮಿ ತನ್ನ ಹೊಸ ಮಾಡೆಲ್ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. Realme GT 7 Pro ನ ಕ್ಯಾಮೆರಾ ಸೆಟಪ್ ತುಂಬಾ ವಿಶೇಷವಾಗಿದೆ. ಇದು 3x ಆಪ್ಟಿಕಲ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುವ 50MP ಸೋನಿ IMX882 ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಇದು 50MP ಸೋನಿ IMX906 ಪ್ರಾಥಮಿಕ ಕ್ಯಾಮೆರಾ ಮತ್ತು 8MP ವೈಡ್-ಆಂಗಲ್ ಲೆನ್ಸ್ ಅನ್ನು ಸಹ ಹೊಂದಿರುತ್ತದೆ.
ಅಂಡರ್ವಾಟರ್ ಫೋಟೋಗ್ರಾಫಿ ಮೋಡ್:ಈ ಹೊಸ ಸ್ಮಾರ್ಟ್‌ಫೋನ್ ಅಂಡರ್ವಾಟರ್ ಫೋಟೋಗ್ರಫಿ ಮೋಡ್ ಅನ್ನು ಸಹ ಹೊಂದಿದೆ. ಇದು ಬಳಕೆದಾರರಿಗೆ ನೀರಿನಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಬಹುದಾಗಿದೆ. IP69 ರೇಟೆಡ್ ಫೋನ್ ಅನ್ನು 2 ಮೀಟರ್ ಆಳದ ನೀರಿನಲ್ಲಿ 30 ನಿಮಿಷಗಳ ಕಾಲ ಮುಳುಗಿಸಬಹುದು. ಈ ರಿಯಲ್‌ಮಿ ಫೋನ್ 6.78-ಇಂಚಿನ LTPO Eco OLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 6000 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಇದಲ್ಲದೆ, 6500mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ.