Apple TV Plus: ಆ್ಯಂಡ್ರಾಯ್ಡ್ ಬಳಕೆದಾರರಿಗೆ ಆ್ಯಪಲ್ ಕಂಪೆನಿ ಸಿಹಿ ಸುದ್ದಿ ನೀಡಿದೆ. ಆ್ಯಪಲ್ ಈಗ ಆ್ಯಂಡ್ರಾಯ್ಡ್ ಬಳಕೆದಾರರಿಗೂ ತನ್ನ ಆ್ಯಪಲ್ ಟಿವಿ ಪ್ಲಸ್ ಆ್ಯಪ್ ಪರಿಚಯಿಸಿದೆ. ಈಗ ಆ್ಯಂಡ್ರಾಯ್ಡ್ ಬಳಕೆದಾರರು ತಮ್ಮ ಸಾಧನಗಳಲ್ಲಿ ಆ್ಯಪಲ್ ಟಿವಿಯನ್ನು ವೀಕ್ಷಿಸಬಹುದು. Apple TV+ ಪ್ರಾರಂಭಿಸಿದ ಸುಮಾರು 5 ವರ್ಷಗಳ ನಂತರ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಫೋಲ್ಡಬಲ್ ಡಿವೈಸ್ಗಳಿಗಾಗಿ ಆ್ಯಪಲ್ ತನ್ನ ಟಿವಿ ಅಪ್ಲಿಕೇಶನ್ ಪರಿಚಯಿಸಿರುವುದು ಗಮನಾರ್ಹ.
Apple TV ಸ್ಟ್ರೀಮಿಂಗ್ ವೇದಿಕೆ. ಸಾಮಾನ್ಯವಾಗಿ ಆ್ಯಂಡ್ರಾಯ್ಡ್‌ಗಾಗಿ ಆ್ಯಪಲ್ ತನ್ನ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸುವುದಿಲ್ಲ. ಕಂಪೆನಿ ಐಒಎಸ್ ಮತ್ತು ಮ್ಯಾಕೋಸ್ ಮೇಲೆ ಮಾತ್ರ ಗಮನಹರಿಸುತ್ತದೆ. ಈ ಬಾರಿ ಆ್ಯಂಡ್ರಾಯ್ಡ್‌ಗಾಗಿ ಆ್ಯಪಲ್ ಟಿವಿ ಬಿಡುಗಡೆ ಮಾಡುವ ಮೂಲಕ ಅಚ್ಚರಿಗೊಳಿಸಿದೆ.
ಆ್ಯಪಲ್ ಪ್ರಕಾರ, Apple TV ಅಪ್ಲಿಕೇಶನ್ ಈಗ ಪ್ರಪಂಚದಾದ್ಯಂತ ಆ್ಯಂಡ್ರಾಯ್ಡ್ ಯೂಸರ್ಸ್ಗೆ ಲಭ್ಯವಿದೆ. ಈ ಆ್ಯಪ್ ಸಹಾಯದಿಂದ ನೀವು ಆ್ಯಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ Apple TV+ನಲ್ಲಿ ಲಭ್ಯವಿರುವ ವಿಶೇಷ ವಿಷಯವನ್ನೂ ಸಹ ವೀಕ್ಷಿಸಬಹುದು. ಇದಕ್ಕಾಗಿ ಆ್ಯಪಲ್ ಟಿವಿಯ ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ.
ಒಂದು ವಾರ ಉಚಿತ: ಆ್ಯಪಲ್ ಅನೇಕ ಹಾಲಿವುಡ್ ನಟರೊಂದಿಗೆ ಪಾಲುದಾರಿಕೆ ಹೊಂದಿದೆ. ಹೀಗಾಗಿ ಇದು ಉಚಿತ ಸೇವೆಯಲ್ಲ. ಕೇವಲ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದಷ್ಟೇ. ಕಂಟೆಂಟ್ ವೀಕ್ಷಿಸಲು ಪ್ರತಿ ತಿಂಗಳು ಇಂತಿಷ್ಟು ಹಣ ಪಾವತಿಸಬೇಕಾಗುತ್ತದೆ.
ಬೆಲೆಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ. 99 ರೂಪಾಯಿ ಮಾಸಿಕ ಸಬ್ಸ್ಕ್ರಿಪ್ಷನ್ ಪಡೆಯುವುದರ ಮೂಲಕ ಇದನ್ನು ನೀವು ಸ್ಟ್ರೀಮ್ ಮಾಡಬಹುದು ಮತ್ತು ಹೊಸ ಬಳಕೆದಾರರು ಒಂದು ವಾರದ ಉಚಿತ ಟ್ರಯಲ್ ಪಡೆಯುತ್ತಿದ್ದಾರೆ.
ಈ ಚಂದಾದಾರಿಕೆಯಲ್ಲಿ ಬಳಕೆದಾರರಿಗೆ ಜಾಹೀರಾತುರಹಿತವಾಗಿ ಕಂಟೆಂಟ್ ವೀಕ್ಷಿಸಬಹುದು. ಅಪ್ಲಿಕೇಶನ್‌ನಲ್ಲಿ ಆಫ್‌ಲೈನ್ ಡೌನ್‌ಲೋಡ್, ವಾಚ್ ಲಿಸ್ಟ್, ಕಂಟಿನ್ಯೂ ವಾಚಿಂಗ್ನಂತಹ ಅನೇಕ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಆದರೂ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಕಾಸ್ಟ್ ಸಪೋರ್ಟ್ಗಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
ಇದು 50GB ಕ್ಲೌಡ್, TV+ ಸಬ್ಸ್ಕ್ರಿಪ್ಷನ್, ಮ್ಯೂಸಿಕ್ ಮತ್ತು ಆರ್ಕೇಡ್‌ನೊಂದಿಗೆ ಬರುತ್ತದೆ. ಇತ್ತೀಚೆಗೆ ಆ್ಯಪಲ್ ತನ್ನ ಮ್ಯಾಪ್ ವೆಬ್ ವರ್ಷನ್ ಬಿಡುಗಡೆ ಮಾಡಿತ್ತು. ಇದು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಅಲ್ಲದಿದ್ದರೂ, ಕ್ರಮೇಣ ಕಂಪೆನಿ ಆಂಡ್ರಾಯ್ಡ್ಗಾಗಿ ಕೆಲವು ಅಪ್ಲಿಕೇಶನ್‌ಗಳನ್ನು ಪರಿಚಯಿಸುತ್ತಿದೆ.
Apple TV+ is now available on Android.
— Apple TV (@AppleTV) February 12, 2025
Stream Severance, Ted Lasso, Silo, Pachinko and more.#Severance #TedLasso #Silo #Pachinko pic.twitter.com/JYVZ6U8RQN
Apple TV+ ಆ್ಯಂಡ್ರಾಯ್ಡ್‌ಗೆ ಲಗ್ಗೆಯಿಟ್ಟ ಬಳಿಕ ಇತರ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಈಗ ಸ್ಪರ್ಧಿಸಬಹುದು. ಏಕೆಂದರೆ Apple TV+ನಲ್ಲಿ ಸಾಕಷ್ಟು ಒರಿಜಿನಲ್ ಕಂಟೆಂಟ್‌ಗಳಿವೆ. ಕಂಪೆನಿಯು ಸಬ್ಸ್ಕ್ರಿಪ್ಷನ್ ಶುಲ್ಕವನ್ನು ಸ್ಪರ್ಧಾತ್ಮಕವಾಗಿ ಇರಿಸಿರುವುದು ಗಮನಿಸಬೇಕಾದ ಮತ್ತೊಂದು ಅಂಶ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲೈವ್: ಇಂದಿನಿಂದ ಆ್ಯಂಡ್ರಾಯ್ಡ್ ಬಳಕೆದಾರರು ತಮ್ಮ ಸಾಧನಗಳಲ್ಲಿ Apple TV ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲೈವ್ ಆಗಿದೆ. ಕಳೆದ ವರ್ಷ ಆ್ಯಪಲ್ ಸೂಚಿಸಿತ್ತು. ಆ್ಯಪಲ್ ಈ ದಿಕ್ಕಿನಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕಂಪೆನಿಯು ಆಂಡ್ರಾಯ್ಡ್ಗಾಗಿ Apple TV+ ಅಪ್ಲಿಕೇಶನ್ ತರುವ ಬಗ್ಗೆ ಸುಳಿವು ನೀಡಿತ್ತು. ಈಗ ಅದು ಲಭ್ಯವಾಗಿದೆ.
ಆ್ಯಂಡ್ರಾಯ್ಡ್ನಲ್ಲಿ ಕೇವಲ 5 ಆ್ಯಪ್ಗಳು ಲಭ್ಯ: ಆ್ಯಂಡ್ರಾಯ್ಡ್ನಲ್ಲಿ ಆ್ಯಪಲ್‌ನ 5 ಅಪ್ಲಿಕೇಶನ್‌ಗಳು ಮಾತ್ರ ಇವೆ. Apple Music, Move to iOS, Apple TV, Beats ಮತ್ತು Apple Music Classical ಅಪ್ಲಿಕೇಶನ್‌ಗಳು ಆಂಡ್ರಾಯ್ಡ್ನಲ್ಲಿ ಕಾಣಬಹುದು. ಕಂಪೆನಿಯು Apple TV+ ಕುರಿತು ಬಹಳ ಉತ್ಸುಕವಾಗಿದೆ. ಅಷ್ಟೇ ಅಲ್ಲ, ಆಂಡ್ರಾಯ್ಡ್ನಲ್ಲಿ ಈ ಆಪ್ ಅನ್ನು ಪ್ರಾರಂಭಿಸುವ ಮೂಲಕ ದೊಡ್ಡ ಮಾರುಕಟ್ಟೆಯನ್ನು ಪೂರೈಸಲು ಬಯಸುತ್ತದೆ.
ಇದನ್ನೂ ಓದಿ: ಐಫೋನ್ SE 4 ಲಾಂಚಿಂಗ್ ಡೇಟ್ ಯಾವಾಗ? ಬೆಲೆ, ವಿಶೇಷತೆಗಳಿವು