ಕರ್ನಾಟಕ

karnataka

ETV Bharat / technology

ರಿನಿವಬಲ್​ ಎನರ್ಜಿಯಿಂದ ವಿದ್ಯುತ್​ ಉತ್ಪಾದನೆ ಮಹತ್ವದ ಸಾಧನೆ: ಜರ್ಮನಿಯಲ್ಲಿ ಸಚಿವ ಜೋಶಿ ಪ್ರತಿಪಾದನೆ

Minister Joshi Germany Tour: ಮೂರು ದಿನಗಳ ಕಾಲ ಜರ್ಮನಿ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರು ರಿನಿವಬಲ್​ ಎನರ್ಜಿ ಕುರಿತು ಭಾರತದ ಹೆಮ್ಮೆಯನ್ನು ಪ್ರತಿಪಾದಿಸಿದರು.

POWER GENERATION  RENEWABLE ENERGY  CLIMATE CHANGE  SOLAR ENERGY
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (IANS)

By ETV Bharat Tech Team

Published : Oct 8, 2024, 7:22 AM IST

Minister Joshi Germany Tour:ಭಾರತವು 2014 ರಿಂದ ರಿನಿವಬಲ್​ ಎನರ್ಜಿ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ 193.5 ಶತಕೋಟಿ ಯುನಿಟ್ಸ್​ನಿಂದ (BU) 360 BU ವರೆಗೆ ಪ್ರಭಾವಶಾಲಿ 86 ಪ್ರತಿಶತ ಹೆಚ್ಚಳವನ್ನು ಕಂಡಿದೆ ಎಂದು ಕೇಂದ್ರ ಹೊಸ ಮತ್ತು ರಿನಿವಬಲ್​ ಎನರ್ಜಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಜರ್ಮನಿಯಲ್ಲಿ ನಡೆದ 'ಹ್ಯಾಂಬರ್ಗ್ ಸಸ್ಟೈನಬಿಲಿಟಿ ಕಾನ್ಫರೆನ್ಸ್' ನಲ್ಲಿ ಭಾಗಿಯಾಗಿ ಅವರು ಪ್ರಧಾನ ಭಾಷಣ ಮಾಡಿದರು. ಈ ವೇಳೆ ಪ್ರಲ್ಹಾದ್​ ಜೋಶಿ, ನಮ್ಮ ಬೆಳವಣಿಗೆಯ ಮಹತ್ವಾಕಾಂಕ್ಷೆಗಳು ಮತ್ತು ಪರಿಸರದ ಜವಾಬ್ದಾರಿಗಳೊಂದಿಗೆ ಹೊಂದಿಕೊಳ್ಳುವ ಸುಸ್ಥಿರ ಇಂಧನ ಭವಿಷ್ಯದ ಅನ್ವೇಷಣೆಗೆ ಭಾರತವು ಧ್ವನಿಯಾಗಿ ನಿಂತಿದೆ ಎಂದು ಪ್ರತಿಪಾದಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತವು 2014 ರಿಂದ ರಿನಿವಬಲ್​ ಇಂಧನ ಸಾಮರ್ಥ್ಯದಲ್ಲಿ ಪರಿವರ್ತಕ ಹೆಚ್ಚಳವನ್ನು ಕಂಡಿದೆ. ಸುಮಾರು 75 GW ನಿಂದ 208 GW ಗಿಂತ ಅಂದ್ರೆ ಶೇಕಡಾ 175 ರಷ್ಟು ಏರಿಕೆಯಾಗಿದೆ ಎಂದು ಜೋಶಿ ಮಾಹಿತಿ ನೀಡಿದರು.

100ಕ್ಕೂ ಹೆಚ್ಚು ದೇಶಗಳ ಬೆಂಬಲದೊಂದಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಸೌರ ಶಕ್ತಿಯ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸುವ ಜಾಗತಿಕ ಪ್ರಯತ್ನಗಳಲ್ಲಿ ಭಾರತದ ನಾಯಕತ್ವವನ್ನು ಪ್ರದರ್ಶಿಸುತ್ತದೆ ಎಂದು ಸಚಿವ ಜೋಶಿ ಒತ್ತಿ ಹೇಳಿದರು.

ಭಾರತವು ಹಸಿರು ಹಡಗು ವಲಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ. 2030 ರ ವೇಳೆಗೆ ಟಾಪ್ 10 ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ ಮತ್ತು 2047 ರ ವೇಳೆಗೆ ಅಗ್ರ ಐದು ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದೆ ಎಂದು ಸಚಿವರು ವಿವರಿಸಿದರು.

ನಾವು ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವತ್ತ ಸಾಗುತ್ತಿದ್ದೇವೆ. ಈ ವೇಳೆ ಸುಸ್ಥಿರ ಕಡಲ ಸಾರಿಗೆಯ ಅಗತ್ಯವು ಬಹಳ ಮುಖ್ಯವಾಗಿದೆ. ಸರ್ಕಾರದ ಉಪಕ್ರಮಗಳು, ತಾಂತ್ರಿಕ ಪ್ರಗತಿಗಳು ಮತ್ತು ಅಂತಾರಾಷ್ಟ್ರೀಯ ಸಹಯೋಗಗಳಿಂದಾಗಿ ಹಸಿರು ಹಡಗು ವಲಯದಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಸಚಿವರು ಹೇಳಿದರು.

ಗ್ರೀನ್ ಶಿಪ್ಪಿಂಗ್ ವಿಷಯವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜೋಶಿ, ಜಾಗತಿಕ ವ್ಯಾಪಾರದಲ್ಲಿ ಸಮುದ್ರ ವಲಯದ ನಿರ್ಣಾಯಕ ಪಾತ್ರ ಮತ್ತು ಗ್ರೀನ್​ಹೌಸ್​ ಗ್ಯಾಸ್​ ಹೊರಸೂಸುವಿಕೆಯ ಮೇಲಿನ ಪ್ರಭಾವದ ಬಗ್ಗೆ ತಿಳಿಸಿದರು.

ಹಸಿರು ಹೈಡ್ರೋಜನ್ ಅಥವಾ ಅದರ ಉತ್ಪನ್ನಗಳ ಮೇಲೆ ಕಾರ್ಯನಿರ್ವಹಿಸಲು ಅಸ್ತಿತ್ವದಲ್ಲಿರುವ ಹಡಗುಗಳನ್ನು ಪರಿವರ್ತಿಸಲು ನಾವು ಗಮನಹರಿಸುತ್ತಿದ್ದೇವೆ. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಸ್ತುತ ಎರಡು ಹಡಗುಗಳನ್ನು ಹಸಿರು ಮೆಥೆನಾಲ್​ನಲ್ಲಿ ಚಲಿಸುವಂತೆ ಪರಿವರ್ತಿಸುತ್ತಿದೆ ಎಂದು ಸಚಿವರು ಹೇಳಿದರು.

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (NGHM), $2.4 ಶತಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. 2030ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಮೆಟ್ರಿಕ್ ಟನ್ (MMT) ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. 100 ಶತಕೋಟಿ ಡಾಲರ್​ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಯಾಗುವ ಸಾಧ್ಯತೆಯಿದೆ. NGHM ಅಡಿಯಲ್ಲಿ ಪ್ರಾಯೋಗಿಕ ಯೋಜನೆಗಳು 14 ಮಿಲಿಯನ್ ಡಾಲರ್​ ಹೂಡಿಕೆಯೊಂದಿಗೆ ಹಡಗು ವಲಯದಲ್ಲಿ ಹಸಿರು ಹೈಡ್ರೋಜನ್ ಬಳಕೆಯನ್ನು ಈಗಾಗಲೇ ಅನ್ವೇಷಿಸುತ್ತಿವೆ.

ಜಿ20 ರಾಷ್ಟ್ರಗಳಲ್ಲಿ ಅತಿ ಕಡಿಮೆ ತಲಾವಾರು ಹೊರಸೂಸುವಿಕೆಯನ್ನು ಹೊಂದಿದ್ದರೂ, ನಿಗದಿತ ಅವಧಿಗಿಂತ ಮುಂಚಿತವಾಗಿ ತನ್ನ ಹವಾಮಾನ ಗುರಿಗಳನ್ನು ಪೂರೈಸಿದ ಏಕೈಕ ಜಿ 20 ದೇಶ ಭಾರತವಾಗಿದೆ. ಇಂಧನ ಸುರಕ್ಷತೆಯಲ್ಲಿ ಭಾರತವು ಅತ್ಯುನ್ನತವಾಗಿದೆ. ಆದರೆ ಇದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಇಂಧನ ಪರಿವರ್ತನೆಗೆ ರಾಷ್ಟ್ರದ ಬದ್ಧತೆಗೆ ಎಂದಿಗೂ ಅಡ್ಡಿಯಾಗಲಿಲ್ಲ ಎಂದು ಹೇಳಿದರು.

ಜೋಶಿ ಅವರು ಅಕ್ಟೋಬರ್ 6 ರಿಂದ ಜರ್ಮನಿಗೆ ಮೂರು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಸುಸ್ಥಿರ ಅಭಿವೃದ್ಧಿ, ಗ್ರೀನ್ ಹೈಡ್ರೋಜನ್, ಕಡಿಮೆ-ವೆಚ್ಚದ ಹಣಕಾಸು ಮತ್ತು ರಿನಿವಬಲ್ ಇಂಧನ ಮೌಲ್ಯ ಸರಪಳಿ ಘಟಕಗಳಲ್ಲಿ ಸಹಕಾರವನ್ನು ಹೆಚ್ಚಿಸಲು ದ್ವಿಪಕ್ಷೀಯ ಸಭೆಗಳ ಸರಣಿಯನ್ನು ನಡೆಸಲು ಸಿದ್ಧರಾಗಿದ್ದಾರೆ.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು ಭಾರತದ ಇಂಧನ ಪರಿವರ್ತನೆಯ ಬದ್ಧತೆಯನ್ನು ಪ್ರದರ್ಶಿಸಿದರು. ರಿನಿವಬಲ್​ ಇಂಧನಕ್ಕೆ ತನ್ನ ಬದಲಾವಣೆಯಲ್ಲಿ ದೇಶವು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ ಎಂದು ಸಚಿವರು ವಿವರಿಸಿದರು.

ಓದಿ:ಆಂಡ್ರಾಯ್ಡ್​ ಬಳಕೆದಾರರಿಗೆ ಹೊಸ ಥೆಫ್ಟ್​ ಪ್ರೋಟೆಕ್ಷನ್​ ವೈಶಿಷ್ಟ್ಯಗಳನ್ನು ಪರಿಚಯಿಸಿದ ಗೂಗಲ್​! - Google Theft Protection Feature

ABOUT THE AUTHOR

...view details