POCO F7 Series: ಪೊಕೊ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ. ಕಂಪೆನಿಯು ತನ್ನ 'ಎಫ್' ಸೀರಿಸ್ ವಿಸ್ತರಿಸಲು ಕಾರ್ಯ ನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪೊಕೊ ಜಾಗತಿಕವಾಗಿ 3 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ.
ತನ್ನ ಲೇಟೆಸ್ಟ್ ಸರಣಿಯಲ್ಲಿ 'Poco F7', 'Poco F7 Pro' ಮತ್ತು 'Poco F7 Ultra' ಮಾದರಿಯ ಮೊಬೈಲ್‌ಗಳಿವೆಯಂತೆ. ಇತ್ತೀಚೆಗೆ 'Poco F7 Pro' ಫೋನ್ IMDA ಪ್ರಮಾಣೀಕರಣ ವೇದಿಕೆಯಲ್ಲಿ ಕಾಣಿಸಿಕೊಂಡಿತ್ತು. ಇದರೊಂದಿಗೆ 'Poco F7' ಮತ್ತು 'Poco F7 Ultra' ಹ್ಯಾಂಡ್‌ಸೆಟ್‌ಗಳೂ ಕೂಡ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
Poco F7, Poco F7 Ultra:IMDA ಪ್ರಮಾಣೀಕರಣದಲ್ಲಿ (MySmartPrice ಮೂಲಕ), ಎರಡು ಸ್ಮಾರ್ಟ್‌ಫೋನ್‌ಗಳನ್ನು 24122RKC7G, 2412DPC0AG ನಂಬರ್ಗಳೊಂದಿಗೆ ಗುರುತಿಸಲಾಗಿದೆ. ಆದರೆ ಪೊಕೊ ಕಂಪನಿ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಈ ಫೋನ್‌ಗಳು 5G ಕನೆಕ್ಟ್, ಬ್ಲೂಟೂತ್, Wi-Fi, NFC ಸಪೋರ್ಟ್ ಮಾಡುತ್ತವೆ. ಇವುಗಳ ಹೊರತಾಗಿ, 'Poco F7' ಸೀರಿಸ್ ಸ್ಮಾರ್ಟ್‌ಫೋನ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. 'Poco F7', 'Poco F7 Ultra' ಮಾದರಿಯ ಮೊಬೈಲ್‌ಗಳ ಹೆಸರುಗಳು ಈಗಾಗಲೇ IMEI ಡೇಟಾಬೇಸ್‌ನಲ್ಲಿ ಲೈವ್ ಆಗಿವೆ. 'F7 ಅಲ್ಟ್ರಾ' ಪೊಕೊದ ಮೊದಲ 'ಅಲ್ಟ್ರಾ' ಬ್ರಾಂಡ್ ಮೊಬೈಲ್ ಆಗಿದೆ.
ಸ್ಪೀಡ್ ಚಾರ್ಜಿಂಗ್: 'Poco F7 Ultra' ಮೊಬೈಲ್ 6,000mAh ಬ್ಯಾಟರಿ ಹೊಂದಿದೆ. ಇದು 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಈ ಮಾಡೆಲ್ ಮೊಬೈಲ್ ವೈರ್‌ಲೆಸ್ ಸ್ಪೀಡ್ ಚಾರ್ಜಿಂಗ್ ಸಪೋರ್ಟ್ನೊಂದಿಗೆ ಬರಬಹುದು. ಇದು ಸಂಭವಿಸಿದಲ್ಲಿ ಇದು ವೈರ್‌ಲೆಸ್ ಸ್ಪೀಡ್ ಚಾರ್ಜಿಂಗ್ ಸಪೋರ್ಟ್ನೊಂದಿಗೆ ಪೊಕೊನಿಂದ ಮೊದಲ ಮಾದರಿ. ರೀಬ್ರಾಂಡೆಡ್ Redmi Turbo 4 ಆಗಿ 'Poco F7' ಬರಲಿದೆ ಎಂದು ಗ್ರಾಹಕರು ನಿರೀಕ್ಷಿಸುತ್ತಿದ್ದಾರೆ. ಈ ಮಾದರಿಯ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 8400 SoC, 6000mAh ಬ್ಯಾಟರಿ, 1.5K ರೆಸಲ್ಯೂಶನ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ.
ಇದನ್ನೂ ಓದಿ:ಗೇಮಿಂಗ್ ಪ್ರಿಯರಿಗೆ ಹಬ್ಬ! ಬ್ಲ್ಯಾಕ್ ಫ್ರೈಡೇ ಸೇಲ್ ಹವಾ ಶುರು; ಏನುಂಟು, ಏನಿಲ್ಲ? ನೀವೇ ನೋಡಿ