ಕರ್ನಾಟಕ

karnataka

ETV Bharat / technology

ಅರ್ಮೇನಿಯಾಕ್ಕೆ ಸ್ವದೇಶಿ ನಿರ್ಮಿತ ಪಿನಾಕಾ ಆಯುಧ ರವಾನಿಸಿದ ಭಾರತ - PINAKA WEAPON SYSTEM

PINAKA WEAPON SYSTEM: ಮೊದಲ ಪಿನಾಕಾ ಮಲ್ಟಿ - ಬ್ಯಾರೆಲ್ ರಾಕೆಟ್ ಸಿಸ್ಟಮ್ ಬ್ಯಾಚ್ ಅರ್ಮೇನಿಯಾಕ್ಕೆ ರವಾನಿಸಲಾಗಿದೆ. ಪಿನಾಕಾ ರಾಕೆಟ್ ಲಾಂಚರ್ ಒಂದು ಸಮರ್ಥ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ.

PINAKA WEAPON  INDIA STARTED SUPPLYING PINAKA  PINAKA WEAPON SYSTEM
ಪಿನಾಕಾ ಆಯುಧ (ANI)

By ETV Bharat Tech Team

Published : Nov 25, 2024, 2:40 PM IST

PINAKA WEAPON SYSTEM: ಪ್ರಪಂಚದ ಅನೇಕ ದೇಶಗಳು ಸ್ಥಳೀಯ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ (MBRL) ನಲ್ಲಿ ಆಸಕ್ತಿ ತೋರಿಸುತ್ತಿವೆ. ಭಾರತವು ಅರ್ಮೇನಿಯಾಕ್ಕೆ ಪಿನಾಕಾ ರಾಕೆಟ್‌ಗಳನ್ನು ಪೂರೈಸಲು ಪ್ರಾರಂಭಿಸಿದೆ. ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ವ್ಯವಸ್ಥೆಯ ಮೊದಲ ಬ್ಯಾಚ್ ಅನ್ನು ಅರ್ಮೇನಿಯಾಕ್ಕೆ ಕಳುಹಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಪಿನಾಕಾ ರಾಕೆಟ್ ಲಾಂಚರ್ ಹೆಚ್ಚು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಇದು 80 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದಲ್ಲಿರುವ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಇರುವ ರೂಪಾಂತರಗಳನ್ನು ಒಳಗೊಂಡಿದೆ.

ಶಸ್ತ್ರಾಸ್ತ್ರ ವ್ಯವಸ್ಥೆಗಳ ಪೂರೈಕೆ ಒಪ್ಪಂದ:ಅರ್ಮೇನಿಯಾ ಭಾರತೀಯ ರಕ್ಷಣಾ ಉಪಕರಣಗಳ ಮೂರನೇ ಅತಿದೊಡ್ಡ ಖರೀದಿದಾರ. ಸುದೀರ್ಘ ಮಾತುಕತೆಗಳ ನಂತರ ಎರಡು ವರ್ಷಗಳ ಹಿಂದೆ ಭಾರತೀಯ ಕಂಪನಿಗಳು ಮತ್ತು ಅರ್ಮೇನಿಯಾ ಈ ಶಸ್ತ್ರಾಸ್ತ್ರ ವ್ಯವಸ್ಥೆ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದವು. ಅರ್ಮೇನಿಯಾ ಭಾರತದ ಪ್ರಮುಖ ರಕ್ಷಣಾ ಸಾಧನಗಳನ್ನು ಖರೀದಿಸುವ ದೇಶಗಳಲ್ಲಿ ಒಂದಾಗಿದೆ. ಅಮೆರಿಕ ಮತ್ತು ಫ್ರಾನ್ಸ್ ಜೊತೆಗೆ ರಕ್ಷಣಾ ಉಪಕರಣಗಳ ಮೂರನೇ ಅತಿದೊಡ್ಡ ಖರೀದಿದಾರ ದೇಶವಾಗಿದೆ.

ಪಿನಾಕಾ ರಾಕೆಟ್‌ನ ಯಶಸ್ವಿ ಪರೀಕ್ಷೆ: ಇತ್ತೀಚೆಗೆ ಆಗ್ನೇಯ ಏಷ್ಯಾ ಮತ್ತು ಯುರೋಪ್‌ನ ಹಲವು ದೇಶಗಳು ಪಿನಾಕಾ ರಾಕೆಟ್‌ನಲ್ಲಿ ಆಸಕ್ತಿ ತೋರಿಸಿವೆ. ಇದರ ಹಲವು ಹೊಸ ರೂಪಾಂತರಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಭಾರತೀಯ ಸೇನೆಯು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಲು ಯೋಜಿಸುತ್ತಿದೆ. ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಇತ್ತೀಚೆಗೆ ಪಿನಾಕಾ ಮಾರ್ಗದರ್ಶಿ ರಾಕೆಟ್ ಅನ್ನು ಪರೀಕ್ಷಿಸಿದೆ. ರಾಕೆಟ್ ನಾಗ್ಪುರ ಮೂಲದ ಸೋಲಾರ್ ಇಂಡಸ್ಟ್ರೀಸ್ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಮತ್ತು ಸರ್ಕಾರಿ ಸ್ವಾಮ್ಯದ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ ತಯಾರಿಸಿದೆ. ಫ್ರಾನ್ಸ್ ಕೂಡ ಈ ಶಸ್ತ್ರಾಸ್ತ್ರ ವ್ಯವಸ್ಥೆ ಖರೀದಿಸಲು ಆಸಕ್ತಿ ತೋರಿಸಿದೆ.

ರಫ್ತು ಪ್ರಚಾರ: ಪಿನಾಕಾ ರಾಕೆಟ್ ವ್ಯವಸ್ಥೆಗೆ ಹಿಂದೂ ದೇವರು ಶಿವ 'ಪಿನಾಕ' ದೈವಿಕ ಬಿಲ್ಲು ಹೆಸರಿಡಲಾಗಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾನ್ ಈ ವರ್ಷ ಫ್ರಾನ್ಸ್‌ಗೆ ಉನ್ನತ ಮಟ್ಟದ ಭೇಟಿ ನೀಡಿದಾಗ ಫ್ರಾನ್ಸ್ ಈ ಪಿನಾಕ ವ್ಯವಸ್ಥೆಯಲ್ಲಿ ಆಸಕ್ತಿ ತೋರಿಸಿತು. ಭಾರತವು ತನ್ನ ಸ್ಥಳೀಯ ರಕ್ಷಣಾ ವ್ಯವಸ್ಥೆಗಳ ರಫ್ತುಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಅಮೆರಿಕ ನಂತರ ಭಾರತದ ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳುವ ಎರಡನೇ ಅತಿದೊಡ್ಡ ದೇಶ ಫ್ರಾನ್ಸ್.

ಓದಿ:ಐಫೋನ್​, ಐಪ್ಯಾಡ್​, ಮ್ಯಾಕ್​ ಬಳಕೆದಾರರಿಗೆ ಎಚ್ಚರಿಕೆ ನೀಡಿದ CERT-In

ABOUT THE AUTHOR

...view details