ಕರ್ನಾಟಕ

karnataka

ETV Bharat / technology

ಮಕ್ಕಳ ಮೇಲೆ ನಿಗಾವಹಿಸಲು ಮತ್ತೊಂದು ಹೊಸ ಫೀಚರ್​ ಪರಿಚಯಿಸಿದ ಇನ್​ಸ್ಟಾ! - PARENTAL SUPERVISION FEATURE

Parental Supervision Feature: ಪೋಷಕರು ಮಕ್ಕಳ ಮೇಲೆ ಗಮನ ಹರಿಸಲು ಇನ್​ಸ್ಟಾಗ್ರಾಂ ಹೊಸ ಫೀಚರ್​ವೊಂದನ್ನು ತಂದಿದೆ. ಇದು ಯಾವ ರೀತಿ ಕೆಲಸ ಮಾಡುತ್ತದೆ, ಇದನ್ನು ಹೇಗೆ ಆ್ಯಕ್ಟಿವೇಟ್​ ಮಾಡಿಕೊಳ್ಳಬೇಕೆಂಬ ಇತ್ಯಾದಿ ವಿವರಗಳು ಇಲ್ಲಿವೆ.

HOW TO KNOW ACTIVITY IN INSTAGRAM  INSTAGRAM TAKE A BREAK FEATURE  INSTAGRAM PARENTAL SUPERVISION  PARENTAL SUPERVISION ACTIVATION
ಮಕ್ಕಳ ಮೇಲೆ ನಿಗಾವಹಿಸಲು ಮತ್ತೊಂದು ಹೊಸ ಫೀಚರ್​ ಪರಿಚಯಿಸಿದ ಇನ್​ಸ್ಟಾ (ETV Bharat)

By ETV Bharat Tech Team

Published : 4 hours ago

Parental Supervision Feature: ಇನ್​ಸ್ಟಾಗ್ರಾಂ.. ಈ ಹೆಸರಿಗೆ ಹೆಚ್ಚು ಪರಿಚಯ ಅಗತ್ಯವಿಲ್ಲ. ಪ್ರತಿಯೊಂದು ಫೋನ್ ಈ ಅಪ್ಲಿಕೇಶನ್ ಹೊಂದಿರುವುದು ಸಾಮಾನ್ಯ. ಈ ಸೋಷಿಯಲ್ ಮೀಡಿಯಾದಲ್ಲಿ ಯುವಕರೆಲ್ಲರೂ ಮುಳುಗಿ ಹೋಗಿದ್ದಾರೆ. ಆದರೂ.. ಮಕ್ಕಳೂ ಇದರಲ್ಲಿ ಕೊಚ್ಚಿ ಹೋಗುತ್ತಿರುವುದು ಅಪಾಯದ ಸಂಗತಿ. ಅದಕ್ಕೇ ಪರಿಸ್ಥಿತಿ ಕೈ ಜಾರದಂತೆ ಇನ್​ಸ್ಟಾಗ್ರಾಂ ಹೊಸದೊಂದು ಫೀಚರ್ ಹೊರ ತರುತ್ತಿದೆ.

ಈ ಫೀಚರ್​ ಮೂಲಕ ಮಕ್ಕಳು ಯಾವ ರೀತಿಯ ಕಂಟೆಂಟ್ ನೋಡುತ್ತಿದ್ದಾರೆ ಎಂಬುದನ್ನು ಪೋಷಕರು ತಿಳಿದುಕೊಳ್ಳಬಹುದಾಗಿದೆ. ಅದರ ಹೆಸರೇ "ಪೆರೆಂಟಲ್​ ಸೂಪರ್​ ವಿಸನ್​" ಫೀಚರ್​. ಈ ವೈಶಿಷ್ಟ್ಯದೊಂದಿಗೆ ಪೋಷಕರು ಇನ್​ಸ್ಟಾಗ್ರಾಂನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದಾರೆ? ಯಾವ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಬಹುದು. ಈ ಫೀಚರ್​ ಅನ್ನು ಹೇಗೆ ಆ್ಯಕ್ಟಿವೆಟ್​ ಮಾಡಿಕೊಳ್ಳಬೇಕೆಂಬುದನ್ನು ತಿಳಿಯಿರಿ..

  • ಪೆರೆಂಟಲ್​ ಸೂಪರ್​ ವಿಸನ್ ಫೀಚರ್​ ಅನ್ನು ಆ್ಯಕ್ಟಿವೆಟ್​ ಮಾಡ ಬಯಸುವವರು ತಮ್ಮ ಮಕ್ಕಳ ಖಾತೆಗಳಿಂದ ಇನ್​ಸ್ಟಾಗ್ರಾಂಗೆ ಮನವಿ ಸಲ್ಲಿಸಬೇಕು..
  • ಅದರ ನಂತರ ಪೋಷಕರು ತಮ್ಮ ಮಕ್ಕಳು ಬಳಸುವ ಖಾತೆಗಳಿಗೆ ಪೆರೆಂಟಲ್​ ಸೂಪರ್​ ವಿಸನ್ ರಿಕ್ವೆಸ್ಟ್​ ಕಳುಹಿಸಬೇಕು.
  • ಅವರ ಮಕ್ಕಳು ರಿಕ್ವೆಸ್ಟ್​ ಆ್ಯಕ್ಸಪ್ಟ್​ ಮಾಡಿಕೊಂಡ್ರೆ ಪೋಷಕರು ತಮ್ಮ ಮಕ್ಕಳ ಇನ್​ಸ್ಟಾಗ್ರಾಂ ಖಾತೆಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು.
  • ಈ ವೈಶಿಷ್ಟ್ಯದಿಂದಾಗಿ ಯಾವುದೇ ಮಗು ಬೇರೊಬ್ಬರ ಖಾತೆಯ ಬಗ್ಗೆ ದೂರು ನೀಡಿದರೆ, ಪೋಷಕರು ನೋಟಿಫಿಕೇಶನ್​ ಪಡೆಯುತ್ತಾರೆ.

Take A Break ಬಗ್ಗೆ ಗೊತ್ತಾ..?:ಪೆರೆಂಟಲ್​ ಸೂಪರ್​ ವಿಸನ್ ಫೀಚರ್ ಜೊತೆಗೆ ಇನ್​ಸ್ಟಾಗ್ರಾಂ ಮತ್ತೊಂದು ವೈಶಿಷ್ಟ್ಯವನ್ನು ಸಹ ತಂದಿದೆ. ಅಷ್ಟೇ.. ಟೇಕ್​ ಎ ಬ್ರೇಕ್​.. ಬಹುಪಾಲು ಜನರು ಇನ್​ಸ್ಟಾಗ್ರಾಂಗೆ ಲಾಗಿನ್​ ಆದ ನಂತರ ಅವರು ಎಷ್ಟು ಸಮಯದವರೆಗೆ ಉಪಯೋಗಿಸುತ್ತಾರೆ ಎಂದು ಅವರಿಗೆ ತಿಳಿದಿರುವುದಿಲ್ಲ. ಅವರು ನಿಮಿಷಗಳಿಂದ ಗಂಟೆಗಳವರೆಗೆ ಇನ್​ಸ್ಟಾ ಬಳಸುತ್ತಲೇ ಇರುತ್ತಾರೆ. ಈ ಪರಿಸ್ಥಿತಿ ಅತಿಯಾಗುತ್ತಿರುವುದನ್ನು ಮನಗಂಡ ಇನ್‌ಸ್ಟಾಗ್ರಾಮ್ ಸ್ವಯಂ ನಿಯಂತ್ರಣಕ್ಕಾಗಿ 'ಟೇಕ್ ಎ ಬ್ರೇಕ್' ಎಂಬ ಫೀಚರ್ ತಂದಿದೆ.

  • ಬಳಕೆದಾರರು ದೀರ್ಘಕಾಲ ಇನ್​ಸ್ಟಾಗ್ರಾಂ ನೋಡುತ್ತಿದ್ದರೆ ಫೋನ್ ಪರದೆಯಲ್ಲಿ "ಟೇಕ್ ಎ ಬ್ರೇಕ್" ಎಂಬ ಪಾಪ್ - ಅಪ್ ಸಂದೇಶವು ಕಾಣಿಸಿಕೊಳ್ಳುತ್ತದೆ.
  • ನೀವು ಅದರ ಮೇಲೆ ಕ್ಲಿಕ್ ಮಾಡಿದರೆ ಎಷ್ಟು ಸಮಯ ವಿರಾಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಮಯದ ಮಿತಿಗಳನ್ನು ಕಾಣಬಹುದು.
  • ಸಮಯವನ್ನು ಆಯ್ಕೆ ಮಾಡಿದ ನಂತರ ಅದು ಕೆಲವು ಸಲಹೆಗಳನ್ನು ನೀಡುತ್ತದೆ.
  • ಇನ್​ಸ್ಟಾಗ್ರಾಂ ಅದರಲ್ಲಿ ಟೇಕ್​ ಎ ಡೀಪ್​ ಬ್ರಿತ್, ಬಳಿಕ ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬರೆಯಿರಿ, ನಿಮ್ಮ ಮೆಚ್ಚಿನ ಹಾಡುಗಳನ್ನು ಆಲಿಸಿ ಮತ್ತು ಟು-ಡು ಲಿಸ್ಟ್​ನಲ್ಲಿರುವ ಕಾರ್ಯಗಳನ್ನು ಪೂರ್ಣಗೊಳಿಸು ಎಂದು ಸೂಚಿಸುತ್ತದೆ.

ಅ್ಯಕ್ಟಿವಿಟಿ ಸಹ ತಿಳಿಯಬಹುದು:

  • ಮಕ್ಕಳು ಇನ್​​ಸ್ಟಾಗ್ರಾಂನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದಾರೆ ಎಂಬುದನ್ನು ಈ ರೀತಿ ತಿಳಿದುಕೊಳ್ಳಿ.
  • ಮೊದಲು ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರೊಫೈಲ್ ಓಪನ್​ ಮಾಡಿ..
  • ನಂತರ ಮೇಲಿನ ಮೆನು ಬಾರ್ ಅನ್ನು ಕ್ಲಿಕ್​ ಮಾಡಿ ಮತ್ತು ನಿಮ್ಮ ಆ್ಯಕ್ಟಿವಿಟಿ ಆಯ್ದುಕೊಳ್ಳಿ.
  • ದಿನದಿಂದ ದಿನಕ್ಕೆ ಇಡೀ ವಾರಕ್ಕೆ ಇನ್​ಸ್ಟಾಗ್ರಾಂ ಅನ್ನು ಎಷ್ಟು ಸಮಯದವರೆಗೆ ಬಳಸಲಾಗಿದೆ ಎಂಬ ವಿವರಗಳನ್ನು ಸ್ಕ್ರೀನ್​ ಮೇಲೆ ಕಾಣುತ್ತವೆ.

ಓದಿ:ಆಂಡ್ರಾಯ್ಡ್​ ಎಕ್ಸ್​ಆರ್​ ಪರಿಚಯಿಸಿದ ಗೂಗಲ್​ - ಸ್ಯಾಮ್​ಸಂಗ್​: ಇದರ ಕಾರ್ಯವೇನು ಗೊತ್ತಾ?

ABOUT THE AUTHOR

...view details