OpenAI CTO Mira Murati Resigns:ಓಪನ್ AI ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮುಖ್ಯ ತಾಂತ್ರಿಕ ಅಧಿಕಾರಿ ಮೀರಾ ಮುರತಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಪ್ರಕಟಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ದೊಡ್ಡ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸುವಲ್ಲಿ ಪ್ರಸಿದ್ಧಿ ಪಡೆದಿದ್ದ ಇವರು ಸುಮಾರು ಆರೂವರೆ ವರ್ಷ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಇದೀಗ ರಾಜೀನಾಮೆ ನೀಡಿದ್ದು, ತನಗಾಗಿ ಹೆಚ್ಚಿನ ಸಮಯ ಮೀಸಲಿಡಲು ಮತ್ತು ಇನ್ನಷ್ಟು ಕಲಿಕೆಯ ಉದ್ದೇಶಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಚಾಟ್ಜಿಪಿಟಿಯನ್ನು ಕಂಪನಿಯಲ್ಲಿ ಪ್ರಮುಖ ಆಟಗಾರನನ್ನಾಗಿ ಮಾಡುವಲ್ಲಿ ಮತ್ತು ಅದನ್ನು ಮುನ್ನಡೆಸುವಲ್ಲಿ ಮೀರಾ ಮುರತಿ ಪ್ರಮುಖರು. ತಮ್ಮ ರಾಜೀನಾಮೆ ಮತ್ತು ಭವಿಷ್ಯದ ಪ್ರಯಾಣದ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಪತ್ರವೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ.
ಚಾಟ್ಜಿಪಿಟಿ ಯೋಜನೆ ಸೇರಿದಂತೆ ಕಂಪನಿಯೊಂದಿಗೆ ನನ್ನ ಆರೂವರೆ ವರ್ಷಗಳ ಕಾರ್ಯ ನಿರ್ವಹಣೆ ಉತ್ತಮವಾಗಿದೆ. ನನಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿತ್ತು. ಇದಕ್ಕಾಗಿ ಕಂಪನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಉತ್ತಮ ತಂತ್ರಜ್ಞಾನ ಕಂಪನಿಯನ್ನು ಮುನ್ನಡೆಸಲು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಸ್ಯಾಮ್ ಮತ್ತು ಗ್ರೆಗ್ ಅವರಿಗೆ ಧನ್ಯವಾದ ಎಂದಿದ್ದಾರೆ.