ಹೈದರಾಬಾದ್:ಭಾರತೀಯ ಮಾರುಕಟ್ಟೆಯಲ್ಲಿ OnePlus ಗೆ ಸಾಕಷ್ಟು ಬೇಡಿಕೆ ಇದೆ. ಈ ಪ್ರಮುಖ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಹಾಟ್‌ಕೇಕ್‌ಗಳಂತೆ ಮಾರಾಟವಾಗುತ್ತವೆ. OnePlus ಬ್ರ್ಯಾಂಡ್‌ಗೆ ದೇಶ ಹಾಗೂ ವಿದೇಶಗಳಲ್ಲಿ ತುಂಬಾ ಕ್ರೇಜ್ ಇದೆ. ಈ ಹಿನ್ನೆಲೆಯಲ್ಲಿ ಕಂಪನಿ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಅದುವೇ ಒನ್ ಪ್ಲಸ್ ಸ್ಮಾರ್ಟ್ ವಾಚ್ -2. ಹಾಗಾದರೆ ಈ ವಾಚ್ನ ವೈಶಿಷ್ಟ್ಯಗಳೇನು ಅಂತಾ ನೋಡುವುದಾದರೆ,
OnePlus ವಾಚ್ 2ರ ವೈಶಿಷ್ಟ್ಯಗಳು:
ಬ್ರಾಂಡ್ - ಒನ್ಪ್ಲಸ್
ವಾಚ್ ಸ್ಕ್ರೀನ್ - 1.43 ಇಂಚು
ಗಾತ್ರ- 46 ಮಿಮೀ
ಡಿಸ್ಪ್ಲೇ ಮೆಟೀರಿಯಲ್ - ಸೈಪರ್ ಕ್ರಿಸ್ಟಲ್ AMOLED ಡಿಸ್ಪ್ಲೇ
ಪ್ರೊಸೆಸರ್ - Qualcomm Snapdragon W5 Gen 1 ಚಿಪ್ಸೆಟ್
ಬ್ಯಾಟರಿ ಬಾಳಿಕೆ - 100 ಗಂಟೆಗಳು (ಒಂದೇ ಬಾರಿ ಚಾರ್ಜ್ ಮಾಡಿದರೆ)
ಬ್ಯಾಟರಿ ಸಾಮರ್ಥ್ಯ- 402mAh
ವಾಟರ್ಪ್ರೂಫ್ - IP68 ರೇಟಿಂಗ್
OS - Google WearOS 4.0
ಬೆಲೆ-ರೂ.16,999 (ಅಂದಾಜು)
ಇಂದು ಬಿಡುಗಡೆ ಸಾಧ್ಯತೆಯಾಗುವ ಸಾಧ್ಯತೆಗಳಿವೆ.
ವಿಶೇಷತೆಗಳು: 5.0 ಬ್ಲೂಟೂತ್ ಆವೃತ್ತಿ, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ. OnePlus 12ರಿಂದ ಪ್ರೇರಿತವಾಗಿದ್ದು, ಎರಡು ರೂಪಾಂತರಗಳಲ್ಲಿ ವಾಚ್ ಅನ್ನು ಹೊರ ತರಲಾಗುತ್ತಿದೆ. OnePlus ಸ್ಮಾರ್ಟ್‌ವಾಚ್-2 ಸಿಲಿಕೋನ್ ಸ್ಟ್ರಾಪ್‌ನೊಂದಿಗೆ ಸ್ಟೇನ್‌ಲೆಸ್ ಸ್ಟೀಲ್ ಕೇಸ್ ಕೂಡಾ ಹೊಂದಿದೆ. ಏತನ್ಮಧ್ಯೆ 2021ರಲ್ಲೇ ಸ್ಮಾರ್ಟ್ ವಾಚ್-1 ಅನ್ನು ಆವೃತ್ತಿ ಬಿಡುಗಡೆಯಾಗಿ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಪೂರ್ವ ಬುಕಿಂಗ್ ಗೆ ಅವಕಾಶ: OnePlus Smartwatch-2 ಗಾಗಿ ಪೂರ್ವ-ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇವಲ ರೂ.99 ಪಾವತಿಸಿ ಹೊಸ ಮಾದರಿಯ ಈ ವಾಚ್ಗೆ ಬುಕ್ ಮಾಡಬಹುದು. ಈ ಸ್ಮಾರ್ಟ್ ವಾಚ್ ಅನ್ನು OnePlus ಸ್ಟೋರ್‌ಗಳಿಂದ ಮಾತ್ರವಲ್ಲದೇ Amazon ಮತ್ತು Flipkart ನಂತಹ ಇ-ಕಾಮರ್ಸ್ ಆನ್‌ಲೈನ್ ಸ್ಟೋರ್‌ಗಳಿಂದಲೂ ಬುಕ್ ಮಾಡಬಹುದಾಗಿದೆ.
ಇತರ ರಿಯಾಯಿತಿಗಳು: OnePlus Smartwatch-2 ನ ಬಾಕ್ಸ್ ಬೆಲೆಯಲ್ಲಿ ಕಂಪನಿ 1000 ವರೆಗೆ ತ್ವರಿತ ರಿಯಾಯಿತಿ ನೀಡುವುದಾಗಿ ಹೇಳಿದೆ. Pre Bullet Wireless Z2 Active Noise Cancellation ಇಯರ್‌ಬಡ್‌ಗಳನ್ನು ವಾಚ್‌ನೊಂದಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ. ಈ ಉಚಿತ ಇಯರ್‌ಬಡ್ಸ್ ಕೂಪನ್ ಕೊಡುಗೆ ಮಾರ್ಚ್ 31 ರವರೆಗೆ ಮಾತ್ರ ಲಭ್ಯ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ವಾಚ್ ಖರೀದಿಗೆ ಆಸಕ್ತಿ ಹೊಂದಿರುವವರು, OnePlus ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಪಾಸ್ ಲಿಂಕ್ ಖರೀದಿಸಬಹುದು. ಇದರ ಸಹಾಯದಿಂದ ನೀವು ಬೇರೆಯವರಿಗಿಂತ ಮೊದಲು ವಾಚ್ ಅನ್ನು ಬುಕ್ ಮಾಡಬಹುದು. ಆದಾಗ್ಯೂ, ಈ ಕೊಡುಗೆಯು ಮೊದಲ 1,500 ವಾಚ್ಗಳಿಗೆ ಮಾತ್ರವೇ ಲಭ್ಯ ಇರಲಿದೆ ಎಂದು ವರದಿಯಾಗಿದೆ.
ಇದನ್ನು ಓದಿ:ವಿಮಾ ವಲಯಕ್ಕೆ ಬೇಕಿದೆ ಕಾಯಕಲ್ಪ: ಸುಧಾರಣಾ ಕ್ರಮ ಜಾರಿಗೆ ಇದು ಸಕಾಲ