Ola S1 Pro Sona Edition:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನ ಸೀಮಿತ ಆವೃತ್ತಿ ಬಿಡುಗಡೆ ಮಾಡಿದೆ. ಈ ಸೀಮಿತ ಆವೃತ್ತಿಯ ರೂಪಾಂತರಕ್ಕೆ 'ಸೋನಾ' ಎಂದು ನಾಮಕರಣ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಹಲವು ಭಾಗಗಳನ್ನು 24 ಕ್ಯಾರೆಟ್ ಚಿನ್ನದ ಅಂಶಗಳಿಂದ ಮಾಡಲಾಗಿದೆ. ಓಲಾ ಎಸ್1 ಪ್ರೊ ಸೋನಾದ ಸೀಮಿತ ಯುನಿಟ್ಗಳನ್ನು ಎಷ್ಟು ಉತ್ಪಾದಿಸಲಾಗುತ್ತದೆ ಎಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ. ಇನ್ನು ಈ ಹೊಸ ಸೋನಾ ಎಡಿಷನ್ಗೆ ಓಲಾ ಕಂಪನಿ ಸ್ಪರ್ಧೆಯೊಂದನ್ನು ಕೂಡಾ ನಡೆಸುತ್ತಿದೆ.
ಸ್ಕ್ರಾಚ್ ಮತ್ತು ವಿನ್ ಸ್ಪರ್ಧೆಯ ಮೂಲಕ ಸ್ಕೂಟರ್ ಗೆಲ್ಲುವ ಅವಕಾಶ:ಹೌದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು, ಭಾಗವಹಿಸುವವರು Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಇನ್ಸ್ಟಾಗ್ರಾಮ್ ರೀಲ್ ಪೋಸ್ಟ್ ಮಾಡಬೇಕು ಅಥವಾ Ola ಸ್ಟೋರ್‌ನ ಹೊರಗೆ ಫೋಟೋ ಅಥವಾ ಸೆಲ್ಫಿ ಕ್ಲಿಕ್ ಮಾಡಬೇಕು. ಬಳಿಕ ನೀವು ತೆಗೆದುಕೊಂಡ ಫೋಟೋಗಳಾಗಲಿ ಅಥವಾ ವಿಡಿಯೋಗಳಾಗಲಿ #OlaSonaContest ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ Ola Electric ಟ್ಯಾಗ್ ಮಾಡಬೇಕು. ಇದರ ನಂತರ ಭಾಗವಹಿಸುವವರು ಸ್ಕ್ರಾಚ್ ಮತ್ತು ವಿನ್ ಸ್ಪರ್ಧೆಯ ಮೂಲಕ ಸೀಮಿತ ಆವೃತ್ತಿಯ ಸ್ಕೂಟರ್ ವೊಂದನ್ನು ಗೆಲ್ಲಬಹುದು. ಈ ಸ್ಪರ್ಧೆಯು ಡಿಸೆಂಬರ್ 25 ರಂದು ಅಂದ್ರೆ ಇಂದಿನಿಂದ ಓಲಾ ಸ್ಟೋರ್‌ಗಳಲ್ಲಿ ನಡೆಯಲಿದೆ.
Ola S1 Pro Sona ಅನ್ನು ಸ್ಪೇಷಲ್ ಕಲರ್ನಲ್ಲಿ ಪರಿಚಯಿಸಲಾಗಿದೆ. ಇದು ಪರ್ಲ್ ವೈಟ್ ಮತ್ತು ಗೋಲ್ಡ್ ಮಿಶ್ರಣವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಹಿಂಭಾಗದ ಫುಟ್‌ಪೆಗ್, ಗ್ರಾಬ್ ರೈಲ್, ಬ್ರೇಕ್ ಲಿವರ್ ಮತ್ತು ಮಿರರ್ ಸ್ಟಾಕ್‌ನಂತಹ ಅನೇಕ ಯುನಿಟ್ಗಳನ್ನು 24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ.