ಕರ್ನಾಟಕ

karnataka

ETV Bharat / technology

ಭಾರತೀಯ ಸಂಖ್ಯೆಗಳಂತೆ ಕಾಣುವ ಅಂತಾರಾಷ್ಟ್ರೀಯ ಕರೆಗಳನ್ನು ನಿರ್ಬಂಧಿಸಲು ಬಂದಿದೆ ಸ್ಪ್ಯಾಮ್ ಟ್ರ್ಯಾಕಿಂಗ್ ವ್ಯವಸ್ಥೆ!

Spam Tracking System: ಭಾರತೀಯ ಸಂಖ್ಯೆಗಳಂತೆ ಒಳಬರುವ ಅಂತಾರಾಷ್ಟ್ರೀಯ ಕರೆಗಳನ್ನು ನಿರ್ಬಂಧಿಸಲು ಸರ್ಕಾರ ಹೊಸ ಸ್ಪ್ಯಾಮ್ ಟ್ರ್ಯಾಕಿಂಗ್ ವ್ಯವಸ್ಥೆ ತಂದಿದೆ. ಇದರಿಂದ ಅಮಾಯಕರನ್ನು ವಂಚನೆಗೊಳಗಾದಂತೆ ತಡೆಯಲು ಸಾಧ್ಯವಾಗುತ್ತದೆ.

BLOCKS INTERNATIONAL CALLS  INDIAN PHONE NUMBERS  CALLS PREVENTION SYSTEM  CENTRAL GOVERNMENT
ಸ್ಪ್ಯಾಮ್ ಟ್ರ್ಯಾಕಿಂಗ್ ವ್ಯವಸ್ಥೆ (IANS)

By ETV Bharat Tech Team

Published : 4 hours ago

Spam Tracking System: ಭಾರತೀಯ ಫೋನ್ ಸಂಖ್ಯೆಗಳಂತೆ ಒಳಬರುವ ಅಂತಾರಾಷ್ಟ್ರೀಯ ಕರೆಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಹೊಸ ಸ್ಪ್ಯಾಮ್-ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸರ್ಕಾರ ಪ್ರಕಟಿಸಿದೆ. ಸದ್ಯ ಈ ಹೊಸ ಟ್ರ್ಯಾಕಿಂಗ್​ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, 24 ಗಂಟೆಗಳೊಳಗೆ ಅದ್ಭುತ ಕಾರ್ಯ ಮಾಡಿದೆ. ಭಾರತೀಯ ಫೋನ್ ಸಂಖ್ಯೆಯಂತೆ ಒಳಬರುವ ಎಲ್ಲ ಅಂತಾರಾಷ್ಟ್ರೀಯ ವಂಚನೆ ಕರೆಗಳು ಸುಮಾರು 1.35 ಕೋಟಿ ಅಥವಾ 90 ಪ್ರತಿಶತವನ್ನು ಕರೆಗಳನ್ನು ಗುರುತಿಸಿದೆ. ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಆ ವಂಚನೆ ಕರೆಗಳನ್ನು ಭಾರತೀಯ ಟೆಲಿಕಾಂ ಚಂದಾದಾರರನ್ನು ತಲುಪದಂತೆ ನಿರ್ಬಂಧಿಸಿದ್ದಾರೆ.

‘ಅಂತಾರಾಷ್ಟ್ರೀಯ ಒಳಬರುವ ವಂಚಕ ಕರೆಗಳ ತಡೆಗಟ್ಟುವಿಕೆ ವ್ಯವಸ್ಥೆ’ಗೆ ಚಾಲನೆ ನೀಡಿದ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಇದು ಸುರಕ್ಷಿತ ಡಿಜಿಟಲ್ ಜಾಗವನ್ನು ನಿರ್ಮಿಸುವ ಮತ್ತು ನಾಗರಿಕರನ್ನು ಸೈಬರ್ ಅಪರಾಧದಿಂದ ರಕ್ಷಿಸುವ ಮತ್ತೊಂದು ಸರ್ಕಾರದ ಪ್ರಯತ್ನವಾಗಿದೆ ಎಂದು ಹೇಳಿದರು. ಸೈಬರ್ ಅಪರಾಧಿಗಳು ಭಾರತೀಯ ಮೊಬೈಲ್ ಸಂಖ್ಯೆ +91 ಅನ್ನು ಪ್ರದರ್ಶಿಸುವ ಮೂಲಕ ಅಂತಾರಾಷ್ಟ್ರೀಯ ವಂಚನೆಯ ಕರೆಗಳನ್ನು ಮಾಡಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಈ ಕರೆಗಳು ದೇಶಿಯ ಕರೆಗಳಂತೆ ಕಂಡು ಬರುತ್ತವೆ. ಆದರೆ ವಾಸ್ತವವಾಗಿ ಕರೆ ಮಾಡುವ ಲೈನ್ ಗುರುತನ್ನು (CLI) ಅಥವಾ ಸಾಮಾನ್ಯವಾಗಿ ಫೋನ್ ಸಂಖ್ಯೆ ಎಂದು ಕರೆಯುವ ಮೂಲಕ ವಿದೇಶದಿಂದ ಮಾಡಲಾಗುತ್ತಿದೆ.

ಈ ವಂಚನೆಯ ಕರೆಗಳನ್ನು ಹಣಕಾಸಿನ ಹಗರಣಗಳಿಗೆ ಬಳಸಲಾಗಿದೆ. ಸರ್ಕಾರಿ ಅಧಿಕಾರಿಗಳಂತೆ ಸೋಗು ಹಾಕುವುದು ಮತ್ತು ಅಮಾಯಕರನ್ನು ಭಯಭೀತರನ್ನಾಗಿಸಿ ಮಾಡುವುದು ಸೈಬರ್​ ಅಪರಾಧಿಗಳ ಉದ್ದೇಶವಾಗಿದೆ. ಸೈಬರ್-ಕ್ರೈಮ್‌ನಲ್ಲಿ DoT/TRAI ಅಧಿಕಾರಿಗಳು ಮೊಬೈಲ್ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸುವುದು, ಕೊರಿಯರ್‌ನಲ್ಲಿ ಡ್ರಗ್ಸ್/ಮಾದಕ ದ್ರವ್ಯಗಳು, ಪೊಲೀಸ್ ಅಧಿಕಾರಿಗಳಂತೆ ಸೋಗು ಹಾಕುವುದು, ಸೆಕ್ಸ್ ರಾಕೆಟ್‌ನಲ್ಲಿ ಬಂಧನ ಇತ್ಯಾದಿ ಪ್ರಕರಣಗಳು ಸಹ ನಡೆದಿವೆ.

ಸಂವಹನ ಇಲಾಖೆ (DoT) ಮತ್ತು TSP ಗಳು ಸಹಯೋಗದಲ್ಲಿ ಮತ್ತು ಅಂತಹ ಒಳಬರುವ ಅಂತಾರಾಷ್ಟ್ರೀಯ ವಂಚನೆಯ ಕರೆಗಳನ್ನು ಭಾರತೀಯ ಟೆಲಿಕಾಂ ಚಂದಾದಾರರನ್ನು ತಲುಪದಂತೆ ಗುರುತಿಸಲು ಮತ್ತು ನಿರ್ಬಂಧಿಸಲು ವ್ಯವಸ್ಥೆಯನ್ನು ರೂಪಿಸಿವೆ. "ಇಂತಹ ಉತ್ತಮ ಪ್ರಯತ್ನಗಳ ಹೊರತಾಗಿಯೂ, ವಂಚಕರು ಇತರ ವಿಧಾನಗಳ ಮೂಲಕ ಯಶಸ್ವಿಯಾಗುವ ಸಂದರ್ಭಗಳು ಇರಬಹುದು. ಅಂತಹ ಕರೆಗಳಿಗಾಗಿ ಸಂಚಾರ ಸಾಥಿಯಲ್ಲಿನ ಚಕ್ಷು ಸೌಲಭ್ಯದಲ್ಲಿ ಅಂತಹ ಶಂಕಿತ ವಂಚನೆ ಸಂವಹನಗಳನ್ನು ವರದಿ ಮಾಡುವ ಮೂಲಕ ನೀವು ಸಹಾಯ ಮಾಡಬಹುದು,” ಎಂದು ಸರ್ಕಾರ ಹೇಳಿದೆ.

ಒಳಬರುವ ಅಂತಾರಾಷ್ಟ್ರೀಯ ಕರೆಗಳನ್ನು ಸಿಸ್ಟಮ್ ಗುರುತಿಸುತ್ತದೆ ಮತ್ತು ನಿರ್ಬಂಧಿಸುವುದರಿಂದ ನಾಗರಿಕರನ್ನು ಸೈಬರ್ ವಂಚನೆಗಳಿಂದ ರಕ್ಷಿಸಲು DoT ಯ ಮತ್ತೊಂದು ಹಂತವಾಗಿದೆ.

ಓದಿ:ಸೆಲೆಬ್ - ಬೈಟ್ ಹಗರಣ ಪತ್ತೆಹಚ್ಚಲು ಫೇಸ್ ರೆಕಗ್ನಿಷನ್ ತಂತ್ರಜ್ಞಾನಕ್ಕೆ ಮತ್ತೆ ಜೀವ ತುಂಬುತ್ತಿರುವ ಮೆಟಾ!

ABOUT THE AUTHOR

...view details