New Honda SP125 Launched: ಹೋಂಡಾ 2025 ಮಾಡೆಲ್ನ ಎಸ್‌ಪಿ 125 ಬೈಕ್ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್ OBD2B ಕಂಪ್ಲೈಂಟ್ ಆಗಿದೆ. ಹೊಸ ವೈಶಿಷ್ಟ್ಯಗಳು ಮತ್ತು ಉತ್ತಮ ವಿನ್ಯಾಸವನ್ನು ಇದಕ್ಕೆ ನೀಡಲಾಗಿದೆ. ಹೊಸ ಹೋಂಡಾ ಎಸ್‌ಪಿ 125 ಬ್ಲೂಟೂತ್ ನ್ಯಾವಿಗೇಷನ್, ವಾಯ್ಸ್ ಅಸಿಸ್ಟ್ ಮತ್ತು USB ಟೈಪ್-C ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳ ಜೊತೆ 4.2-ಇಂಚಿನ TFT ಡಿಸ್ಪ್ಲೇ ಸಹ ಹೊಂದಿದೆ.
ಬೆಲೆ ಮತ್ತು ವೈಶಿಷ್ಟ್ಯಗಳು: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ ಹೊಸ 2025 ಮಾದರಿಯ SP125 ಬೈಕ್ನಲ್ಲಿ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೈಕ್ ಅನ್ನು ಹೊಸ OBD2B ಮಾಲಿನ್ಯ ಮಾನದಂಡಗಳ ಪ್ರಕಾರ ತಯಾರಿಸಲಾಗಿದೆ. ಸ್ಟೈಲಿಶ್ ಮತ್ತು ತಾಂತ್ರಿಕವಾಗಿ ಸುಧಾರಿತ ಬೈಕ್‌ಗಳನ್ನು ಬಯಸುವ ಹೊಸ ಯುಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಇದನ್ನು ವಿನ್ಯಾಸಗೊಳಿಸಿದೆ. ಹೊಸ ಹೋಂಡಾ SP 125 ನ ಡ್ರಮ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ 91,771 ಮತ್ತು ಡಿಸ್ಕ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ 1,00,284 ಆಗಿದೆ. ಹೊಸ SP125 ಎಲ್ಲ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಕಲರ್ಸ್: 2025 ಮಾದರಿಯ ಹೋಂಡಾ SLP125 ನಲ್ಲಿ ಹಲವು ಹೊಸ ವಿನ್ಯಾಸದ ಅಂಶಗಳನ್ನು ಕಾಣಬಹುದಾಗಿದೆ. ಹೊಸ ಟ್ಯಾಂಕ್ ಕವರ್, ಕ್ರೋಮ್ ಮಫ್ಲರ್ ಕವರ್ ಮತ್ತು ಆಕರ್ಷಕ ಗ್ರಾಫಿಕ್ಸ್ ಇದಕ್ಕೆ ಸ್ಪೋರ್ಟಿ ಲುಕ್ ನೀಡುತ್ತದೆ. ಇದಲ್ಲದೇ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಳನ್ನು ಇದರಲ್ಲಿ ನೀಡಲಾಗಿದೆ. ಈ ಬೈಕ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ನಂತಹ 5 ಆಕರ್ಷಕ ಕಲರ್ಗಳನ್ನು ನೀಡಲಾಗಿದೆ.
ಇತರ ವೈಶಿಷ್ಟ್ಯಗಳು:ಹೊಸ ಹೋಂಡಾ SP125 ನ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು 4.2 ಇಂಚಿನ TFT ಡಿಸ್ಪ್ಲೇ ಹೊಂದಿದೆ. ಇದು ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್ ಅನ್ನು ಬೆಂಬಲಿಸುತ್ತದೆ. ಇದರರ್ಥ ನೀವು ನಿಮ್ಮ ಬೈಕ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದು ಮತ್ತು ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್ಸ್ ಮತ್ತು ಕಾಲ್ ಅಲರ್ಟ್ಗಳಂತಹ ವೈಶಿಷ್ಟ್ಯಗಳನ್ನು ಬಳಸಬಹುದು. ಇದಲ್ಲದೇ, ಇದು ವಾಯ್ಸ್ ಅಸಿಸ್ಟ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಇದರ ಮೂಲಕ ನೀವು ನಿಮ್ಮ ಕೈಗಳನ್ನು ಬಳಸದೆಯೇ ಅನೇಕ ಕೆಲಸಗಳನ್ನು ಮಾಡಬಹುದು. ಇದು ಮೊಬೈಲ್ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಸಹ ಹೊಂದಿದೆ.