New Bajaj Chetak Electric Launched: ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋ ತನ್ನ ಇತ್ತೀಚಿನ 'ಬಜಾಜ್ ಚೇತಕ್ ಎಲೆಕ್ಟ್ರಿಕ್' ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಇದನ್ನು ಮೂರು ರೂಪಾಂತರಗಳಲ್ಲಿ ತರಲಾಗಿದೆ. 'ಚೇತಕ್ 35' ಸೀರಿಸ್ '3501' ಮತ್ತು '3502' ಎಂಬ ಹೆಸರಿನ ಎರಡು ಆವೃತ್ತಿಗಳನ್ನು ಹೊಂದಿದೆ. '3501' ಇವುಗಳ ಟಾಪ್-ಸ್ಪೆಕ್ ಆವೃತ್ತಿಯಾಗಿದೆ. ಕಂಪನಿಯು ಈ ಪ್ರೀಮಿಯಂ ಮಾದರಿಯನ್ನು ರೂ.1.27 ಲಕ್ಷ ಎಕ್ಸ್ ಶೋ ರೂಂ ಬೆಲೆಗೆ ಮಾರಾಟ ಮಾಡುತ್ತಿದೆ. '3502' ಮಧ್ಯಮ ಶ್ರೇಣಿಯ ರೂಪಾಂತರವಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 1.20 ಲಕ್ಷ ರೂ. ಇದೆ. ಆದರೆ '3503' ಬೇಸ್ ರೂಪಾಂತರವನ್ನು ಈ ಸೀರಿಸ್ನಲ್ಲಿ ಶೀಘ್ರದಲ್ಲೇ ತರಲಾಗುವುದು.
ರೇಂಜ್ ಮತ್ತು ಪರ್ಫಾಮೆನ್ಸ್: ಈ ಹೊಸ ಬಜಾಜ್ ಚೇತಕ್ ಹೊಸ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಇದು 3.5kWh ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಫ್ರೋರ್ಬೋರ್ಡ್ ಕೆಳಗೆ ಹೊಂದಿಸಿದ್ದಾರೆ. 3 ಕೆ.ಜಿ ತೂಕದ ಈ ಹೊಸ ಬ್ಯಾಟರಿ 153 ಕಿ.ಮೀ ಹೈ ರೇಂಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್ 950W ಚಾರ್ಜರ್‌ನೊಂದಿಗೆ ಬರುತ್ತದೆ. ಈ ಸ್ಕೂಟರ್ ಮೂರು ಗಂಟೆಗಳಲ್ಲಿ 0-80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.
ಇದರ ವಿಶೇಷತೆಗಳಿಗೆ ಸಂಬಂಧಿಸಿದಂತೆ ಹೊಸ ಬಜಾಜ್ ಚೇತಕ್ ಅದರ ಹಿಂದಿನ ಮಾದರಿಯಂತೆಯೇ ಅದೇ ಸಾಧನಗಳೊಂದಿಗೆ ಬರುತ್ತದೆ. ಇದರಲ್ಲಿ 4kW ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಕಂಪನಿಯು ಹೇಳಿಕೊಂಡಂತೆ, ಅದರ ಕಾರ್ಯಕ್ಷಮತೆ ಹಳೆಯ ಮಾದರಿಯಂತೆಯೇ ಇರುತ್ತದೆ. ಇದರ ಮೊದಲ ಎರಡು ಮಾದರಿಗಳು 73kph ವೇಗ ಹೊಂದಿವೆ. ಇದರ ಬೇಸ್ 3503 ಮಾದರಿಯು 63kph ಗರಿಷ್ಠ ವೇಗ ಹೊಂದಿದೆ. ಆದರೆ ಕಂಪನಿಯು ಈ ಮಾದರಿಯನ್ನು ಇನ್ನೂ ತಂದಿಲ್ಲ. ಕಂಪನಿಯು ಶೀಘ್ರದಲ್ಲೇ ಇದನ್ನು ಬಿಡುಗಡೆ ಮಾಡುತ್ತದೆ.