ಕರ್ನಾಟಕ

karnataka

ETV Bharat / technology

₹55 ಕೋಟಿಗೆ ಕಾಮಿಕ್ ಕಾನ್ ಇಂಡಿಯಾ ಸ್ವಾಧೀನಪಡಿಸಿಕೊಂಡ ನಾಡ್ವಿನ್ ಗೇಮಿಂಗ್

ಕಾಮಿಕ್ ಕಾನ್ ಕಂಪನಿಯನ್ನು ನಾಡ್ವಿನ್ ಗೇಮಿಂಗ್ ಕಂಪನಿ ಸ್ವಾಧೀನಪಡಿಸಿಕೊಂಡಿದೆ.

NODWIN Gaming acquires Comic Con India for Rs 55 cr
NODWIN Gaming acquires Comic Con India for Rs 55 cr

By ETV Bharat Karnataka Team

Published : Jan 24, 2024, 12:19 PM IST

ನವದೆಹಲಿ: ಇ-ಸ್ಪೋರ್ಟ್ಸ್ ಮತ್ತು ಗೇಮಿಂಗ್ ಕಂಪನಿ ನಾಡ್ವಿನ್ ಗೇಮಿಂಗ್ ಪಾಪ್ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವ ಕಾಮಿಕ್ ಕಾನ್ ಇಂಡಿಯಾವನ್ನು 55 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಬುಧವಾರ ತಿಳಿಸಿದೆ. ವಹಿವಾಟಿನ ಭಾಗವಾಗಿ, ಕಾಮಿಕ್ ಕಾನ್ ಇಂಡಿಯಾದ ಸಂಸ್ಥಾಪಕರಾದ ಜತಿನ್ ವರ್ಮಾ ಮತ್ತು ಕರಣ್ ಕಲ್ರಾ ಅವರಿಂದ ನಗದು ಮತ್ತು ಷೇರು ವಿನಿಮಯದ ಸಂಯೋಜನೆಯ ಮೂಲಕ, ಕಾಮಿಕ್ ಕಾನ್ ಇಂಡಿಯಾದ ಶೇಕಡಾ 100 ರಷ್ಟು ಷೇರುಗಳನ್ನು 55 ಕೋಟಿ ರೂ.ಗಳ ಮೌಲ್ಯಮಾಪನದಲ್ಲಿ ನಾಡ್ವಿನ್ ಗೇಮಿಂಗ್ ಸ್ವಾಧೀನಪಡಿಸಿಕೊಳ್ಳಲಿದೆ.

ಕಾಮಿಕ್ ಕಾನ್ ಇಂಡಿಯಾದ ವ್ಯವಸ್ಥಾಪಕ ತಂಡವು ತಮ್ಮ 27.5 ಕೋಟಿ ಷೇರುಗಳನ್ನು ನಾಡ್ವಿನ್ ಷೇರುಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ನಾಡ್ವಿನ್ ಗೇಮಿಂಗ್​ನಲ್ಲಿ ಷೇರುದಾರನಾಗಲಿದೆ.

"ಒಂದು ದಶಕಕ್ಕೂ ಹೆಚ್ಚು ಕಾಲದಿಂದ, ಜನಪ್ರಿಯ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಆಚರಿಸಲು ಭಾರತದಲ್ಲಿ ವಿಶಿಷ್ಟ ವೇದಿಕೆಯನ್ನು ನಿರ್ಮಿಸಲು ನಾವು ದಣಿವರಿಯದೆ ಕೆಲಸ ಮಾಡಿದ್ದೇವೆ ಮತ್ತು ಆ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಮುಂದಿನ ಹೆಜ್ಜೆ ಇಡಲು ಮತ್ತು ಈ ಗುರಿಯನ್ನು ಒಟ್ಟಿಗೆ ನಿರ್ಮಿಸಲು ನಾಡ್ವಿನ್ ಗೇಮಿಂಗ್​ನೊಂದಿಗೆ ಕೈಜೋಡಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ" ಎಂದು ವರ್ಮಾ ಹೇಳಿದರು.

ಈ ಕಾರ್ಯತಂತ್ರದ ಸಹಭಾಗಿತ್ವವು "ಭಾರತದಾದ್ಯಂತದ ಪಾಪ್ ಸಂಸ್ಕೃತಿ ಅಭಿಮಾನಿಗಳಿಗೆ ಅದ್ಭುತ ಕಾರ್ಯಕ್ರಮಗಳು ಮತ್ತು ಅನುಭವಗಳನ್ನು ತಲುಪಿಸಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಕಲ್ರಾ ಹೇಳಿದರು.

2011ರಲ್ಲಿ ಸ್ಥಾಪನೆಯಾದ ಕಾಮಿಕ್ ಕಾನ್ ಇಂಡಿಯಾ ದೇಶಾದ್ಯಂತ ವಿವಿಧ ಉತ್ಸವಗಳನ್ನು ಆಯೋಜಿಸುತ್ತದೆ. ಕಾಮಿಕ್ಸ್, ಕಾಸ್ ಪ್ಲೇ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಮರ್ಚ್, ಗೇಮಿಂಗ್ ಮತ್ತು ಇನ್ನೂ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಇದು ಹಮ್ಮಿಕೊಳ್ಳುತ್ತದೆ.

"ಕಾಮಿಕ್ ಕಾನ್ ಇಂಡಿಯಾದ ಸ್ವಾಧೀನವು ಭಾರತದ ಯುವಕರಿಗೆ ಇಷ್ಟವಾಗುವ ಎಲ್ಲಾ ಅವಕಾಶಗಳಿಗೆ ನಾಡ್ವಿನ್ ಕೊಡುಗೆಯನ್ನು ವರ್ಧಿಸುತ್ತದೆ ಮತ್ತು ವೈವಿಧ್ಯಗೊಳಿಸುತ್ತದೆ" ಎಂದು ನೋಡ್ವಿನ್ ಗೇಮಿಂಗ್​ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಕ್ಷತ್ ರಾಠಿ ಹೇಳಿದರು.

ನಾಡ್ವಿನ್ ಗೇಮಿಂಗ್ $ 349 ಮಿಲಿಯನ್ ಮೌಲ್ಯದ ಕಂಪನಿಯಾಗಿದ್ದು, ದಕ್ಷಿಣ ಏಷ್ಯಾ, ಸಿಂಗಾಪುರ್, ಮಧ್ಯಪ್ರಾಚ್ಯ ಮತ್ತು ಟರ್ಕಿಯಂತಹ ಪ್ರದೇಶಗಳಲ್ಲಿ ಅಸ್ತಿತ್ವ ಹೊಂದಿದೆ. ನಜಾರಾ, ಕ್ರಾಫ್ಟನ್, ಸೋನಿ ಗ್ರೂಪ್ ಕಾರ್ಪೊರೇಷನ್ ಮತ್ತು ಜೆಟ್ ಸಿಂಥೆಸಿಸ್ ಇದರಲ್ಲಿನ ಹೂಡಿಕೆ ಮಾಡಿರುವ ಪ್ರಮುಖ ಕಂಪನಿಗಳಾಗಿವೆ.

ಇದನ್ನೂ ಓದಿ: AI ಈ ಹಿಂದೆ ಅಂದುಕೊಂಡಷ್ಟು ನೌಕರಿಗಳನ್ನು ಕಸಿಯದು: ವರದಿ

ABOUT THE AUTHOR

...view details