Moto G35 5G Launched: ಭಾರತೀಯ ಮಾರುಕಟ್ಟೆಗೆ ಕೇವಲ 10 ಸಾವಿರ ರೂಪಾಯಿಗೆ ಹೊಸ 5G ಸ್ಮಾರ್ಟ್ ಫೋನ್ ಬಂದಿದೆ. ಪ್ರಮುಖ ಮೊಬೈಲ್ ತಯಾರಿಕಾ ಕಂಪನಿ ಮೊಟೊರೊಲಾ 'ಜಿ' ಸರಣಿಯಲ್ಲಿ ಮತ್ತೊಂದು ಮೊಬೈಲ್ ಬಿಡುಗಡೆ ಮಾಡಿದೆ. 'Moto G35 5G' ಎಂದು ಹೆಸರಿಸಲಾದ ಈ ಫೋನ್ Android 14 ಆಧಾರಿತ Halo UI ಸ್ಕ್ರೀನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
'Moto G35 5G' ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು:
- ಡಿಸ್ಪ್ಲೇ: 6.72 ಇಂಚಿನ ಫುಲ್ ಹೆಚ್ಡಿ
- ರಿಫ್ರೆಶ್ ರೇಟ್: 120Hz
- ಟಚ್ ಸ್ಯಾಂಪ್ಲಿಂಗ್ ರೇಟ್: 240Hz
- ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
- ಬ್ಯಾಟರಿ: 5,000mAh
- ಪ್ರೊಸೆಸರ್: Qualcomm Snapdragon 6S ಜನರೇಷನ್ 3
- 20W ವೈರ್ಡ್ ಚಾರ್ಜಿಂಗ್
- ಡಾಲ್ಬಿ ಅಟ್ಮಾಸ್-ಸಪೋರ್ಟ್ ಸ್ಟಿರಿಯೊ ಸ್ಪೀಕರ್‌ಗಳು
- IP52 ರೇಟೆಡ್ ಲೆದರ್ ಫಿನಿಶ್
ಕ್ಯಾಮರಾ ಸೆಟಪ್:ಈ ಹೊಸ ಫೋನ್ 50 ಎಂಪಿ ಕ್ವಾಡ್ ಪಿಕ್ಸೆಲ್ ಪ್ರೈಮರಿ ರಿಯರ್ ಸೆನ್ಸಾರ್, ಅಲ್ಟ್ರಾ ವೈಡ್ ಆಂಗಲ್‌ನೊಂದಿಗೆ 8 ಎಂಪಿ ಸೆನ್ಸಾರ್ ಮತ್ತು ಸೆಲ್ಫಿಗಳಿಗಾಗಿ 16 ಎಂಪಿ ಫ್ರಂಟ್ ಕ್ಯಾಮರಾ ಹೊಂದಿದೆ.
ಕನೆಕ್ಟಿವಿಟಿ ವೈಶಿಷ್ಟ್ಯಗಳು:
- ಡ್ಯುಯಲ್ ಹ್ಯಾಂಡ್ ವೈಫೈ
- ಬ್ಲೂಟೂತ್ 5.0
- 3.5 ಎಂಎಂ ಆಡಿಯೊ ಜಾಕ್
- USB ಟೈಪ್-ಸಿ ಪೋರ್ಟ್