MG Comet EV Blackstorm Edition: ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಭಾರತದಲ್ಲಿ ಮಾರಾಟ ಮಾಡುವ ಅತ್ಯಂತ ಕೈಗೆಟುಕುವ ಕಾರು 'ಎಂಜಿ ಕಾಮೆಟ್ ಇವಿ'. ಸದ್ಯ ಈ ಕಾರು ಈಗ ಜನಪ್ರಿಯತೆ ಗಳಿಸುತ್ತಿದ್ದು, ಮಾರಾಟದಲ್ಲಿ ಭರ್ಜರಿಯಾಗಿ ಮುನ್ನಡೆಯುತ್ತಿದೆ. ಇದರೊಂದಿಗೆ ಕಂಪನಿಯು ಈಗ 'MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್' ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಆವೃತ್ತಿಯು ಅದರ ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ರೂಪಾಂತರವನ್ನು ಆಧರಿಸಿದೆ. ಇದು ವೀಲ್ ಕವರ್ಸ್, ಫ್ರಂಟ್ ಸ್ಕಿಡ್ ಪ್ಲೇಟ್ ಮತ್ತು ಬ್ಯಾಡ್ಜಿಂಗ್‌ನಲ್ಲಿ ರೆಡ್ ಕಲರ್ ಆಕ್ಸೆಂಟ್ಸ್ ಜೊತೆ ಪಾದಾರ್ಪಣೆ ಮಾಡಿತು.
ಈ ಬ್ರ್ಯಾಂಡ್ ಈಗಾಗಲೇ ತನ್ನ ಹೆಕ್ಟರ್, ಗ್ಲೋಸ್ಟರ್ ಮತ್ತು ಆಸ್ಟರ್ ಮಾದರಿಗಳ ಬ್ಲಾಕ್‌ಸ್ಟಾರ್ಮ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಎಂಜಿ ಕಾಮೆಟ್ ಇವಿ, ಎಂಜಿ ಗ್ಲೋಸ್ಟರ್, ಎಂಜಿ ಆಸ್ಟರ್ ಮತ್ತು ಎಂಜಿ ಹೆಕ್ಟರ್ ನಂತರ ಬ್ಲಾಕ್‌ಸ್ಟಾರ್ಮ್ ಎಡಿಷನ್ ಕ್ಲಬ್‌ಗೆ ಸೇರುತ್ತಿರುವ ಎಂಜಿ ಇಂಡಿಯಾ ಶ್ರೇಣಿಯ ನಾಲ್ಕನೇ ಕಾರು ಆಗಿದೆ. ಆದರೂ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಬ್ಲ್ಯಾಕ್‌ಸ್ಟಾರ್ಮ್ ವಿಶೇಷ ಆವೃತ್ತಿಯನ್ನು ನೀಡುತ್ತಿರುವುದು ಇದೇ ಮೊದಲು.
ಬುಕಿಂಗ್ಸ್: ಕಂಪನಿಯು ಈ 'MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್ ಆವೃತ್ತಿ'ಗಾಗಿ ಬುಕಿಂಗ್ಸ್ ಪ್ರಾರಂಭಿಸಿದೆ. ಗ್ರಾಹಕರು 11 ಸಾವಿರ ರೂ ಟೋಕನ್ ಅಮೌಂಟ್ ಅನ್ನು ಪಾವತಿಸುವ ಮೂಲಕ ಇದನ್ನು ಬುಕ್ ಮಾಡಬಹುದು.
ಇಂಟೀರಿಯರ್: ಈ ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಆವೃತ್ತಿಯ ಇಂಟಿರಿಯರ್ ವಿಷಯಕ್ಕೆ ಬಂದರೆ, ಇದು ಆಲ್-ಬ್ಲ್ಯಾಕ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಫುಲ್ ರೆಡ್ ಕಲರ್ ಸ್ಟಿಚಿಂಗ್ ಮತ್ತು ಮುಂಭಾಗದ ಹೆಡ್‌ರೆಸ್ಟ್‌ಗಳಲ್ಲಿ 'ಬ್ಲ್ಯಾಕ್‌ಸ್ಟಾರ್ಮ್' ಬ್ಯಾಡ್ಜ್‌ಗಳೊಂದಿಗೆ ಬರುತ್ತದೆ. ಇದರರ್ಥ ಇದು ರೆಡ್ ಸ್ಟಿಚ್, ರೆಡ್ ಆಕ್ಸಿಂಟ್ಸ್ ಜೊತೆ ಆಲ್ ಬ್ಲ್ಯಾಕ್ ಥೀಮ್ ಫನಿಷಿಂಗ್ ಜೊತೆ ಎಂಟ್ರಿ ನೀಡುತ್ತದೆ. ಇದರ ಡ್ಯಾಶ್‌ಬೋರ್ಡ್ ಇನ್ನೂ ವೈಟ್ ಮತ್ತು ಗ್ರೇ ಕಲರ್ ಥೀಮ್‌ನಲ್ಲಿ ಬರುತ್ತದೆ. ಆದರೂ ಒಟ್ಟಾರೆ ಕ್ಯಾಬಿನ್ ಡಿಸೈನ್ ಸಾಮಾನ್ಯ ಕಾಮೆಟ್ ರೀತಿ ಇದೆ.
ಎಕ್ಸ್ಟೀರಿಯರ್: ಈ ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಸ್ಟಾರಿ ಬ್ಲ್ಯಾಕ್ ಎಕ್ಸ್ಟಿರಿಯರ್ ಶೇಡ್ ಜೊತೆ ಬರುತ್ತದೆ. ಇದು ಬಂಪರ್ ಮೇಲೆ ರೆಡ್ ಆ್ಯಕ್ಸಿಂಟ್ಸ್, ಸ್ಕಿಡ್ ಪ್ಲೇಟ್, ಸೈಡ್ ಕ್ಲಾಡಿಂಗ್, ಹುಡ್ ಮೇಲೆ 'ಮೋರಿಸ್ ಗ್ಯಾರೇಜಸ್' ಬ್ಯಾಡ್ಜಿಂಗ್ ಜೊತೆ ಸ್ಟಾರೀ ಬ್ಲ್ಯಾಕ್ ಎಕ್ಸ್ಟಿರಿಯರ್ ಶೇಡ್ ಹೊಂದಿದೆ. ಕಾಮೆಟ್ ಇವಿಯ ವಿಶೇಷ ಆವೃತ್ತಿಯಾಗಿ ಎದ್ದು ಕಾಣುವಂತೆ ಮಾಡಲು ಕಂಪನಿಯು ಫೆಂಡರ್‌ನಲ್ಲಿ 'ಬ್ಲ್ಯಾಕ್ ಸ್ಟಾರ್ಮ್' ಬ್ಯಾಡ್ಜ್ ಅನ್ನು ಸಹ ನೀಡಿದೆ.
ರಿಯರ್ ಡಿಸೈನ್: MG ಕಾಮೆಟ್ ಬ್ಲಾಕ್‌ಸ್ಟಾರ್ಮ್ ಕಾರಿನ ರಿಯರ್ ಡಿಸೈನ್ ಬಗ್ಗೆ ಹೇಳುವುದಾದರೆ, ಇದು ಕಾಮೆಟ್ ಬ್ಯಾಡ್ಜಿಂಗ್ ಮತ್ತು ಹಿಂಭಾಗದ ಬಂಪರ್‌ನಲ್ಲಿ ಕೆಲವು ರೀತಿಯ ಬಣ್ಣದ ಆ್ಯಕ್ಸಿಂಟ್ಸ್ ಒಳಗೊಂಡಂತೆ ಕೆಲವು ರೆಡ್ ಕಲರ್ ಎಲಿಮೆಂಟ್ಸ್ ಹೊಂದಿದೆ.