ಕರ್ನಾಟಕ

karnataka

ETV Bharat / technology

ಸೆಲೆಬ್ - ಬೈಟ್ ಹಗರಣ ಪತ್ತೆಹಚ್ಚಲು ಫೇಸ್ ರೆಕಗ್ನಿಷನ್ ತಂತ್ರಜ್ಞಾನಕ್ಕೆ ಮತ್ತೆ ಜೀವ ತುಂಬುತ್ತಿರುವ ಮೆಟಾ! - META FACIAL RECOGNITION TECHNOLOGY

Meta Revives Facial Recognition Technology: ‘ಸೆಲೆಬ್-ಬೈಟ್’ ಹಗರಣಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಮೆಟಾ ಫೇಸ್​ ರೆಕಗ್ನಿಷನ್ ತಂತ್ರಜ್ಞಾನವನ್ನು ಮರು ಪರಿಚಯಿಸುತ್ತಿದೆ.

FACIAL RECOGNITION TECHNOLOGY  CELEB BAIT SCAM ON FACEBOOK  CELEB BAIT SCAM  CELEB BAIT SCAM AND IMPERSONATION
ಫೇಸ್ ರೆಕಗ್ನಿಷನ್ ತಂತ್ರಜ್ಞಾನ (Meta)

By ETV Bharat Tech Team

Published : Oct 23, 2024, 7:15 AM IST

Updated : Oct 23, 2024, 8:06 AM IST

Meta Revives Facial Recognition Technology: ಸೆಲೆಬ್-ಬೈಟ್ ಜಾಹೀರಾತುಗಳಿಂದ ಜನರನ್ನು ರಕ್ಷಿಸಲು ಮೆಟಾ ತನ್ನ ಫೇಸ್​ ರೆಕಗ್ನಿಷನ್ ತಂತ್ರಜ್ಞಾನವನ್ನು ಮರಳಿ ತರುತ್ತಿದೆ. ಮೂರು ವರ್ಷಗಳ ಹಿಂದೆ ಗೌಪ್ಯತೆ ಮತ್ತು ನಿಯಂತ್ರಕ ಕಾಳಜಿಗಳ ಮೇಲೆ ಫೇಸ್‌ಬುಕ್‌ನಲ್ಲಿ ಫೇಸ್​ ರೆಕಗ್ನಿಷನ್ ಸಾಫ್ಟ್‌ವೇರ್ ನಿಷೇಧಿಸಲು ಕಂಪನಿಯು ನಿರ್ಧರಿಸಿತು. ಈಗ ವಂಚಕರು ಜನರನ್ನು ವಂಚಿಸಲು ವ್ಯಕ್ತಿಗಳ ಛಾಯಾಚಿತ್ರಗಳನ್ನು ಬಳಸುವ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಈಗ ಇದನ್ನು ಪರೀಕ್ಷೆಯಾಗಿ ಮರು ಪರಿಚಯಿಸಲಾಗುತ್ತಿದೆ.

ಈ ಯೋಜನೆಯನ್ನು ಸಾಮಾನ್ಯವಾಗಿ 'ಸೆಲೆಬ್-ಬೈಟ್' ಎಂದು ಕರೆಯಲಾಗುತ್ತದೆ. ಇದು ವಿಷಯ ರಚನೆಕಾರರು ಅಥವಾ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿರುವ ಕಾನೂನುಬದ್ಧ ಜಾಹೀರಾತಿನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಹಗರಣದ ಜಾಹೀರಾತುಗಳಲ್ಲಿ ತೊಡಗಿಸಿಕೊಳ್ಳಲು ಜನರನ್ನು ಆಕರ್ಷಿಸುತ್ತದೆ. ಇದು ಸ್ಕ್ಯಾಮ್ ವೆಬ್‌ಸೈಟ್‌ಗಳಿಗೆ ಕಾರಣವಾಗುತ್ತದೆ. ಇದರ ನಂತರ ವಂಚಕರು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಅಥವಾ ಹಣವನ್ನು ಕಳುಹಿಸಲು ಅವರನ್ನು ಕೇಳುತ್ತಾರೆ. ಅಷ್ಟೇ ಅಲ್ಲ ಅನೇಕ ರೀತಿಯ ವಂಚನೆಗಳಿಗೆ ಮತ್ತು ಮೋಸಗಳಿಗೆ ಇದು ಕಾರಣವಾಗುತ್ತದೆ.

ಸೆಲೆಬ್ರಿಟಿ-ಬೈಟ್ ಜಾಹೀರಾತುಗಳ ವಿರುದ್ಧ ರಕ್ಷಣೆ: ಜಾಹೀರಾತು ವಂಚನೆಯಾಗಿದೆ ಎಂದು ಮೆಟಾ ಶಂಕಿಸಿದರೆ, ವ್ಯವಸ್ಥೆಯು ಜಾಹೀರಾತಿನಲ್ಲಿರುವ ಮುಖಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿನ ಸಾರ್ವಜನಿಕ ವ್ಯಕ್ತಿಗಳ ಪ್ರೊಫೈಲ್ ಚಿತ್ರಗಳಿಗೆ ಹೋಲಿಸುತ್ತದೆ. ದೃಢೀಕರಿಸಿದ ಮೋಸದ ಜಾಹೀರಾತುಗಳನ್ನು ನಿರ್ಬಂಧಿಸಲಾಗುತ್ತದೆ ಮತ್ತು ಬಳಸಿದ ಯಾವುದೇ ಮುಖದ ಡೇಟಾವನ್ನು ತಕ್ಷಣವೇ ತೆಗೆದುಹಾಕಲಾಗುತ್ತದೆ.

ಸೆಲೆಬ್-ಬೈಟ್ ಸಣ್ಣ ಗುಂಪಿನೊಂದಿಗೆ ನಡೆಸಿದ ಆರಂಭಿಕ ಪರೀಕ್ಷೆಗಳು ಭರವಸೆಯ ಫಲಿತಾಂಶಗಳನ್ನು ತೋರಿಸಿವೆ ಎಂದು ಕಂಪನಿ ಹೇಳುತ್ತದೆ. ಈ ರಕ್ಷಣೆಯ ಕುರಿತು ಹೆಚ್ಚಿನ ಸಾರ್ವಜನಿಕ ವ್ಯಕ್ತಿಗಳಿಗೆ ತಿಳಿಸಲು ಮೆಟಾ ಯೋಜಿಸಿದೆ.

ತಪ್ಪು ಗುರುತಿನ ವಿರುದ್ಧ ರಕ್ಷಣೆ:ವಂಚಕರು ಸಾರ್ವಜನಿಕ ವ್ಯಕ್ತಿಗಳಂತೆ ನಟಿಸುವುದು ಮತ್ತು ಜನರನ್ನು ವಂಚಿಸಲು ನಕಲಿ ಖಾತೆಗಳನ್ನು ಸೃಷ್ಟಿಸುವುದನ್ನು ಕಂಪನಿಯು ಗಮನಿಸಿದೆ. ಇದು ಪ್ರಸ್ತುತ ಈ ಖಾತೆಗಳನ್ನು ಗುರುತಿಸಲು ಗುರುತಿನ ವ್ಯವಸ್ಥೆಗಳು ಮತ್ತು ಬಳಕೆದಾರ ವರದಿಗಳನ್ನು ಬಳಸುತ್ತದೆ ಮತ್ತು ಗುರುತಿಸುವಿಕೆಯನ್ನು ಸುಧಾರಿಸಲು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಅಳವಡಿಸಲು ಪರಿಗಣಿಸುತ್ತಿದೆ. ಮೆಟಾ ಶೀಘ್ರದಲ್ಲೇ ಈ ತಂತ್ರಜ್ಞಾನ ಸೇರಿದಂತೆ ಇತರ ಹೊಸ ವಿಧಾನಗಳನ್ನು ಪರೀಕ್ಷಿಸಲು ಆಶಿಸುತ್ತಿದೆ.

ಖಾತೆಗೆ ಪ್ರವೇಶವನ್ನು ಮರುಪಡೆಯಲು ಸಹಾಯ: ಪಾಸ್​ವರ್ಡ್​ ಮರೆತಾಗ ಜನರು ತಮ್ಮ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ಎಂಟ್ರಿ ಕೊಡುವುದನ್ನು ಕಳೆದುಕೊಳ್ಳುತ್ತಾರೆ. ಆಗ ನಿಮ್ಮ ಖಾತೆ ಮರಳಿ ಪಡೆಯಲು ಮೆಟಾಗೆ ಫೇಸ್​ ರೆಕಗ್ನಿಷನ್ ಅಗತ್ಯವಿದೆ. ಕಂಪನಿಯು ಈಗ ಗುರುತಿನ ಪರಿಶೀಲನೆಗಾಗಿ ವಿಡಿಯೋ ಸೆಲ್ಫಿಗಳನ್ನು ಪರೀಕ್ಷಿಸುತ್ತಿದೆ.

ಬಳಕೆದಾರರು ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಅವರ ಪ್ರೊಫೈಲ್ ಫೋಟೋಗಳಿಗೆ ಹೋಲಿಸಿದ ವಿಡಿಯೋ ಸೆಲ್ಫಿಯನ್ನು ಅಪ್ಲೋಡ್​​ ಮಾಡುತ್ತಾರೆ. ವಿಡಿಯೋವನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಸುರಕ್ಷಿತವಾಗಿ ಸಂಗ್ರಹಿಸಲಾಗುವುದ ಮತ್ತು ಹೋಲಿಕೆಯ ನಂತರ ಡಿಲಿಟ್​ ಮಾಡಲಾಗುವುದು ಎಂದು ಕಂಪನಿ ಹೇಳುತ್ತದೆ. ಸಾಂಪ್ರದಾಯಿಕ ಡಾಕ್ಯುಮೆಂಟ್ ಆಧಾರಿತ ಪರಿಶೀಲನೆಗಿಂತ ಹ್ಯಾಕರ್‌ಗಳ ವಿರುದ್ಧ ಈ ವಿಧಾನವು ವೇಗವಾಗಿದೆ, ಸುಲಭವಾಗಿದೆ ಮತ್ತು ಹೆಚ್ಚು ಸುರಕ್ಷಿತವಾಗಿದೆ ಎಂದು ಮೆಟಾ ಹೇಳಿದೆ.

ಓದಿ:ಯರೋಪ್​ನಲ್ಲಿ ವಿಫಲತೆ ಹಿನ್ನೆಲೆ: ಆಯ್ದ ದೇಶಗಳಲ್ಲಿ ಪ್ರೀಮಿಯಂ ಲೈಟ್​ ಸಬ್​ಸ್ಕ್ರಿಪ್ಷನ್ ಪರೀಕ್ಷಿಸುತ್ತಿರುವ ಯೂಟ್ಯೂಬ್​

Last Updated : Oct 23, 2024, 8:06 AM IST

ABOUT THE AUTHOR

...view details