Mahindra Veero LCV Launched:ದೇಶದ ಪ್ರಮುಖ ಆಟೋಮೊಬೈಲ್ ತಯಾರಿಕಾ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ತನ್ನ ಹೊಸ ವಾಣಿಜ್ಯ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. LCV ವಿಭಾಗದಲ್ಲಿ ಮಹೀಂದ್ರಾ ವೀರೊ 3.5 ಟನ್‌ಗಳ ಅಡಿಯಲ್ಲಿ ಲಘು ವಾಣಿಜ್ಯ ವಾಹನವನ್ನು ಪರಿಚಯಿಸಿದೆ. ಕಂಪನಿಯು ಈ ವೀರೊ ಲಘು ವಾಣಿಜ್ಯ ವಾಹನವನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ, ವೈಶಿಷ್ಟ್ಯಗಳು, ಇಂಜಿನ್ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ..
ಮಹೀಂದ್ರ Viro LCV ವೈಶಿಷ್ಟ್ಯಗಳು:
- ಡ್ರೈವರ್ ಸೀಟ್ ಸ್ಲೈಡ್ ಮತ್ತು ರಿಕ್ಲೈನ್
- ಫ್ಲಾಟ್ ಫೋಲ್ಡ್ ಸೀಟ್ಸ್
- ಡೋರ್ ಆರ್ಮ್ ರೆಸ್ಟ್ಗಳು
- ಮೊಬೈಲ್ ಡಾಕ್
- ಪಿಯಾನೋ ಬ್ಲ್ಯಾಕ್ ಕ್ಲಸ್ಟರ್ ಬೆಜೆಲ್
- ಡ್ರೈವರ್ ಏರ್ಬ್ಯಾಗ್
- ಹೀಟರ್ ಆ್ಯಂಡ್ ಎಸಿ
- ಸ್ಪೀಡ್ ಚಾರ್ಜಿಂಗ್ USB C- ಟೈಪ್
- 26.03 ಸೆಂ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
- ರಿವರ್ಸ್ ಪಾರ್ಕಿಂಗ್
- ಕ್ಯಾಮರಾ
- ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್
- ಪವರ್ಡ್ ವಿಂಡೋಸ್
- ಡೀಸೆಲ್ ವರ್ಸನ್ ಲೀಟರ್ಗೆ 18.4 ಕಿ.ಮೀ. ಮೈಲೇಜ್
- CNG ರೂಪಾಂತರಕ್ಕಾಗಿ 19.2 kmpl ಮೈಲೇಜ್
- ಬೆಲೆ: ರೂ. 7.99 ಲಕ್ಷದಿಂದ ಆರಂಭ
ಮಹೀಂದ್ರ ವೀರೋ LCV ಎಂಜಿನ್: ಕಂಪನಿಯು ಮಹೀಂದ್ರಾ ವೀರೊವನ್ನು ಡೀಸೆಲ್ ಮತ್ತು CNG ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಇದು 1.5-ಲೀಟರ್ mDI ಡೀಸೆಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು 59.7 kW ಪವರ್ ಮತ್ತು 210 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ಯೊಂದಿಗೆ ಲಭ್ಯವಿರುವ ಈ ಎಂಜಿನ್ 67.2 kW ಪವರ್ ಮತ್ತು 210 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.