ಹೈದರಾಬಾದ್: ಚಂದ್ರಯಾನ-3 ಸಕ್ಸಸ್ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜೊತೆಗೆ ವಿಶ್ವದಾದ್ಯಂತ ಭಾರತಕ್ಕೆ ಕೀರ್ತಿ ತಂದಿದೆ. ಇದೀಗ ಚಂದ್ರಯಾಣ 3ರಿಂದ ಪಡೆದ ದತ್ತಾಂಶದಿಂದ ಹೊಸ ವರದಿಯೊಂದು ಬಹಿರಂಗವಾಗಿದೆ. ವಿಜ್ಞಾನಿಗಳ ಪ್ರಕಾರ, ಚಂದ್ರನ ದಕ್ಷಿಣ ಧ್ರುವವು ದ್ರವ ಶಿಲಾಪಾಕದಿಂದ ಆವೃತವಾಗಿದೆ. ಅಂದರೆ ಚಂದ್ರನ ಒಳಗೆ ಮತ್ತು ಹೊರಗೆ ಲಾವಾ ಇದ್ದು, ಇದನ್ನು ಶಿಲಾಪಾಕ ಸಾಗರ ಎಂದೂ ಕರೆಯುತ್ತಾರೆ. ನೇಚರ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನಾ ವರದಿ ಪ್ರಕಟಗೊಂಡಿದ್ದು, ಚಂದ್ರಯಾನ-3 ಡೇಟಾ ಬಗ್ಗೆ ಮಾಹಿತಿ ನೀಡಲಾಗಿದೆ.
ಚಂದ್ರನ ಸಂಪೂರ್ಣ ಮೇಲ್ಮೈ ಒಂದು ಕಾಲದಲ್ಲಿ ಶಿಲಾಪಾಕದಿಂದ ಆವೃತವಾಗಿತ್ತು ಎಂಬ ಮಾಹಿತಿ ಚಂದ್ರಯಾನ-3 ಡೇಟಾ ಸುಳಿವು ನೀಡುತ್ತದೆ ಎಂದು ಹೊಸ ವಿಶ್ಲೇಷಣೆ ಸೂಚಿಸುತ್ತದೆ. 4.5 ಶತಕೋಟಿ ವರ್ಷಗಳ ಹಿಂದೆ ಚಂದ್ರ ರೂಪಗೊಂಡಾಗ, ಚಂದ್ರ ತಣ್ಣಗಾಗಲು ಪ್ರಾರಂಭಿಸಿತು ಮತ್ತು ಫೆರೋನ್ ಅನರ್ಥೋಸೈಟ್ ಎಂಬ ಲಘು ಖನಿಜವು ಮೇಲ್ಮೈಯಲ್ಲಿ ತೇಲಲು ಪ್ರಾರಂಭಿಸಿತು ಎಂದು ವಿಜ್ಞಾನಿಗಳು ನಂಬುತ್ತಾರೆ. ಈ ಫೆರೋನ್ ಅನರ್ಥೋಸೈಟ್ ಅಥವಾ ಕರಗಿದ ಬಂಡೆ ಚಂದ್ರನ ಮೇಲ್ಮೈಯನ್ನು ರೂಪಿಸಿತು. ಚಂದ್ರಯಾನ-3 ಮಿಷನ್‌ನ ಭಾಗವಾಗಿ, ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬಂದಿಳಿದ ಪ್ರಗ್ಯಾನ್ ರೋವರ್, 100 ಮೀಟರ್ ಟ್ರ್ಯಾಕ್‌ನಲ್ಲಿ ವಿವಿಧ ಸ್ಥಳಗಳಲ್ಲಿ ತನ್ನ ಓಡಾಟ ನಡೆಸಿತು. ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಲಾಯಿತು.