BSNL Prepaid Plan:ಎಷ್ಟೇ ಖಾಸಗಿ ಸಂಸ್ಥೆಗಳು ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟರೂ ಸಾರ್ವಜನಿಕ ವಲಯದ ಬಿಎಸ್‌ಎನ್‌ಎಲ್ ಜನಪ್ರಿಯತೆ ಕುಸಿದಿಲ್ಲ. ಯಾವಾಗಲೂ ಖಾಸಗಿ ಕಂಪನಿಗಳ ವಿರುದ್ಧ ಆಕ್ರಮಣಕಾರಿಯಾಗಿ ಸ್ಪರ್ಧೆ ನಡೆಸುತ್ತಿರುತ್ತದೆ. BSNL ತನ್ನ 4G ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸಲು ಹೊಸ ಆಲೋಚನೆಗಳೊಂದಿಗೆ ಕಾರ್ಯನಿರತವಾಗಿದೆ. ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಕ್ರಮದಲ್ಲಿ, ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಇತ್ತೀಚೆಗೆ ಹೊಸ ಯೋಜನೆ ತಂದಿದೆ.
ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ: BSNL ಗ್ರಾಹಕರಿಗೆ ಈ ಪ್ಲಾನ್ ಬೆಸ್ಟ್ ಚಾಯ್ಸ್! - BSNL New Prepaid Plan - BSNL NEW PREPAID PLAN
BSNL Prepaid Plan: BSNL ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಯೋಜನೆ ತಂದಿದೆ. 60 ದಿನಗಳ ವ್ಯಾಲಿಡಿಟಿಯೊಂದಿಗೆ ಈ ಹೊಸ ರೀಚಾರ್ಜ್ ಪ್ಲಾನ್ ಗ್ರಾಹಕರನ್ನು ಸೆಳೆಯುವ ಸಾಧ್ಯತೆಯಿದೆ.
ಬಿಎಸ್‌ಎನ್‌ಎಲ್ (ANI)
Published : Sep 30, 2024, 1:47 PM IST
BSNL ಇತ್ತೀಚಿನ ರೀಚಾರ್ಜ್ ಯೋಜನೆಯ ವಿವರಗಳು:
- BSNL ತಂದ 345 ರೂ ರೀಚಾರ್ಜ್ ಯೋಜನೆಯು 60 ದಿನಗಳ ವ್ಯಾಲಿಡಿಟಿ ಹೊಂದಿದೆ.
- ಈ ಪ್ಯಾಕ್ ದಿನಕ್ಕೆ 1GB ಡೇಟಾ ಮತ್ತು ದಿನಕ್ಕೆ 100 SMS ಒಳಗೊಂಡಿದೆ.
- ನೀವು ಅನಿಯಮಿತ ಕರೆಯನ್ನು ಪಡೆಯಬಹುದು.
- BSNL ಟ್ಯೂನ್ಸ್ ಮತ್ತು ಹಾರ್ಡಿ ಗೇಮ್ಸ್‌ನಂತಹ ಸೌಲಭ್ಯಗಳನ್ನು ಒಳಗೊಂಡಿಲ್ಲ.
- ಎಲ್ಲ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ಸುಂಕ ಹೆಚ್ಚಿಸಿವೆ. BSNL ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ.
- ಪರಿಣಾಮವಾಗಿ ಅನೇಕ ಬಳಕೆದಾರರು BSNL ಯೋಜನೆಗಳತ್ತ ಒಲವು ತೋರುತ್ತಿದ್ದಾರೆ.
- ಇದರ ಲಾಭ ಪಡೆದು BSNL ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ.
- BSNL ತಂದಿರುವ ಈ ಹೊಸ ರೀಚಾರ್ಜ್ ಯೋಜನೆಯಿಂದ ಗ್ರಾಹಕರು ಹೆಚ್ಚಾಗುವ ಸಾಧ್ಯತೆ ಇದೆ.