LinkedIn Fined: ಜನಪ್ರಿಯ ವೃತ್ತಿಪರ ನೆಟ್‌ವರ್ಕಿಂಗ್ ವೇದಿಕೆಯಾಗಿರುವ ಲಿಂಕ್ಡ್‌ಇನ್‌ಗೆ ಯುರೋಪಿಯನ್ ಯೂನಿಯನ್ ನಿಯಂತ್ರಕರು ಭಾರೀ ದಂಡ ವಿಧಿಸಿದ್ದಾರೆ. ಡೇಟಾ ಗೌಪ್ಯತೆ ನಿಯಮವನ್ನು ಉಲ್ಲಂಘಿಸಿದ್ದಾಗಿ ಲಿಂಕ್ಡ್‌ಇನ್‌ಗೆ 335 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ.
ಜಾಹೀರಾತು ವ್ಯವಹಾರಕ್ಕೆ ಸಂಬಂಧಿಸಿದ ಗೌಪ್ಯತೆ ಉಲ್ಲಂಘನೆ ಕುರಿತು ಐರಿಶ್ ಡೇಟಾ ಪ್ರೊಟೆಕ್ಷನ್ ಕಮಿಷನ್ (IDPC) ಯುರೋಪಿಯನ್ ಒಕ್ಕೂಟದ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (GDPR) ಅಡಿ ಪ್ರಕಟಣೆ ಬಿಡುಗಡೆ ಮಾಡಿದೆ.
ಜಾಹೀರಾತು ಉದ್ದೇಶಗಳಿಗಾಗಿ ವೈಯಕ್ತಿಕ ಡೇಟಾ ಸಂಸ್ಕರಣೆಯ 'ಕಾನೂನುಬದ್ಧತೆ, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆ' ಮೇಲಿನ ಕಾಳಜಿಗಳ ಕುರಿತು ಐರಿಶ್ ಡೇಟಾ ಪ್ರೊಟೆಕ್ಷನ್ ಕಮಿಷನ್ರಗಳಾದ ಡಾ ಡೆಸ್ ಹೊಗನ್ ಮತ್ತು ಡೇಲ್ ಸುಂದರ್‌ಲ್ಯಾಂಡ್ ಅವರು ಮೈಕ್ರೋಸಾಫ್ಟ್ - ಮಾಲೀಕತ್ವದ ಲಿಂಕ್ಡ್‌ಇನ್ ಅನ್ನು ಖಂಡಿಸಿತು.
ಈ ನಿರ್ಧಾರವು ವಾಗ್ದಂಡನೆ, ಅದರ ಸಂಸ್ಕರಣೆಯನ್ನು ಅನುಸರಣೆಗೆ ತರಲು ಲಿಂಕ್ಡ್‌ಇನ್‌ಗೆ ಆದೇಶ ಮತ್ತು ಒಟ್ಟು 310 ಮಿಲಿಯನ್ ಯುರೋಗಳಷ್ಟು ಆಡಳಿತಾತ್ಮಕ ದಂಡವನ್ನು ವಿಧಿಸಲಾಗುತ್ತಿದೆ ಎಂದು ಐರಿಶ್ ಡೇಟಾ ಪ್ರೊಟೆಕ್ಷನ್ ಕಮಿಷನ್ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.